ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿದ್ಯಾರ್ಥಿಗಳಿಂದ ಹತ್ಯೆಯಾದ ಬಾಲಕನ ದೇಹ ಹೂಳಿದ ಶಾಲಾ ಆಡಳಿತ

|
Google Oneindia Kannada News

ಡೆಹರಾಡೂನ್, ಮಾರ್ಚ್ 28: ಹಿರಿಯ ವಿದ್ಯಾರ್ಥಿಗಳಿಂದ ಹಲ್ಲೆಗೆ ಒಳಗಾಗಿ ಮೃತಪಟ್ಟ 12 ವರ್ಷದ ಬಾಲಕನ ಮೃತದೇಹವನ್ನು ಶಾಲಾ ಆಡಳಿತ ಮಂಡಳಿ ಗುಟ್ಟಾಗಿ ಹೂತು ಹಾಕಿದ ಭೀಕರ ಘಟನೆ ಉತ್ತರಾಖಂಡದ ಡೆಹ್ರಾಡೂನ್‌ನ ವಸತಿ ಶಾಲೆಯೊಂದರಲ್ಲಿ ನಡೆದಿದೆ.

ಹಲ್ಲೆಯಿಂದ ಗಾಯಗೊಂಡಿದ್ದ ವಾಸು ಯಾದವ್ ಎಂಬ ವಿದ್ಯಾರ್ಥಿಯನ್ನು ಆಸ್ಪ್ರತ್ರೆಗೆ ದಾಖಲಿಸಲಾಗಿತ್ತು. ಆದರೆ, ವೈದ್ಯರು ಆತ ಮೃತಪಟ್ಟಿದ್ದಾನೆ ಎಂದು ಘೋಷಿಸಿದರು. ಇದರಿಂದ ಗಾಬರಿಯಾದ ಆಡಳಿತ ಮಂಡಳಿ ದೇಹವನ್ನು ಶಾಲೆಯ ಆವರಣದೊಳಗೆ ಸಮಾಧಿ ಮಾಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.

school authorities buried 12 year old student body to hide murder by students in dehradun

ರಿಯಾನ್ ಶಾಲೆಯ ಪ್ರದ್ಯುಮ್ನ ಠಾಕೂರ್ ಕೊಲೆಗೆ ಒಂದು ವರ್ಷ ರಿಯಾನ್ ಶಾಲೆಯ ಪ್ರದ್ಯುಮ್ನ ಠಾಕೂರ್ ಕೊಲೆಗೆ ಒಂದು ವರ್ಷ

ಅದೇ ಶಾಲೆಯ 12 ವರ್ಷದ ವಿದ್ಯಾರ್ಥಿ ಮೇಲೆ ಹಿರಿಯ ವಿದ್ಯಾರ್ಥಿಗಳು ಬಿಸ್ಕೆಟ್ ಕದ್ದ ಆರೋಪದಲ್ಲಿ ಶಾಲಾ ತರಗತಿಯೊಳಗೆ ಕ್ರಿಕೆಟ್ ಬ್ಯಾಟ್ ಮತ್ತು ವಿಕೆಟ್‌ಗಳಿಂದ ಥಳಿಸಿದ್ದಾರೆ. ಅನೇಕ ಗಂಟೆಗಳ ಕಾಲ ಮನಬಂದಂತೆ ಹಲ್ಲೆ ನಡೆಸಲಾಗಿದೆ. ಕೊನೆಗೆ ಇದು ವಾರ್ಡನ್ ಕಣ್ಣಿಗೆ ಬಿದ್ದು ತಪ್ಪಿಸಿದ್ದಾರೆ. ಮಧ್ಯಾಹ್ನದವರೆಗೂ ಹಲ್ಲೆ ನಡೆಸಿದ್ದರೂ, ಸಂಜೆ ವೇಳೆಗೆ ಆಸ್ಪತ್ರೆಗೆ ಸಾಗಿಸಿದ್ದಾರೆ.

ಪ್ರದ್ಯುಮ್ನ ಠಾಕೂರ್ ಹತ್ಯೆಯ ಬೆಚ್ಚಿ ಬೀಳಿಸುವ ವಿವರಗಳುಪ್ರದ್ಯುಮ್ನ ಠಾಕೂರ್ ಹತ್ಯೆಯ ಬೆಚ್ಚಿ ಬೀಳಿಸುವ ವಿವರಗಳು

'ಈ ಘಟನೆ ಮಾರ್ಚ್ 10ರಂದು ನಡೆದಿದೆ. ಮಾರ್ಚ್ 11ರಂದು ನಮ್ಮ ಗಮನಕ್ಕೆ ಬಂದಿದೆ. ಕೂಡಲೇ ಶಾಲೆಗೆ ಭೇಟಿ ನೀಡಿದ್ದೆವು. ಅಲ್ಲಿ ಶಾಲಾ ಆಡಳಿತ ಮಂಡಳಿಯವರು ದೇಹವನ್ನು ಹೂತು ಹಾಕಿರುವುದು ಗಮನಕ್ಕೆ ಬಂದಿದೆ. ಈ ಘಟನೆ ಬಗ್ಗೆ ಅವರು ವಿದ್ಯಾರ್ಥಿಯ ಕುಟುಂಬದವರಿಗೂ ಮಾಹಿತಿ ನೀಡಲು ಮುಂದಾಗಿಲ್ಲ' ಎಂದು ಉತ್ತರಾಖಂಡ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷೆ ಉಷಾ ನೇಗಿ ತಿಳಿಸಿದ್ದಾರೆ.

English summary
School authorities in Dehradun buried a body of 12 year old student who was beaten death by the senior students of a boarding school.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X