ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಾಲೆ, ಕಾಲೇಜುಗಳನ್ನು ತೆರೆಯುವುದಿಲ್ಲ: ಆದರೆ ಶಿಕ್ಷಣ ನಿಲ್ಲುವುದಿಲ್ಲ: ಸರ್ಕಾರ ಮಹತ್ವದ ನಿರ್ಧಾರ

|
Google Oneindia Kannada News

ನವದೆಹಲಿ, ಆಗಸ್ಟ್ 11: ಮಾರ್ಚ್ ಮಧ್ಯದಿಂದ ಸ್ಥಗಿತಗೊಂಡಿರುವ ಶಾಲೆ ಮತ್ತು ಕಾಲೇಜುಗಳು ಸೆಪ್ಟೆಂಬರ್ 1ರಿಂದ ಪುನರಾರಂಭವಾಗಲಿವೆ ಎಂಬ ವರದಿಗಳನ್ನು ಕೇಂದ್ರ ಸರ್ಕಾರ ತಳ್ಳಿಹಾಕಿದೆ. ಒಟ್ಟಾರೆ ದೇಶದಾದ್ಯಂತ ಕೊರೊನಾ ವೈರಸ್ ಸೋಂಕು ವ್ಯಾಪಿಸಿರುವ ಸ್ಥಿತಿಯನ್ನು ಪರಿಶೀಲಿಸಿ ಮತ್ತು ಸ್ಥಳೀಯ ಸನ್ನಿವೇಶಗಳನ್ನು ಗಮನಿಸಿದ ನಂತರವೇ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

Recommended Video

ಬೆಂಗಳೂರಿನಲ್ಲಿ 50 ಸಾವಿರ ಅಂಗಡಿಗಳು ಬಂದ್ | Oneindia Kannada

ಶಿಕ್ಷಣ ಸಚಿವಾಲಯದ ಸಂಸದೀಯ ಸ್ಥಾಯಿ ಸಮಿತಿ, ಸಂಸದರು ಮತ್ತು ಸಚಿವಾಲಯದ ಅಧಿಕಾರಿಗಳು ನಡೆಸಿದ ಸಭೆಯಲ್ಲಿ, ಆರ್ಥಿಕವಾಗಿ ಹಿಂದುಳಿದಿರುವ ವಿದ್ಯಾರ್ಥಿಗಳು ಆನ್‌ಲೈನ್ ತರಗತಿಗಳಿಗೆ ಹಾಜರಾಗಲು ಸ್ಮಾರ್ಟ್ ಫೋನ್ ಅಥವಾ ಲ್ಯಾಪ್‌ಟಾಪ್ ಖರೀದಿಸುವಷ್ಟು ಶಕ್ತರಾಗಿರುವುದಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಯಿತು. ಇದಕ್ಕೆ ಪರ್ಯಾಯವಾಗಿ ಇತರೆ ಕ್ರಮಗಳನ್ನು ಕೈಗೊಳ್ಳಲು ಸರ್ಕಾರ ಮುಂದಾಗಿದೆ.

ಹೊಸ ಶಿಕ್ಷಣ ನೀತಿ ಹೊಸ ಭಾರತದ ಅಡಿಪಾಯವಾಗಿದೆ: ನರೇಂದ್ರ ಮೋದಿಹೊಸ ಶಿಕ್ಷಣ ನೀತಿ ಹೊಸ ಭಾರತದ ಅಡಿಪಾಯವಾಗಿದೆ: ನರೇಂದ್ರ ಮೋದಿ

ಈ ಬಾರಿ ಶಾಲೆಗಳನ್ನು ತೆರೆಯಲಾಗದ ಸನ್ನಿವೇಶ ಇರುವುದರಿಂದ ಶೈಕ್ಷಣಿಕ ಚಟುವಟಿಕೆಗಳಿಗೆ ಅಡ್ಡಿಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಆದರೆ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಸೌಲಭ್ಯ ಇಲ್ಲದ ಮಕ್ಕಳಿಗೂ ಬೇರೆ ರೀತಿ ನೆರವಾಗಲು ಸರ್ಕಾರ ಆಲೋಚನೆ ಮಾಡಿದೆ. ಮುಂದೆ ಓದಿ...

ಬಡಮಕ್ಕಳಿಗೆ ಟ್ರಾನ್ಸಿಸ್ಟರ್ ವಿತರಣೆ

ಬಡಮಕ್ಕಳಿಗೆ ಟ್ರಾನ್ಸಿಸ್ಟರ್ ವಿತರಣೆ

ಇದಕ್ಕೆ ಸುಲಭ ಮಾರ್ಗೋಪಾಯಗಳನ್ನು ಕಂಡುಕೊಳ್ಳಲು ಸರ್ಕಾರ ಮುಂದಾಗಿದ್ದು, ಬಡಮಕ್ಕಳಿಗೆ ಟ್ರಾನ್ಸಿಸ್ಟರ್‌ಗಳನ್ನು ಪೂರೈಸುವುದಾಗಿ ಭರವಸೆ ನೀಡಿದೆ. ಹೀಗಾಗಿ ಮಕ್ಕಳು ಸಮುದಾಯ ರೇಡಿಯೋ ಮೂಲಕ ಕಲಿಕೆ ಮಾಡಬಹುದಾಗಿದೆ. ಇದಲ್ಲದೆ ಆನ್‌ಲೈನ್ ತರಗತಿಗಳಿಗೆ ಐವಿಆರ್‌ಎಸ್‌ ವ್ಯವಸ್ಥೆಯನ್ನು ಸಹ ಸೃಷ್ಟಿಸಲಾಗುತ್ತದೆ.

ಕ್ವೆಶ್ಚನ್ ಬ್ಯಾಂಕ್ ತಯಾರಿಸಲು ಸಲಹೆ

ಕ್ವೆಶ್ಚನ್ ಬ್ಯಾಂಕ್ ತಯಾರಿಸಲು ಸಲಹೆ

ಕಾಲೇಜು ವಿದ್ಯಾರ್ಥಿಗಳಿಗೆ ಕ್ವೆಶ್ಚನ್ ಬ್ಯಾಂಕ್ ಒಂದನ್ನು ತಯಾರಿಸುವಂತೆ ಬಿಜೆಪಿ ಸಂಸದ ಮತ್ತು ಸಮಿತಿ ಅಧ್ಯಕ್ಷ ವಿನಯ್ ಸಹಸ್ರಬುದ್ಧೆ ಸಲಹೆ ನೀಡಿದ್ದಾರೆ. ಇದು ವಿದ್ಯಾರ್ಥಿಗಳ ಮೇಲಿನ ಒತ್ತಡ ತಗ್ಗಿಸಲಿದೆ ಎಂದು ಹೇಳಿದ್ದು, ಇದರಲ್ಲಿರುವ ಪ್ರಶ್ನೆಗಳನ್ನೇ ಪರೀಕ್ಷೆಯಲ್ಲಿ ಕೇಳಬೇಕು ಎಂದು ಹೇಳಿದ್ದಾರೆ.

ರಾಷ್ಟ್ರೀಯ ಶಿಕ್ಷಣ ನೀತಿ: ಮೂರು ಭಾಷೆಯ ಸೂತ್ರ ತಿರಸ್ಕರಿಸಿದ ತಮಿಳುನಾಡುರಾಷ್ಟ್ರೀಯ ಶಿಕ್ಷಣ ನೀತಿ: ಮೂರು ಭಾಷೆಯ ಸೂತ್ರ ತಿರಸ್ಕರಿಸಿದ ತಮಿಳುನಾಡು

ಪರೀಕ್ಷೆಗಳು ನಡೆಯಲಿವೆ

ಪರೀಕ್ಷೆಗಳು ನಡೆಯಲಿವೆ

ಪ್ರಸಕ್ತ ಶೈಕ್ಷಣಿಕ ವರ್ಷವನ್ನು 'ಶೂನ್ಯ ವರ್ಷ' ಎಂದು ಪರಿಗಣಿಸಲು ಸರ್ಕಾರ ಯಾವುದೇ ಆಲೋಚನೆ ಮಾಡುತ್ತಿಲ್ಲ ಎಂದು ಕೇಂದ್ರ ಉನ್ನತ ಶಿಕ್ಷಣ ಕಾರ್ಯದರ್ಶಿ ಅಮಿತ್ ಖರೆ ಸಮಿತಿಗೆ ಮಾಹಿತಿ ನೀಡಿದ್ದಾರೆ. ಇದರ ಅರ್ಥ 2020ರ ಅಂತ್ಯದ ವೇಳೆ ಎಂದಿನಂತೆ ಪರೀಕ್ಷೆಗಳು ನಡೆಯಲಿವೆ.

ಸುದೀರ್ಘ ವಾರ್ಷಿಕ ರಜೆಯಲ್ಲ

ಸುದೀರ್ಘ ವಾರ್ಷಿಕ ರಜೆಯಲ್ಲ

ವಿದ್ಯಾರ್ಥಿಗಳು ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ತಮ್ಮ ತರಗತಿಗಳನ್ನು ಪಡೆದುಕೊಳ್ಳಲಿದ್ದಾರೆ. ಪರೀಕ್ಷೆಗಳು ಸುಗಮವಾಗಿ ನಡೆಯುವಂತೆ ಅಗತ್ಯ ಎಲ್ಲ ವ್ಯವಸ್ಥೆಗಳನ್ನು ಮಾಡಿಕೊಡಲಾಗುವುದು. ಈ ಪ್ರಸಕ್ತಿ ಶೈಕ್ಷಣಿಕ ವರ್ಷವನ್ನು ಒಂದು ವರ್ಷದ ಸುದೀರ್ಘ ರಜೆ ಅವಧಿ ಎಂದು ಪರಗಣಿಸುವುದಿಲ್ಲ ಎಂಬುದಾಗಿ ಖರೆ ತಿಳಿಸಿದ್ದಾರೆ.

English summary
Schools Reopen News: Schools, Colleges to Remain Shut, But it Won’t Be Zero Academic Year | Here’s How.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X