ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ಹಕ್ಕಿಜ್ವರ; ವಿಜ್ಞಾನಿಗಳಿಂದ ಬಂತು ಹೈ ಅಲರ್ಟ್

|
Google Oneindia Kannada News

ನವದೆಹಲಿ, ಜನವರಿ 11: ಭಾರತದಲ್ಲಿ ಕೊರೊನಾ ಸೋಂಕಿನ ನಡುವೆ ಹಕ್ಕಿ ಜ್ವರದ ಭೀತಿಯೂ ಎದುರಾಗಿದೆ. ದೇಶದ ಏಳು ರಾಜ್ಯಗಳಲ್ಲಿ H1N8 ಹಕ್ಕಿ ಜ್ವರ ಪ್ರಕರಣಗಳು ಕಂಡುಬಂದಿದ್ದು, ಕೇಂದ್ರ ಸರ್ಕಾರ ಈ ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಿಸಿದೆ.

ಕೇರಳ, ರಾಜಸ್ಥಾನ, ಮಧ್ಯ ಪ್ರದೇಶ, ಹಿಮಾಚಲ ಪ್ರದೇಶ, ಹರಿಯಾಣ, ದೆಹಲಿ, ಮಹಾರಾಷ್ಟ್ರ ಹಾಗೂ ಉತ್ತರ ಪ್ರದೇಶದಲ್ಲಿ ಹಕ್ಕಿ ಜ್ವರದ ಪ್ರಕರಣಗಳು ದೃಢಪಟ್ಟಿವೆ. ಅಕ್ಕಪಕ್ಕದ ರಾಜ್ಯಗಳಲ್ಲಿಯೂ ಅಲರ್ಟ್ ಘೋಷಿಸಲಾಗಿದೆ. ಈ ನಡುವೆ ಹಕ್ಕಿ ಜ್ವರದ ಕುರಿತು ವಿಜ್ಞಾನಿಗಳು ಎಚ್ಚರಿಕೆ ಕೊಟ್ಟಿದ್ದಾರೆ. ನಿಗಾ ವಹಿಸದೇ ಇದ್ದ ಪಕ್ಷದಲ್ಲಿ ಅಪಾಯ ಖಂಡಿತ ಎಂದಿದ್ದಾರೆ. ಮುಂದೆ ಓದಿ...

 ಜನವರಿ ಮೊದಲ ವಾರದಲ್ಲಿ ಕಂಡುಬಂದ ಪ್ರಕರಣ

ಜನವರಿ ಮೊದಲ ವಾರದಲ್ಲಿ ಕಂಡುಬಂದ ಪ್ರಕರಣ

ಭೋಪಾಲ್ ಮೂಲದ ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ಹೈ ಸೆಕ್ಯುರಿಟಿ ಅನಿಮಲ್ ಡಿಸೀಸ್ (NISHAD) ಕೇರಳ, ರಾಜಸ್ಥಾನ, ಮಧ್ಯಪ್ರದೇಶ, ಹಿಮಾಚಲ ಪ್ರದೇಶ, ಹರಿಯಾಣ, ಗುಜರಾತ್ ಹಾಗೂ ಉತ್ತರ ಪ್ರದೇಶದಲ್ಲಿ ಹಕ್ಕಿ ಜ್ವರದ ಪ್ರಕರಣಗಳನ್ನು ದೃಢಪಡಿಸಿದೆ. ಇದೇ ಜನವರಿಯ ಮೊದಲ ವಾರದಲ್ಲಿ ಹಕ್ಕಿ ಜ್ವರ ಪ್ರಕರಣ ರಾಜಸ್ಥಾನದಲ್ಲಿ ಕಂಡುಬಂದಿತು. ಆನಂತರ ಏಳು ರಾಜ್ಯಗಳಲ್ಲಿ ಪ್ರಕರಣ ದೃಢಪಟ್ಟಿತು. ಸೋಂಕು ಕಂಡುಬಂದ ಅಕ್ಕಪಕ್ಕದ ರಾಜ್ಯಗಳಲ್ಲೂ ಹೈ ಅಲರ್ಟ್ ಘೋಷಿಸಲಾಗಿದೆ.

ಈ ಸಮಯಕ್ಕೆ ದೇಶದಲ್ಲಿ ಹಕ್ಕಿ ಜ್ವರದ ಸ್ಥಿತಿ ಗತಿ ಹೇಗಿದೆ?ಈ ಸಮಯಕ್ಕೆ ದೇಶದಲ್ಲಿ ಹಕ್ಕಿ ಜ್ವರದ ಸ್ಥಿತಿ ಗತಿ ಹೇಗಿದೆ?

 ವಿಜ್ಞಾನಿಗಳು ಕೊಟ್ಟ ಎಚ್ಚರಿಕೆ

ವಿಜ್ಞಾನಿಗಳು ಕೊಟ್ಟ ಎಚ್ಚರಿಕೆ

ಹಕ್ಕಿ ಜ್ವರದ H1N8 ವೈರಸ್ ಹಕ್ಕಿಗಳಿಂದ ಮನುಷ್ಯರಿಗೆ ಬರುವ ಸಾಧ್ಯತೆಗಳು ಇವೆ ಎಂದು ವಿಜ್ಞಾನಿಗಳು ಎಚ್ಚರಿಕೆ ಕೊಟ್ಟಿದ್ದಾರೆ. ಸೋಂಕು ಹರಡುವ ಸಾಧ್ಯತೆ ಸದ್ಯಕ್ಕೆ ಕಡಿಮೆಯಿದ್ದರೂ, ಆ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ. ಈ ವೈರಸ್ ನಲ್ಲಿ ಝೂನೋಟಿಕ್ ಎಂಬ ಅಂಶವಿದ್ದು, ಇದು ಪ್ರಾಣಿಗಳಿಂದ ಮನುಷ್ಯರಿಗೆ ರೋಗಕಾರಕ ಹರಡುವ ಅಂಶ ಎಂದು ಹಿರಿಯ ವಿಜ್ಞಾನಿ ಸಿ ತೋಶ್ ತಿಳಿಸಿದ್ದಾರೆ. ಹೀಗಾಗಿ ಹಕ್ಕಿ ಜ್ವರ ಪ್ರಕರಣಗಳು ಹೆಚ್ಚದಂತೆ ನಿಗಾ ವಹಿಸಬೇಕು ಎಂದು ಸೂಚಿಸಿದ್ದಾರೆ.

 ಹಕ್ಕಿ ಜ್ವರದಿಂದ ಆರ್ಥಿಕ ಹೊಡೆತ

ಹಕ್ಕಿ ಜ್ವರದಿಂದ ಆರ್ಥಿಕ ಹೊಡೆತ

ಹಕ್ಕಿ ಜ್ವರದಿಂದಾಗಿ ಹೈನೋದ್ಯಮಕ್ಕೆ ಆರ್ಥಿಕ ಹೊಡೆತ ಬಿದ್ದಿದ್ದು, ಕೋಳಿ ಸಾಗಣೆದಾರರಿಗೆ ನಷ್ಟ ಸಂಭವಿಸಿದೆ. ಹಕ್ಕಿ ಜ್ವರದಿಂದಾಗಿ ಕೋಳಿ ಮಾಂಸದ ದರ ಇಳಿಯುತ್ತಿದ್ದಂತೆ ಕೋಳಿಯ ಮೇವಿನ ಬೆಳೆಯಾದ ಜೋಳಕ್ಕೂ ಬೆಲೆ ತಗ್ಗಿದ್ದು, ನಷ್ಟ ಸಂಭವಿಸಿ ಆದಾಯ ಕಡಿಮೆಯಾಗಿರುವುದಾಗಿ ತಿಳಿದುಬಂದಿದೆ.

ಆರು ರಾಜ್ಯಗಳಿಗೆ ಕೇಂದ್ರ ಸರ್ಕಾರದಿಂದ ಅಲರ್ಟ್ಆರು ರಾಜ್ಯಗಳಿಗೆ ಕೇಂದ್ರ ಸರ್ಕಾರದಿಂದ ಅಲರ್ಟ್

 ಭಾರತದಲ್ಲಿ 24 ಬಾರಿ ಹಕ್ಕಿ ಜ್ವರದ ಭೀತಿ

ಭಾರತದಲ್ಲಿ 24 ಬಾರಿ ಹಕ್ಕಿ ಜ್ವರದ ಭೀತಿ

ಇದುವರೆಗೂ 24 ಬಾರಿ ಭಾರತದಲ್ಲಿ ಹಕ್ಕಿಜ್ವರ ಭೀತಿ ಎದುರಾಗಿದೆ. 2004ರಿಂದ ಈ ಪ್ರಕರಣ ಕಂಡುಬಂದಿದ್ದು, 2016ರಲ್ಲಿ ಕೊನೆ ಪ್ರಕರಣ ಕಂಡುಬಂದಿತ್ತು. ಇದೀಗ ಮತ್ತೆ ಹಕ್ಕಿ ಜ್ವರ ಪ್ರಕರಣಗಳು ಕಂಡುಬಂದಿವೆ. ಕೇರಳ ಹಾಗೂ ಹರಿಯಾಣದಲ್ಲಿ ಹಕ್ಕಿಗಳನ್ನು ಕೊಲ್ಲುವ ಪ್ರಕ್ರಿಯೆ ಮುಗಿದಿದೆ.

English summary
Scientists have confirmed the current H1 strain is transmissible from birds to humans, although such a risk is currently low
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X