ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ಕೋವಿಡ್ 2ನೇ ಅಲೆಯಂತಹ ವಿನಾಶಕಾರಿ ಅಲೆಯ ಸಾಧ್ಯತೆ ಇಲ್ಲ: ತಜ್ಞರು

|
Google Oneindia Kannada News

ನವದೆಹಲಿ, ಅಕ್ಟೋಬರ್ 23:ದೇಶದಲ್ಲಿ ದೊಡ್ಡ ಕೋವಿಡ್ ಅಲೆ ಬರುವ ಸಾಧ್ಯತೆ ಇಲ್ಲ ಎಂದು ತಜ್ಞರು ಹೇಳಿದ್ದಾರೆ.

ದೇಶದಲ್ಲಿ 100 ಕೋಟಿಗೂ ಅಧಿಕ ಡೋಸ್ ಕೋವಿಡ್ ಲಸಿಕೆ ನೀಡಿಕೆ ಸಾಧನೆ ನಂತರ ಹೇಳಿಕೆ ನೀಡಿರುವ ವೈರಾಣು ಶಾಸ್ತ್ರಜ್ಞ ಶಾಹೀದ್ ಜಮೀಲ್, ಲಸಿಕೆ ಪ್ರಮಾಣದಲ್ಲಿ ಗಮನಾರ್ಹ ರೀತಿಯಲ್ಲಿ ಪ್ರಗತಿಯಾಗಿದೆ ಆದರೆ, ಇದು ಮತ್ತಷ್ಟು ಹೆಚ್ಚಾಗಬೇಕಾದ ಅಗತ್ಯವಿದೆ ಎಂದಿದ್ದಾರೆ.

ಕೋವಿಡ್-2ನೇ ಅಲೆಯಂತಹ ವಿನಾಶಕಾರಿ ಅಲೆ ದೇಶದಲ್ಲಿ ಬರುವ ಸಾಧ್ಯತೆಯಿಲ್ಲ, ಆದರೆ, ಪ್ರಕರಣಗಳ ಸಂಖ್ಯೆ ಕಡಿಮೆಯಾದ ಮಾತ್ರಕ್ಕೆ ಸಾಂಕ್ರಾಮಿಕ ಈಗ ಅಂತ್ಯವಾಯಿತು ಅಂತಾ ಭಾವಿಸುವುದಕ್ಕೆ ಅರ್ಥವಿಲ್ಲ ಎಂದು ಅನೇಕ ತಜ್ಞರು ಹೇಳಿದ್ದಾರೆ.

Coronavirus

ದೀಪಾವಳಿ ಹಬ್ಬ ಮುಂದಿರುವಂತೆ ಪ್ರಕರಣಗಳ ಸಂಖ್ಯೆ ಹೆಚ್ಚಳದ ಮುನ್ನೆಚ್ಚರಿಕೆಯೊಂದಿಗೆ ಭರವಸೆ ನೀಡಿರುವ ತಜ್ಞರು, ಕೋವಿಡ್ ಗ್ರಾಫ್ ಇಳಿಕೆ ಕೇವಲ ಚಿತ್ರದ ಭಾಗವಾಗಿದೆ. ಮರಣ ಪ್ರಮಾಣದಂತಹ ಅಂಶಗಳನ್ನು ನೋಡಿದರೆ ದೊಡ್ಡ ಪ್ರಮಾಣದಲ್ಲಿ ಲಸಿಕೆ ನೀಡುವಿಕೆಯ ಅಗತ್ಯವಿದೆ. ಉದಾಹರಣೆಗೆ ಇಂಗ್ಲೆಂಡ್ ನಂತರ ರಾಷ್ಟ್ರಗಳಲ್ಲಿ ಪ್ರಕರಣಗಳ ಸಂಖ್ಯೆಯಲ್ಲಿ ಮತ್ತೆ ಏರಿಕೆಯಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಉದಾಹರಣೆಗೆ ಲಸಿಕೆ ಪಡೆದ ಎಷ್ಟು ಜನರಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದೆ ಅಥವಾ ಅದಕ್ಕೂ ಮುಂಚಿನ ಸೋಂಕು ಸೇರಿದಂತೆ ಹಲವಾರು ಅಂಶಗಳು ತಮಗೆ ತಿಳಿದಿಲ್ಲ, ಕೋವಿಡ್ -19 ಯಾವಾಗ ನಿರ್ಮೂಲನೆಯಾಗುತ್ತದೆ ಎಂಬುದು ಯಾರಿಗೂ ಗೊತ್ತಿಲ್ಲ. ಇನ್ನೂ ಅದು ಹರಡದಂತೆ ಮುಂಜಾಗ್ರತೆ ವಹಿಸಬೇಕಾದ ಅಗತ್ಯವಿದೆ ಎಂದು ಬಜಣಿ ತಿಳಿಸಿದ್ದಾರೆ.

"ಕೋವಿಡ್ -19 ದೇಶಕ್ಕೆ ಭವಿಷ್ಯದಲ್ಲಿ ಮಹತ್ವದ ಬೆದರಿಕೆಯನ್ನುಂಟುಮಾಡುತ್ತದೆಯೇ? ಎಂಬುದನ್ನು ನಿರ್ಧರಿಸಲು ನಾವು ಇನ್ನೂ ಎರಡು ತಿಂಗಳು ಕಾಯಬೇಕು ಎಂದು ನಾನು ನಂಬುತ್ತೇನೆ ಎಂದು ವಾಷಿಂಗ್ಟನ್‌ನ ಸೆಂಟರ್ ಫಾರ್ ಡಿಸೀಸ್ ಡೈನಾಮಿಕ್ಸ್, ಎಕನಾಮಿಕ್ಸ್ ಅಂಡ್ ಪಾಲಿಸಿಯ ನಿರ್ದೇಶಕ ಲಕ್ಷ್ಮಿನಾರಾಯಣ ಅವರು ಪಿಟಿಐ ಸುದ್ದಿಸಂಸ್ಥೆಗೆ ಇಮೇಲ್ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಇನ್ನೂ ಸಾಂಕ್ರಾಮಿಕ ಅಂತ್ಯಗೊಂಡ ಹಂತದಲ್ಲಿರುವುದಾಗಿ ನಾನು ಖಚಿತಪಡಿಸುವುದಿಲ್ಲ, 100 ಕೋಟಿ ಡೋಸ್ ಲಸಿಕೆ ನೀಡಿಕೆಯಲ್ಲಿ ಸಾಧನೆಗಾಗಿ ಸಂಭ್ರಮಿಸುತ್ತಿದ್ದು,ಇನ್ನೂ ಕೆಲವು ದೂರ ತಲುಪಬೇಕಾಗಿದೆ. ಸಾಂಕ್ರಾಮಿಕ ಅಂತ್ಯದತ್ತ ಸಾಗುತ್ತಿದ್ದೇವೆ. ಆದರೆ, ಇನ್ನೂ ನಿಯಂತ್ರಣವಾಗಿಲ್ಲ ಎಂದು ಹರಿಯಾಣದ ಅಶೋಕ ವಿಶ್ವವಿದ್ಯಾನಿಲಯದ ಅತಿಥಿ ಪ್ರೊಫೆಸರ್ ಜಮೀಲ್ ಹೇಳಿದ್ದಾರೆ.

ದೇಶದ ಕೆಲವು ಭಾಗಗಳಲ್ಲಿ ಸಾಂಕ್ರಾಮಿಕ ಅಂತ್ಯದ ಸನ್ನಿಹದಲ್ಲಿರುವ ಸಾಧ್ಯತೆಯಿದೆ, ಆದರೆ ಇದನ್ನು ದೃಢೀಕರಿಸಲು ಅಗತ್ಯವಾದ ದತ್ತಾಂಶಗಳು ಸುಲಭವಾಗಿ ಲಭ್ಯವಿಲ್ಲ ಎಂದು ಭಾರತದ ಕೋವಿಡ್ ಗ್ರಾಫ್ ಅನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಯುಕೆಯ ಮಿಡ್ಲ್‌ಸೆಕ್ಸ್ ವಿಶ್ವವಿದ್ಯಾಲಯದ ಗಣಿತದ ಹಿರಿಯ ಉಪನ್ಯಾಸಕ ಮುರಾದ್ ಬಣಜಿ ಹೇಳುತ್ತಾರೆ.

ಭಾರತವು ಗುರುವಾರ ಬೆಳಗ್ಗೆ ದಾಖಲೆಯ 100 ಕೋಟಿ ಡೋಸ್ ಲಸಿಕೆ ನೀಡುವ ಮುಖಾಂತರ ಹೊಸ ಮೈಲಿಗಲ್ಲಿಗೆ ಸಾಕ್ಷಿಯಾಗಿದ್ದು, ಲಸಿಕೆ ಅಭಿಯಾನ ಆರಂಭವಾಗ 279 ದಿನಗಳಲ್ಲಿ ಭಾರತ 100 ಕೋಟಿ ಡೋಸ್ ಲಸಿಕೆ ಸಾಧನೆ ಮಾಡಿದಂತಾಗಿದೆ. ಈ ನಡುವೆ ಹೆಚ್ಚು ಲಸಿಕೆ ನೀಡಿದ ರಾಜ್ಯಗಳ ಪೈಕಿ ಕರ್ನಾಟಕಕ್ಕೂ ಸ್ಥಾನ ಸಿಕ್ಕಿದೆ.

ಮಹಾಮಾರಿ ಕೊರೋನಾ ವೈಸರ್ ವಿರುದ್ಧದ ಹೋರಾಟದ ನಿಟ್ಟಿನಲ್ಲಿ ಇದೇ ವರ್ಷದ ಜನವರಿ 16ರಂದು ದೇಶದಾದ್ಯಂತ ಕೋವಿಡ್ ಲಸಿಕೆ ಅಭಿಯಾನ ಆರಂಭಿಸಲಾಗಿತ್ತು. ಅತ್ಯಂತ ಅಲ್ಪ ಸಮಯದಲ್ಲಿ ಭಾರವತು ಶತಕೋಟಿ ಸಂಖ್ಯೆ ದಾಟಿರುವುದು, ಕೋವಿಡ್ ವಿರುದ್ಧದ ಹೋರಾಟಕ್ಕೆ ದೇಶದ ಜನರು ಹಾಗೂ ಸರ್ಕಾರ ತೋರಿಸಿರುವ ಭದ್ಧತೆಗೆ ಸಾಕ್ಷಿಯಾಗಿದೆ.

ಭಾರತವು 100 ಕೋಟಿ ಡೋಸ್ ದಾಟುತ್ತಿರುವ ವಿಶ್ವದ 2ನೇ ರಾಷ್ಟ್ರವಾಗಿದೆ. ಇದಕ್ಕೂ ಮೊದಲು ಚೀನಾ ಈ ಸಾಧನೆ ಮಾಡಿದ್ದಾಗಿ ಹೇಳಿಕೊಂಡಿತ್ತು.

ಭಾರತವು ಲಸಿಕೆಗೆ ಅರ್ಹವಿರುವ ಒಟ್ಟಾರೆ ಜನಸಂಖ್ಯೆ ಪೈಕಿ ಶೇ.75ರಷ್ಟು ಮಂದಿಗೆ ಕನಿಷ್ಠ ಒಂದು ಡೋಸ್ ಲಸಿಕೆ ನೀಡಿದೆ ಜೊತೆಗೆ ಶೇ.31ರಷ್ಟು ಮಂದಿಗೆ ಎರಡೂ ಡೋಸ್ ಗಳನ್ನು ನೀಡಲಾಗಿದೆ. ಒಟ್ಟಾರೆ ಲಸಿಕೆಗೆ ಅರ್ಹರಾಗಿರುವವರಲ್ಲಿ ಶೇ.93ರಷ್ಟು ಜನರಿಗೆ ಲಸಿಕೆ ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.

ಕರ್ನಾಟಕದಲ್ಲಿ ಅಕ್ಟೋಬರ್ ತಿಂಗಳಿನಲ್ಲಿ ಮೂರನೇ ಅಲೆ ತೀವ್ರ ಸ್ವರೂಪ ಪಡೆಯುವುದು ಬಹುತೇಕ ಖಚಿತ ಎಂದು ಹೇಳಲಾಗಿತ್ತು.
ಕರ್ನಾಟಕ ಹಾಗೂ ಕೇರಳದಲ್ಲಿ ಒಂದೇ ಸಮಯದಲ್ಲಿ ಎರಡನೇ ಅಲೆ (ಮೇ ಮೊದಲ ವಾರ) ಉತ್ತುಂಗಕ್ಕೆ ತಲುಪಿತ್ತು. ಕೇರಳದಲ್ಲಿ ಕರ್ನಾಟಕಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಕೊರೊನಾ ಲಸಿಕೆ ನೀಡಲಾಗಿದೆ. ಸದ್ಯದ ಮಟ್ಟಿಗೆ ರಾಜ್ಯದಲ್ಲೂ ಕೊರೊನಾ ಪ್ರಮಾಣ ಕಡಿಮೆ ಇದೆ.

English summary
India is unlikely to see a Covid wave like the devastating second one unless there is a new immune escaping variant but the lower number of cases does not necessarily mean the pandemic is now endemic, several experts said on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X