ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವರುಣ್ ಗಾಂಧಿ ಟಾರ್ಗೆಟ್, #SoniaLalitDeal ಟ್ರೆಂಡಿಂಗ್

By Mahesh
|
Google Oneindia Kannada News

ನವದೆಹಲಿ,ಜು.01: ಐಪಿಎಲ್ ಮಾಜಿ ಚೇರ್ಮನ್ ಲಲಿತ್ ಮೋದಿ ಅವರ ಟಾರ್ಗೆಟ್ ಈಗ ವರುಣ್ ಗಾಂಧಿ ಮೇಲೆ ಬಿದ್ದಿದೆ. ಲಮೋ ಈಗ ನೆಹರೂ ಕುಟುಂಬವನ್ನು ಗುರಿಯಾಗಿಸಿಕೊಂಡಂತೆ ಕಾಣುತ್ತಿದೆ.ಸೋನಿಯಾಗಾಂಧಿ ಅವರ ಮೇಲೆ ಅಪವಾದ ಹೊರಿಸುವ ಪ್ರಯತ್ನ ಹಾಗೂ ಇನ್ನಿತರ ವಿಷಯಕ್ಕೆ ಸಂಬಂಧಿಸಿದಂತೆ ವರುಣ್ ಜೊತೆ ಡೀಲ್ ಮಾಡಿಕೊಳ್ಳಲಾಗಿತ್ತು ಎಂದು ಲಮೋ ಹೇಳಿದ್ದಾರೆ.

ಆದರೆ, ಕಾಂಗ್ರೆಸ್ ನಾಯಕರು ಹಾಗೂ ವರುಣ್ ಗಾಂಧಿ ಡೀಲ್ ಬಗ್ಗೆ ಲಲಿತ್ ಮೋದಿ ಟ್ವೀಟ್ ನಂಬಿಕೆಗೆ ಅರ್ಹವಲ್ಲ. ಎಲ್ಲಾ ಆರೋಪಗಳು ಆಧಾರ ರಹಿತ, ಸತ್ಯಕ್ಕೆ ದೂರ ಎಂದು ಹೇಳಿದ್ದಾರೆ. [ಪ್ರಿಯಾಂಕಾ, ರಾಬರ್ಟ್ ಭೇಟಿಯಾಗಿಲ್ಲ]

ವ್ಯವಹಾರವೊಂದಕ್ಕೆ ಸಂಬಂಧಿಸಿದಂತೆ ವರುಣ್ ಗಾಂಧಿ ನನ್ನನ್ನು ಭೇಟಿ ಮಾಡಲು ಲಂಡನ್ನಿನ ನನ್ನ ಮನೆಗೆ ಬಂದಿದ್ದರು ಎಂದು ಲಮೋ ಟ್ವೀಟ್ ಮಾಡಿದ್ದಾರೆ.[ನಾಳೆ ಅರ್ನಾಬ್ ಹೆಸರು ಹೇಳಿದ್ರೂ ಅಚ್ಚರಿ ಏನಿಲ್ಲ!]

ಲಲಿತ್ ಮೋದಿ ಬರೀ ಬೊಗಳೆ ಬಿಡುತ್ತಿದ್ದಾರೆ. ಅವರ ಟ್ವೀಟ್ ಆರೋಪಗಳಿಗೆ ಉತ್ತರಿಸಿದರೆ ನಾನು ಕೆಳಮಟ್ಟಕ್ಕೆ ಕುಸಿದ್ದಂತಾಗುತ್ತದೆ ಎಂದು ವರುಣ್ ಹೇಳಿದ್ದಾರೆ. [ರೈನಾ, ಜಡೇಜ, ಬ್ರಾವೋಗೆ ಕ್ಲೀನ್ ಚಿಟ್!]

ಸೋನಿಯಾ ಗಾಂಧಿ ಹಾಗೂ ವರುಣ್ ಗಾಂಧಿ ಕುಟುಂಬದ ಬಗ್ಗೆ ಇಡೀ ಪ್ರಪಂಚಕ್ಕೆ ಗೊತ್ತಿದೆ. ನಾವು ಹೊಸದಾಗಿ ಹೇಳಬೇಕಾಗಿಲ್ಲ. ಸುಮ್ಮನೆ ಬೇಡದ ವಿಷಯ ಕೆದಕುತ್ತಿದ್ದಾರೆ ಎಂದು ಷಹನವಾಜ್ ಹುಸೇನ್ ಪ್ರತಿಕ್ರಿಯಿಸಿದ್ದಾರೆ.

 ಲಲಿತ್ ಮೋದಿ ಟ್ವೀಟ್ ನಂಬಿಕೆಗೆ ಅರ್ಹವಲ್ಲ

ಲಲಿತ್ ಮೋದಿ ಟ್ವೀಟ್ ನಂಬಿಕೆಗೆ ಅರ್ಹವಲ್ಲ

ಲಲಿತ್ ಮೋದಿ ಬರೀ ಬೊಗಳೆ ಬಿಡುತ್ತಿದ್ದಾರೆ. ಅವರ ಟ್ವೀಟ್ ಆರೋಪಗಳಿಗೆ ಉತ್ತರಿಸಿದರೆ ನಾನು ಕೆಳಮಟ್ಟಕ್ಕೆ ಕುಸಿದ್ದಂತಾಗುತ್ತದೆ ಎಂದು ವರುಣ್ ಹೇಳಿದ್ದಾರೆ.

ಶ್ರೀಮಂತ ರಾಜಕಾರಣಿಗಳು ಏನು ಬೇಕಾದ್ರು ಮಾಡ್ತಾರೆ

ಶ್ರೀಮಂತ ರಾಜಕಾರಣಿಗಳು ಏನು ಬೇಕಾದ್ರು ಮಾಡ್ತಾರೆ ನನಗೇನು ಆಶ್ಚರ್ಯವಾಗಿಲ್ಲ.

ಡೀಲ್ ಅಲ್ಲಗೆಳೆದ ಬಿಜೆಪಿ ವಕ್ತಾರರು

ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್ ಹೇಗೆ ಬದಲಾಗುತ್ತೆ ನೋಡಿ

ಪ್ರಪ್ರಂಚಕ್ಕೆ ಸತ್ಯ ತಿಳಿಯಲಿ ಎಂದ ಲಮೋ

ಪ್ರಪ್ರಂಚಕ್ಕೆ ಸತ್ಯ ತಿಳಿಯಲಿ ಮಾತಾಡಿ ಮಿ.ವರುಣ್ ಎಂದ ಲಮೋ

ಅರುಣ್ ಜೇಟ್ಲಿ, ರಾಜೀವ್ ಶುಕ್ಲಾ ತನಿಖೆ ಮಾಡಿ

ಅರುಣ್ ಜೇಟ್ಲಿ, ರಾಜೀವ್ ಶುಕ್ಲಾ ತನಿಖೆ ಮಾಡಿ ಎಂದು ಜಾರಿ ನಿರ್ದೇಶನಾಲಯಕ್ಕೆ ಲಮೋ ಮನವಿ.

ಕ್ರಿಕೆಟ್ ಹಗರಣದತ್ತ ಲಮೋ ನೋಟ

ಇದಾದ ಬಳಿಕ ಕ್ರಿಕೆಟ್ ಹಗರಣದತ್ತ ಲಮೋ ನೋಟ, ಕ್ರಿಕೆಟ್ ದಕ್ಷಿಣ ಆಫ್ರಿಕಾ ಜೊತೆ ಎನ್ ಶ್ರೀನಿವಾಸನ್ ಡೀಲ್ ಹಾಗೂ ಲಮೋ ಕಡೆಗಣಿಸಿದ್ದರ ಬಗ್ಗೆ ಟ್ವೀಟ್

ಲಂಡನ್ನಿನ ನನ್ನ ಮನೆಗೆ ನೀವು ಬಂದಿಲ್ಲವೇ?

ಲಂಡನ್ನಿನ ನನ್ನ ಮನೆಗೆ ನೀವು ಬಂದಿಲ್ಲವೇ? ವರುಣ್ ದಯವಿಟ್ಟು ನೀವು ಮಾತಾಡಿ ರಿಟ್ಜ್ ಹೋಟೆಲ್ ನಲ್ಲಿ ತಂಗಿಲ್ಲವೇ ಎಂದು ಪ್ರಶ್ನ್ಸಿಸಿದ್ದಾರೆ.

English summary
Scam tainted former IPL chief Lalit Modi today sought to drag BJP leader Varun Gandhi in the Lalitgate controversy alleging that a deal was offered to settle matters with Sonia Gandhi, which Varun dubbed as "baseless" and "nonsense".
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X