ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಮರಿಗೆ ಬಿದ್ದ ಶಾಲೆ ಬಸ್; ಕನಿಷ್ಠ ಒಂಬತ್ತು ಮಕ್ಕಳು ಸಾವು

|
Google Oneindia Kannada News

ತೆಹ್ರಿ (ಉತ್ತರಾಖಂಡ), ಆಗಸ್ಟ್ 6: ಇಲ್ಲಿನ ತೆಹ್ರಿ ಘರ್ ವಾಲ್ ನ ಕಂಗ್ ಸಲಿಯಲ್ಲಿ ಮಂಗಳವಾರ ಬೆಳಗ್ಗೆ ಹದಿನೆಂಟು ಮಕ್ಕಳು ಇದ್ದ ಶಾಲಾ ಬಸ್ ವೊಂದು ಕಮರಿಗೆ ಬಿದ್ದ ಪರಿಣಾಮ ಕನಿಷ್ಠ ಒಂಬತ್ತು ಮಕ್ಕಳು ಮೃತಪಟ್ಟು, ಇತರ ಹತ್ತು ಮಂದಿ ಗಾಯಗೊಂಡಿದ್ದಾರೆ. ಮುಖ್ಯಮಂತ್ರಿ ತ್ರಿವೇಂದ್ರ ರಾವತ್ ಅವರು ಮ್ಯಾಜಿಸ್ಟ್ರೇಟ್ ಮಟ್ಟದಲ್ಲಿ ಅಪಘಾತದ ತನಿಖೆಗೆ ಆದೇಶ ನೀಡಿದ್ದಾರೆ.

ಮೃತರ ಕುಟುಂಬಕ್ಕೆ ಮುಖ್ಯಮಂತ್ರಿ ರಾವತ್ ಸಂತಾಪ ವ್ಯಕ್ತಪಡಿಸಿದ್ದು, ಅಪಘಾತದಲ್ಲಿ ಗಾಯ ಆದವರಿಗೆ ತುರ್ತಾಗಿ ಚಿಕಿತ್ಸೆ ದೊರಕಿಸಲು ಅಧಿಕಾರಿಗಳು ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ. ತೀರಾ ಗಂಭೀರವಾಗಿ ಗಾಯಗೊಂಡವರಿಗೆ ವಿಮಾನದ ಮೂಲಕ ಋಷಿಕೇಶದ ಏಮ್ಸ್ ಗೆ ಚಂಬಾದಿಂದ ರವಾನೆ ಮಾಡಿದ್ದಾರೆ.

ಉದನೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಉರುಳಿದ ಗ್ಯಾಸ್ ಟ್ಯಾಂಕರ್, ವಾಹನ ಸಂಚಾರ ಸ್ಥಗಿತಉದನೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಉರುಳಿದ ಗ್ಯಾಸ್ ಟ್ಯಾಂಕರ್, ವಾಹನ ಸಂಚಾರ ಸ್ಥಗಿತ

ಗಾಯಗೊಂಡ ಹತ್ತು ಮಂದಿಯನ್ನು ಬೌರಾರಿಯ ಜಿಲ್ಲಾಸ್ಪತ್ರೆಗೆ ದಾಖಲಿಸಲು ಸೂಚಿಸಲಾಗಿದೆ ಎಂದು ತೆಹ್ರಿ- ಘರ್ ವಾಲ್ ನ ಮುಖ್ಯ ವೈದ್ಯಾಧಿಕಾರಿ ಭಾಗೀರಥಿ ಅವರು ಹೇಳಿದ್ದಾರೆ. ಉತ್ತರಾಖಂಡ್ ನ ರಾಜ್ಯ ಡಿಆರ್ ಎಫ್ ತಂಡ, ಜಿಲ್ಲಾಡಳಿತ ಹಾಗೂ ವೈದ್ಯಕೀಯ ವೃತ್ತಿಪರರು ಅಪಘಾತ ನಡೆದ ಸ್ಥಳಕ್ಕೆ ಧಾವಿಸಿದ್ದು, ಬಸ್ಸಿನಲ್ಲಿ ಇದ್ದವರ ರಕ್ಷಣಾ ಕಾರ್ಯ ಕೈಗೊಂಡಿದ್ದಾರೆ.

School Bus Fell In To Gorge; At Least 9 Children Dead

ಬಸ್ ನ ಸಾಮರ್ಥ್ಯಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರಿದ್ದರು ಎಂದು ಆರೋಪ ಕೇಳಿಬಂದಿದೆ. "ಅಪಘಾತದ ಬಗ್ಗೆ ತನಿಖೆ ನಡೆಸುತ್ತೇವೆ ಹಾಗೂ ಆ ನಂತರವಷ್ಟೇ ಪೂರ್ಣ ಮಾಹಿತಿ ದೊರೆಯುತ್ತದೆ" ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಮಾಹಿತಿ ನೀಡಿದ್ದಾರೆ.

English summary
At least 9 children dead, other 10 injured after school bus fell in to gorge in Tehri Garhwal, Uttarakhand on Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X