ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿಮಾಲಯದಲ್ಲಿ ಮಾಡರ್ನ್ ಸಂಜೀವಿನಿ ಸಸ್ಯ ಪತ್ತೆ

By Mahesh
|
Google Oneindia Kannada News

ಬೆಂಗಳೂರು, ಆ. 26: ಹಿಮಾಲಯದ ತಪ್ಪಲಿನಲ್ಲಿ ಅನೇಕ ಅಪರೂಪದ ಸಸ್ಯ ವೈವಿಧ್ಯಗಳನ್ನು ಕಾಣಬಹುದಾಗಿದೆ. ಅದರಲ್ಲೂ ಸಮುದ್ರಮಟ್ಟದಿಂದ ಅತಿ ಎತ್ತರದ ತಂಪು ವಾತಾವರಣದಲ್ಲಿ ಬೆಳೆಯುವ ರೋಡಿಯೊಲಾ(Rhodiola) ಸಸ್ಯ ಪ್ರಬೇಧ ಮೇಲೆ ವಿಜ್ಞಾನಿಗಳಿಗೆ ಎಲ್ಲಿಲ್ಲದ ಆಸಕ್ತಿ. ರಾಮಾಯಣ ಕಾಲದ ಪೌರಾಣಿಕ ಸಂಜೀವಿನಿ ಸಸ್ಯವೇ ರೋಡಿಯೊಲಾ ಎಂದು ಸಂಶೋಧಕರು ಸಾಬೀತುಪಡಿಸಲು ಹೊರಟ್ಟಿದ್ದಾರೆ.

ಸಂಜೀವಿನಿ ಸಸ್ಯಕ್ಕಾಗಿ ಅನೇಕ ಕಡೆಗಳಲ್ಲಿ ಹುಡುಕಾಟ ನಿರಂತರವಾಗಿ ನಡೆದಿತ್ತು. ರಾಮ-ರಾವಣ ಸಮರದಲ್ಲಿ ಪ್ರಜ್ಞೆ ತಪ್ಪಿದ್ದ ಶ್ರೀರಾಮಚಂದ್ರನ ಸೋದರ ಲಕ್ಷ್ಮಣನಿಗೆ ಪುನರ್ಜೀವ ನೀಡಿದ ಸಂಜೀವಿನಿ ಸಸ್ಯ ಹಿಮಾಲಯದ ತಪ್ಪಲಿನಲ್ಲಿ ಇಂದಿಗೂ ಲಭ್ಯವಿದೆ ಎಂಬ ಕುರುಹನ್ನು ವಿಜ್ಞಾನಿಗಳು ನೀಡಿದ್ದಾರೆ.

ಹನುಮಂತ ಈ ಸಸ್ಯವನ್ನು ಎಲ್ಲಿಂದ ತಂದ ಲಕ್ಷ್ಮಣನಿಗೆ ಪ್ರಜ್ಞೆ ಬಂದ ಮೇಲೆ ಸಸ್ಯ ಇದ್ದ ಪರ್ವತವನ್ನು ಎಲ್ಲಿಗೆ ಎಸೆದ ಎಂಬುದರ ಬಗ್ಗೆ ಚರ್ಚೆ ನಡೆಯುತ್ತಲೇ ಇದೆ.

ಸಮುದ್ರಮಟ್ಟದಿಂದ ಹತ್ತಾರು ಸಾವಿರ ಅಡಿ ಎತ್ತರದ ಪ್ರದೇಶದಲ್ಲಿ ಆಮ್ಲಜನಕ ಕೊರತೆಯಿಂದ ಉಸಿರಾಡುವುದೇ ಕಷ್ಟ. ಇಂಥ ಅತಿ ಎತ್ತರ ಪ್ರದೇಶಗಳಲ್ಲಿ ಕಾಣ ಸಿಗುವ ಈ ಅಪರೂಪದ ಸಸ್ಯ ಮನುಷ್ಯನಲ್ಲಿ ನಿರೋಧಕ ಶಕ್ತಿಯನ್ನು ಹೆಚ್ಚಿಸಬಲ್ಲದು. ಅಷ್ಟೇಕೆ ಅಣು ವಿಕಿರಣಗಳಿಂದಲೂ ನಿಮ್ಮನ್ನು ರಕ್ಷಿಸಬಲ್ಲದು ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಲಡಾಕ್ ನಲ್ಲಿ ಈ ಸಸ್ಯಕ್ಕೆ ಬೇರೆ ಹೆಸರಿದೆ

ಲಡಾಕ್ ನಲ್ಲಿ ಈ ಸಸ್ಯಕ್ಕೆ ಬೇರೆ ಹೆಸರಿದೆ

ಲಡಾಕ್ ಪ್ರಾಂತ್ಯದಲ್ಲಿ ಈ ಸಸ್ಯಕ್ಕೆ 'ಸೋಲೊ' ಎಂದು ಕರೆಯಲಾಗುತ್ತದೆ. ರೊಡಿಯಾಲಾ ಪ್ರಬೇಧಕ್ಕೆ ಸೇಇದ ಈ ಸಸ್ಯ ಹಸಿರು ಬಣ್ಣದ ಬಹು ಎಲೆಗಳನ್ನು ಹೊಂದಿದ್ದು, ಹಳದಿ ಬಣ್ಣದ ಹೂವನ್ನು ಹೊಂದಿದೆ. ಒರಟಾದ ಎಲೆಗಳನ್ನು ಸ್ಥಳೀಯರು ಅಡುಗೆಗೂ ಬಳಸುತ್ತಾರೆ ಕೆಲವೊಮ್ಮೆ ಔಷಧ, ಕಷಾಯ ಮಾಡಲು ಬಳಸುತ್ತಾರೆ.

ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ

ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ

Rhodiola ಒಂದು ಅದ್ಭುತ ಸಸ್ಯ, ಮಾನವರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ದಣಿವು, ಬಾಯಾರಿಕೆ, ಒತ್ತಡಗಳನ್ನು ನಿವಾರಿಸುತ್ತದೆ. ಬೇರೆ ಬೇರೆ ಬಗೆಯ ಹವಾಮಾನಕ್ಕೆ ದೇಹ ಹೊಂದಿಕೊಳ್ಳಲು ಸಹಾಯ ಮಾಡುತ್ತದೆ. ಅಣು ವಿಕಿರಣದಿಂದ ದೇಹವನ್ನು ರಕ್ಷಿಸಬಹುದಾಗಿದೆ. ಮಾನವನ ಸಹಜ ದೇಹ ಪ್ರಕೃತಿಯನ್ನು ಕಾಪಾಡಲು ಇದು ಸಹಾಯಕ ಎಂದು DIHARನ ನಿರ್ದೇಶಕರಾದ ಆರ್. ಬಿ ಶ್ರೀವಾಸ್ತವ ಐಎಎನ್ ಎಸ್ ಗೆ ತಿಳಿಸಿದ್ದಾರೆ.

ಅತ್ಯಂತ ಪ್ರಭಾವಿ, ಬಹುಪಯೋಗಿ ಸಸ್ಯ

ಅತ್ಯಂತ ಪ್ರಭಾವಿ, ಬಹುಪಯೋಗಿ ಸಸ್ಯ

ಬಯೋಕೆಮಿಕಲ್ ಯುದ್ಧಗಳಲ್ಲಿ ಬಳಸುವ ಬಾಂಬ್ ಗಳಿಂದ ಸೋರಿಕೆಯಾಗುವ ಗಾಮಾ ವಿಕಿರಣಗಳಿಂದ ಉಂಟಾಗಬಲ್ಲ ತೊಂದರೆಗಳನ್ನು ನಿವಾರಿಸುತ್ತದೆ. ವಿಶ್ವದ ಅತಿ ಎತ್ತರ ಲ್ಯಾಬ್ ಲೆಹ್ ನಲ್ಲಿರುವ ಡಿಆರ್ ಡಿಒ ಪ್ರಯೋಗಾಲಯದಲ್ಲಿ ಆಗ್ರೋ ಅನಿಮಲ್ ರಿಸರ್ಚ್ ವಿಜ್ಞಾನಿಗಳು ಇದಕ್ಕೆ ಪುರಾವೆ ಒದಗಿಸಿದ್ದಾರೆ.

ಸೈನಿಕರಿಗೆ ಅತ್ಯಂತ ಪ್ರಿಯವಾದ ಆಹಾರ

ಸೈನಿಕರಿಗೆ ಅತ್ಯಂತ ಪ್ರಿಯವಾದ ಆಹಾರ

ಎತ್ತರದ ಪ್ರದೇಶಗಳಲ್ಲಿ ಆಲೂಗೆಡ್ಡೆ ಸಿಕ್ಕರೆ ಅಮೃತ ಸಿಕ್ಕಂತೆ ಎಂಬ ಮಾತಿದೆ. ಇಂಥ ಸಂದರ್ಭದಲ್ಲಿ ಲಡಾಕ್, ಕಾರ್ಗಿಲ್ ಮುಂತಾದ ಎತ್ತರದ ಪ್ರದೇಶಗಳಲ್ಲಿ ಸದಾ ಕಾಲ ನೆಲೆಸಿ ದೇಶದ ರಕ್ಷಣೆ ಮಾಡುವ ಯೋಧರಿಗೆ ಈ ಸಸ್ಯ ಬಹು ಉಪಕಾರಿ. ಒತ್ತಡ ನಿವಾರಣೆ, ರೋಗ ನಿರೋಧಕ ಶಕ್ತಿ ಹೆಚ್ಚಿಸುವುದರಿಂದ ಕಡಿಮೆ ಆಮ್ಲಜನಕ ಇರುವ ಪ್ರದೇಶಗಳಲ್ಲಿ ಇದು ಉತ್ತಮ ಆಹಾರ ಪ್ಲಸ್ ಜೀವರಕ್ಷಕ ಔಷಧೀಯ ಸಸ್ಯ ಎಂದು ಶ್ರೀವಾಸ್ತವ ವಿವರಿಸಿದ್ದಾರೆ.

ಜೀವ ಕಾಯುವ ಔಷಧ

ಜೀವ ಕಾಯುವ ಔಷಧ

ರಾಮ-ರಾವಣರ ಯುದ್ಧದಲ್ಲಿ ವೈರಿಯ ಶರವೆರಗಿ ಧರೆಗೊರಗಿದ ರಾಮಾನುಜನನ್ನು ಬದುಕುಳಿಸಿದ್ದು ಸಂಜೀವನಿ ಎನ್ನುವ ಮೂಲಿಕೆ. ಇದನ್ನು ಹುಡುಕಿ ಹೊರಟ ಹನುಮಂತ ಮೂಲಿಕೆಯನ್ನು ಗುರುತಿಸಲಾಗದೆ ಅದು ಬೆಳೆಯುತ್ತಿದ್ದ ಪರ್ವತವನ್ನೇ ಕಿತ್ತೊಯ್ದನೆಂದು ರಾಮಾಯಣ ಹೇಳುತ್ತದೆ.

ಕೋಮ ಸ್ಥಿತಿಯಲ್ಲಿ ಇರುವ ರೋಗಿಗಳಿಗೆ ಪ್ರಜ್ಞೆಯನ್ನು ಮರಳಿಸುವ ಸಾಮರ್ಥ್ಯ ಸಂಜೀವಿನಿಗಿರಬೇಕು. ಹೀಗಾಗಿ ಸೆಲಾಜಿನೆಲ್ಲ ಬ್ರಯೋಪ್ಟೆರಿಸ್ ಎಂಬ ಸಸ್ಯ ಪ್ರಬೇಧವೂ ಸಂಜೀವಿನಿ ಆಗಿರಬಹುದು ಎಂದು ಬೆಂಗಳೂರಿನ ವಿಜ್ಞಾನಿ ಡಾ.ಗಣೇಶಯ್ಯ ಅಭಿಪ್ರಾಯಪಟ್ಟಿದ್ದಾರೆ.

English summary
Rhodiola, a herb found in the cold and highland climate, has led the country’s leading scientists to wonder if it is the end to the quest for sanjeevani, the mythical herb that gave renewed life to Ram’s brother Lakshman in the epic Ramayana.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X