ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜುಲೈನಲ್ಲಿ ಶಾಲೆಗಳು ಆರಂಭ; ಮೊದಲು 10 ಮತ್ತು 12ನೇ ತರಗತಿ

|
Google Oneindia Kannada News

ಚಂಡೀಗಢ್, ಜೂನ್ 04 : ಕೊರೊನಾ ವೈರಸ್ ಸೋಂಕು ಹರಡದಂತೆ ಲಾಕ್ ಡೌನ್ ಘೋಷಣೆ ಮಾಡಿದ ಬಳಿಕ ದೇಶಾದ್ಯಂತ ಶಾಲಾ-ಕಾಲೇಜು ಮುಚ್ಚಲಾಗಿದೆ. ಈಗ ಶಾಲೆಗಳನ್ನು ಪುನರಾರಂಭಿಸುವ ಪ್ರಸ್ತಾವ ಎಲ್ಲಾ ರಾಜ್ಯದಲ್ಲಿಯೂ ಕೇಳಿ ಬಂದಿದೆ.

ಗುರುವಾರ ಹರ್ಯಾಣ ಸರ್ಕಾರ ಜುಲೈ ತಿಂಗಳಿನಲ್ಲಿ ಶಾಲೆಗಳನ್ನು ಪುನರಾರಂಭಿಸುವುದಾಗಿ ಘೋಷಣೆ ಮಾಡಿದೆ. ವಿವಿಧ ಹಂತದಲ್ಲಿ ಶಾಲಾ-ಕಾಲೇಜುಗಳನ್ನು ಆರಂಭ ಮಾಡಲಾಗುತ್ತದೆ. ಮೊದಲು 10 ಮತ್ತು 12ನೇ ತರಗತಿ ಆರಂಭವಾಗಲಿದೆ.

ಶಾಲೆಗಳ ಆರಂಭ; ಸರ್ಕಾರಕ್ಕೆ ಸಿದ್ದರಾಮಯ್ಯ ಸಲಹೆಗಳುಶಾಲೆಗಳ ಆರಂಭ; ಸರ್ಕಾರಕ್ಕೆ ಸಿದ್ದರಾಮಯ್ಯ ಸಲಹೆಗಳು

ಶಿಕ್ಷಣ ಸಚಿವ ಕನ್ವರ್ ಪಾಲ್ ಈ ಕುರಿತು ಮಾಹಿತಿ ನೀಡಿದರು. "ಜುಲೈನಲ್ಲಿ ಶಾಲಾ-ಕಾಲೇಜು ಪುನರಾರಂಭಿಸಲಾಗುತ್ತದೆ. ಹಂತ ಹಂತವಾಗಿ ಈ ಪ್ರಕ್ರಿಯೆ ನಡೆಯಲಿದ್ದು, ಮೊದಲು 10 ರಿಂದ 12ನೇ ತರಗತಿ ಆರಂಭವಾಗಲಿದೆ" ಎಂದು ಹೇಳಿದರು.

ಶಾಲೆ ತೆರೆಯವ ವಿಚಾರ; ಜೂ.10ರಿಂದ ಪೋಷಕರ ಸಭೆ ಶಾಲೆ ತೆರೆಯವ ವಿಚಾರ; ಜೂ.10ರಿಂದ ಪೋಷಕರ ಸಭೆ

Schools To Reopen In July Says Haryana Govt

"10-12, 6-9, 1-5 ಹೀಗೆ ಮೂರು ಹಂತದಲ್ಲಿ ಶಾಲಾ-ಕಾಲೇಜು ಪುನರಾರಂಭಿಸಲು ತೀರ್ಮಾನಿಸಲಾಗಿದೆ. ಶಾಲೆಗಳಲ್ಲಿ ಸಾಮಾಜಿಕ ಅಂತರ ಕಾಪಾಡಬೇಕು ಅದಕ್ಕಾಗಿ ಶೇ 50ರಷ್ಟು ವಿದ್ಯಾರ್ಥಿಗಳು ಮಾತ್ರ ಹಾಜರಾಗಬೇಕು" ಎಂದು ಶಿಕ್ಷಣ ಸಚಿವರು ವಿವರಣೆ ನೀಡಿದರು.

ಶಾಲೆ ಆರಂಭಿಸಿದ ಮರುದಿನವೇ 79 ಕೇಸ್: ಮತ್ತೆ ಸ್ಕೂಲ್ ಸಂಪೂರ್ಣ ಬಂದ್ ಶಾಲೆ ಆರಂಭಿಸಿದ ಮರುದಿನವೇ 79 ಕೇಸ್: ಮತ್ತೆ ಸ್ಕೂಲ್ ಸಂಪೂರ್ಣ ಬಂದ್

"ಒಂದು ತರಗತಿಯಲ್ಲಿ 30 ವಿದ್ಯಾರ್ಥಿಗಳು ಇದ್ದರೆ 15 ಜನರು ಬೆಳಗ್ಗೆ, 15 ಜನರು ಸಂಜೆ ಬರಬೇಕು. ಇಲ್ಲವೇ ದಿನ ಬಿಟ್ಟು ದಿನ ಬರುವಂತೆ ಮಾರ್ಗಸೂಚಿ ರೂಪಿಸಲಾಗುತ್ತದೆ" ಎಂದು ಕನ್ವರ್ ಪಾಲ್ ತಿಳಿಸಿದರು.

ಕೇಂದ್ರ ಗೃಹ ಇಲಾಖೆ ಈಗಾಲೇ ಹೊರಡಿಸಿರುವ ಮಾರ್ಗಸೂಚಿಯಲ್ಲಿ ಜುಲೈನಲ್ಲಿ ಶಾಲಾ-ಕಾಲೇಜು ತೆರೆಯಬಹುದು ಎಂದು ಹೇಳಿದೆ. ಶಾಲೆಗಳು ಪೋಷಕರ ಜೊತೆ ಸಭೆ ನಡೆಸಬೇಕು, ಅವರ ಅಭಿಪ್ರಾಯವನ್ನು ಪರಿಗಣಿಸಬೇಕು ಎಂದು ಸಹ ನಿರ್ದೇಶನ ನೀಡಿದೆ.

ಹರ್ಯಾಣದಲ್ಲಿ ಇದುವರೆಗೂ 2594 ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ದಾಖಲಾಗಿವೆ. 23 ಜನರು ಇದುವರೆಗೂ ಮೃತಪಟ್ಟಿದ್ದಾರೆ. ರಾಜ್ಯದಲ್ಲಿನ ಸಕ್ರಿಯ ಪ್ರಕರಣಗಳ ಸಂಖ್ಯೆ 1,842.

English summary
Haryana education minister Kanwar Pal said that school to reopen in July in phased manner. 1st classes 10-12 will open.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X