ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಾವ ಲಕ್ಷಣಗಳು ಕಾಣಿಸಿಕೊಂಡರೆ ಕೊರೊನಾವೈರಸ್ ಕನ್ಫರ್ಮ್?

|
Google Oneindia Kannada News

ನವದೆಹಲಿ, ಆಗಸ್ಟ್.24: ಕೊರೊನಾವೈರಸ್ ಸೋಂಕಿತರಲ್ಲಿ ಒಂದೇ ರೀತಿಯ ಲಕ್ಷಣಗಳು ಕಾಣಿಸಿಕೊಳ್ಳುವುದಿಲ್ಲ. ಸಾಲು ಸಾಲಾಗಿ ಅನಾರೋಗ್ಯದ ಸಮಸ್ಯೆಗಳು ಎದುರಾಗುತ್ತಿದ್ದರೆ ಕೊರೊನಾವೈರಸ್ ಬಗ್ಗೆ ಜಾಗೃತಿ ವಹಿಸುವುದು ಉತ್ತಮ ಎಂದು ಸಾಂಕ್ರಾಮಿಕ ರೋಗತಜ್ಞರು ಸಲಹೆ ನೀಡಿದ್ದಾರೆ.

Recommended Video

ಭಾರತದಲ್ಲೇ ತಯಾರಾಗಲಿದೆಯೇ Russian Sputnik V ಲಸಿಕೆ | Oneindia Kannada

ಕೊರೊನಾವೈರಸ್ ಸೋಂಕು ತಗುಲಿರುವ ವ್ಯಕ್ತಿಯಲ್ಲಿ ಮೊದಲು ಜ್ವರ ಕಾಣಿಸಿಕೊಳ್ಳುತ್ತದೆ. ಇದರ ಬೆನ್ನಲ್ಲೇ ಕೆಮ್ಮು, ಮೂಳೆಗಳಲ್ಲಿ ಸೆಳೆತ ಅಥವಾ ನೋವು, ವಾಕರಿಕೆ ಮತ್ತು ವಾಂತಿ ಆಗುತ್ತದೆ. ಇದಾದ ನಂತರದಲ್ಲಿ ಅತಿಸಾರ ಕಾಣಿಸಿಕೊಳ್ಳುತ್ತದೆ ಎಂದು ಕೊವಿಡ್-19 ಸೋಂಕಿತರ ಲಕ್ಷಣಗಳ ಬಗ್ಗೆ ವೈದ್ಯರು ತಿಳಿಸಿದ್ದಾರೆ.

ಗಂಟಲು ದ್ರವ ಬೇಕಿಲ್ಲ: ಕೊರೊನಾವೈರಸ್ ತಪಾಸಣೆಗೆ ಐಸಿಎಂಆರ್ ಹೊಸ ಮಾರ್ಗ!ಗಂಟಲು ದ್ರವ ಬೇಕಿಲ್ಲ: ಕೊರೊನಾವೈರಸ್ ತಪಾಸಣೆಗೆ ಐಸಿಎಂಆರ್ ಹೊಸ ಮಾರ್ಗ!

ಕೊವಿಡ್-19 ಸೋಂಕಿತರಲ್ಲಿ ಈ ರೀತಿಯಾಗಿ ಅನಾರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಲ್ಲಿ ತಕ್ಷಣ ಕೊರೊನಾವೈರಸ್ ಸೋಂಕು ತಪಾಸಣೆಗೆ ಒಳಗಾಗುವುದು. ಪ್ರತ್ಯೇಕವಾಗಿದ್ದುಕೊಂಡು ಚಿಕಿತ್ಸೆ ಪಡೆದುಕೊಳ್ಳುವುದು ಉತ್ತಮ ಎಂದು ವೈದ್ಯರು ಸಲಹೆ ನೀಡುತ್ತಾರೆ.

ಸೋಂಕಿತ ಲಕ್ಷಣಗಳ ಕ್ರಮವೇ ವೈದ್ಯರಿಗೆ ಸಾಧನ

ಸೋಂಕಿತ ಲಕ್ಷಣಗಳ ಕ್ರಮವೇ ವೈದ್ಯರಿಗೆ ಸಾಧನ

ಕೊರೊನಾವೈರಸ್ ಸೋಂಕಿತರಲ್ಲಿ ಕಾಣಿಸಿಕೊಳ್ಳುವ ಲಕ್ಷಣಗಳ ಕ್ರಮದ ಬಗ್ಗೆ ವಿಜ್ಞಾನಿಗಳು ನಡೆಸಿದ ಅಧ್ಯಯನ ನಡೆಸಿದ್ದಾರೆ. ಈ ಕುರಿತು ಜರ್ನಲ್ ಫ್ರೆಂಟೀಯರ್ಸ್ ಇನ್ ಪಬ್ಲಿಕ್ ಹೆಲ್ತ್ ನಲ್ಲಿ ಪ್ರಕಟವಾಗಿದೆ. ಕೊವಿಡ್-19 ಸೋಂಕಿತರಲ್ಲಿನ ರೋಗದ ಲಕ್ಷಣಗಳ ಕ್ರಮವೇ ವೈದ್ಯರಿಗೆ ನೆರವಾಗಲಿದೆ. ಯಾವ ಹಂತದಲ್ಲಿ ಸೋಂಕಿತನಿದ್ದಾನೆ ಎಂದು ಗುರುತಿಸಿ ಚಿಕಿತ್ಸೆ ನೀಡುವುದಕ್ಕೆ ಸಹಾಯವಾಗಲಿದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ಕೊವಿಡ್-19 ಸೋಂಕು ಪತ್ತೆಗೆ ಈ ಕ್ರಮವೂ ಮುಖ್ಯ

ಕೊವಿಡ್-19 ಸೋಂಕು ಪತ್ತೆಗೆ ಈ ಕ್ರಮವೂ ಮುಖ್ಯ

ಒಂದು ಹಂತದಲ್ಲಿ ಕೊರೊನಾವೈರಸ್ ಸೋಂಕಿತರ ಪತ್ತೆ ಮತ್ತು ಚಿಕಿತ್ಸೆಗೆ ಈ ರೋಗದ ಲಕ್ಷಣಗಳ ಕ್ರಮವೂ ಮುಖ್ಯವಾಗುತ್ತದೆ. ರೋಗದ ಲಕ್ಷಣಗಳನ್ನು ಆಧರಿಸಿ ಸೋಂಕಿತನ ಆರೋಗ್ಯ ಸ್ಥಿತಿ ಯಾವ ಹಂತದಲ್ಲಿದೆ ಎಂದು ಗುರುತಿಸಿವುದಕ್ಕೆ ಸಾಧ್ಯವಾಗುತ್ತದೆ ಎಂದು ಯುಎಸ್ ನ ದಕ್ಷಿಣ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಅಧ್ಯಯನ ಲೇಖಕ ಪೀಟರ್ ಕುಹ್ನ್ ತಿಳಿಸಿದ್ದಾರೆ.

ಕೊವಿಡ್-19 ನೆಗೆಟಿವ್ ಬಂದರೂ ಮೊಬೈಲ್ ಸಂಖ್ಯೆಗೆ SMSಕೊವಿಡ್-19 ನೆಗೆಟಿವ್ ಬಂದರೂ ಮೊಬೈಲ್ ಸಂಖ್ಯೆಗೆ SMS

ಕೊವಿಡ್-19 ಸೋಂಕಿತರಿಗೆ ಚಿಕಿತ್ಸೆ ನೀಡಲು ಸಹಕಾರಿ

ಕೊವಿಡ್-19 ಸೋಂಕಿತರಿಗೆ ಚಿಕಿತ್ಸೆ ನೀಡಲು ಸಹಕಾರಿ

ಜ್ವರ, ಕೆಮ್ಮು, ಮೂಳೆಗಳಲ್ಲಿ ಸೆಳೆತ ಅಥವಾ ನೋವು, ವಾಕರಿಕೆ ಮತ್ತು ವಾಂತಿ, ಅತಿಸಾರ ಕ್ರಮವು ಕೊರೊನಾವೈರಸ್ ಸೋಂಕಿತರ ಲಕ್ಷಣವನ್ನು ಗುರುತುಪಡಿಸಿಕೊಳ್ಳುವುದಕ್ಕೆ ಸಹಕಾರಿಯಾಗಲಿದೆ. ಅಲ್ಲದೇ ಕೊವಿಡ್-19 ಸೋಂಕಿತರಿಗೆ ಪ್ರಾಥಮಿಕ ಹಂತದಲ್ಲಿಯೇ ಚಿಕಿತ್ಸೆ ನೀಡಲು ಹಾಗೂ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯನ್ನು ತಗ್ಗಿಸಲು ಸಾಧ್ಯವಾಗುತ್ತದೆ ಎಂದು ಯುಎಸ್ ನ ದಕ್ಷಿಣ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಅಧ್ಯಯನದ ಮತ್ತೊಬ್ಬ ಲೇಖಕರಾದ ಜೊಸೆಫ್ ಲಾರ್ಸನ್ ಹೇಳಿದ್ದಾರೆ.

ಕೊರೊನಾವೈರಸ್ ಲಕ್ಷಣ ಬದಲಾವಣೆಗೆ ಕಾರಣ?

ಕೊರೊನಾವೈರಸ್ ಲಕ್ಷಣ ಬದಲಾವಣೆಗೆ ಕಾರಣ?

ತೀವ್ರ ಉಸಿರಾಟ ತೊಂದರೆ ಮತ್ತು ಜ್ವರ ಮತ್ತು ಕೆಮ್ಮಿನ ಲಕ್ಷಣಗಳು ಕೊರೊನಾವೈರಸ್ ಸೋಂಕಿತರಲ್ಲಿ ಕಾಣಿಸುವುದು ಸಹಜ. ಆದರೆ ಜಠರಗರುಳಿದ ಭಾಗದಲ್ಲಿ ಕೊವಿಡ್-19 ರೋಗಿಯಲ್ಲಿನ ಲಕ್ಷಣಗಳನ್ನು ಬದಲಾಯಿಸುತ್ತದೆ. ಅಂದರೆ ಜಠರದ ಮೇಲ್ಭಾಗದಲ್ಲಿ ಕೊರೊನಾವೈರಸ್ ಇದ್ದರೆ ರೋಗಿಯಲ್ಲಿ ವಾಕರಿಕೆ ಮತ್ತು ವಾಂತಿಯ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಒಂದು ವೇಳೆ ಜಠರದ ಕೆಳಭಾಗದಲ್ಲಿ ವೈರಸ್ ಪ್ರವೇಶಿಸಿದ್ದಲ್ಲಿ ರೋಗಿಗೆ ಅತಿಸಾರದ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಾರೆ.

55,000 ಕೊವಿಡ್-19 ಸೋಂಕಿತರಲ್ಲಿ ಇದೇ ಲಕ್ಷಣ!

55,000 ಕೊವಿಡ್-19 ಸೋಂಕಿತರಲ್ಲಿ ಇದೇ ಲಕ್ಷಣ!

ಕೊರೊನಾವೈರಸ್ ಸೋಂಕಿತರಲ್ಲಿ ಕಾಣಿಸಿಕೊಳ್ಳುವ ಲಕ್ಷಣಗಳ ಕ್ರಮವನ್ನು ತಪಾಸಣೆಗೆ ಒಳಪಡಿಸಿದಾಗ ಚೀನಾದಲ್ಲಿ ಪರೀಕ್ಷಿಸಿದ 55,000 ಸೋಂಕಿತರಲ್ಲಿ ಒಂದೇ ರೀತಿಯ ಕ್ರಮವು ಕಂಡು ಬಂದಿದೆ. ಅಂದರೆ ಮೊದಲು ಜ್ವರ, ಕೆಮ್ಮು, ಮೂಳೆಗಳಲ್ಲಿ ಸೆಳೆತ ಅಥವಾ ನೋವು, ವಾಕರಿಕೆ ಮತ್ತು ವಾಂತಿ, ಅಂತಿಮವಾಗಿ ಅತಿಸಾರ ಸಮಸ್ಯೆಯು ಕಾಣಿಸಿಕೊಂಡಿತ್ತು ಎಂದು ವಿಶ್ವ ಆರೋಗ್ಯ ಸಂಸ್ಥೆಯು ನೀಡಿರುವ ಅಂಕಿ-ಅಂಶಗಳಲ್ಲೇ ಸಾಬೀತಾಗಿದೆ. ಇದರ ಜೊತೆಗೆ ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗದಿಂದ ಚೀನಾ ವೈದ್ಯಕೀಯ ಚಿಕಿತ್ಸಾ ತಜ್ಞರ ತಂಡವು ಮಾಹಿತಿ ಸಂಗ್ರಹಿಸಿತ್ತು. ಡಿಸೆಂಬರ್ 11, 2019 ರಿಂದ ಜನವರಿ 29, 2020ರವರೆಗೂ 1,100 ಪ್ರಕರಣಗಳನ್ನು ಅಧ್ಯಯನದಲ್ಲಿ ಬಳಸಿಕೊಳ್ಳಲಾಯಿತು.

English summary
Scientists Decode How Covid-19 Symptoms Begins To Appear In Humans. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X