ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೆಕ್ಷನ್ 377 ಕುರಿತ ಐತಿಹಾಸಿಕ ತೀರ್ಪಿನ ಸಾರಾಂಶ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 6: ಸೆಕ್ಷನ್ 377ರ ಕುರಿತಾದ ಸುಪ್ರೀಂಕೋರ್ಟ್ ತೀರ್ಪು ದೇಶದಾದ್ಯಂತ ಸಂಚಲನ ಮೂಡಿಸಿದೆ.

ಸೆಕ್ಷನ್ 377ರ ಅಡಿ ಸಲಿಂಗಕಾಮ ಅಪರಾಧ ಎಂಬ ಕಾನೂನನ್ನು ಸುಪ್ರೀಂಕೋರ್ಟ್ ಸಡಿಲಗೊಳಿಸಿದೆ. ವಯಸ್ಕ ಸಮಾನಲಿಂಗಿಗಳ ನಡುವೆ ಖಾಸಗಿಯಾಗಿ ನಡೆಯುವ ಸಹಮತದ ಲೈಂಗಿಕ ಕ್ರಿಯೆ ಅಪರಾಧವಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ.

ಸಲಿಂಗಕಾಮ ಅಪರಾಧವಲ್ಲ : ಸುಪ್ರೀಂ ನ್ಯಾಯಮೂರ್ತಿಗಳು ಹೇಳಿದ್ದೇನು?ಸಲಿಂಗಕಾಮ ಅಪರಾಧವಲ್ಲ : ಸುಪ್ರೀಂ ನ್ಯಾಯಮೂರ್ತಿಗಳು ಹೇಳಿದ್ದೇನು?

ಆದರೆ, ಸಹಮತವಿಲ್ಲದ, ಕ್ರೂರವಾದ ಮತ್ತು ಪ್ರಾಣಿಗಳೊಂದಿಗೆ ನಡೆಸುವ ಅಸ್ವಾಭಾವಿಕ ಲೈಂಗಿಕ ಕ್ರಿಯೆ ಅಪರಾಧ ಎಂದೇ ಪರಿಗಣಿತವಾಗಲಿದೆ ಎಂದು ನ್ಯಾಯಪೀಠ ಹೇಳಿದೆ.

ಸೆಕ್ಷನ್ 377ರ ಬಗ್ಗೆ ಸುಪ್ರೀಂಕೋರ್ಟ್ ನೀಡಿದ ತೀರ್ಪಿನ ಸಾರಾಂಶ

* ಎಲ್‌ಜಿಬಿಟಿ ಸಮುದಾಯದವರು ಖಾಸಗಿಯಾಗಿ ಸಹಮತದ ಲೈಂಗಿಕ ಕ್ರಿಯೆ ನಡೆಸುವುದು ಸೆಕ್ಷನ್ 377ರ ಅಡಿಯಲ್ಲಿ ಇನ್ನು ಮುಂದೆ ಅಪರಾಧವಲ್ಲ.

* ಕ್ರೂರವಾಗಿ ಅಥವಾ ಒಪ್ಪಿಗೆ ಇಲ್ಲದೆ ನಡೆಸುವ ಲೈಂಗಿಕ ಕ್ರಿಯೆಗಳಿಗೆ ಸೆಕ್ಷನ್ 377 ಅನ್ವಯವಾಗುತ್ತದೆ

ಸಲಿಂಗಿಗಳ ಮದುವೆಗೆ ಕಾನೂನು ಮಾನ್ಯತೆ ಇರುವ ದೇಶಗಳಿವುಸಲಿಂಗಿಗಳ ಮದುವೆಗೆ ಕಾನೂನು ಮಾನ್ಯತೆ ಇರುವ ದೇಶಗಳಿವು

* ಪ್ರಾಣಿಗಳೊಂದಿಗೆ ಲೈಂಗಿಕ ಕ್ರಿಯೆ ನಡೆಸುವುದು ಐಪಿಸಿ ಸೆಕ್ಷನ್ 377ರ ಅಡಿ ಅಪರಾಧವಾಗಿಯೇ ಉಳಿಯಲಿದೆ.

* ಸೆಕ್ಷನ್ 377 ವಿಚಾರಹೀನ, ಅಸಮರ್ಥನೀಯ ಮತ್ತು ಸ್ಪಷ್ಟವಾಗಿ ಕಟ್ಟಳೆಗೆ ಒಳಪಡುವುದಿಲ್ಲ.

* ಇತರೆ ನಾಗರಿಕರಂತೆಯೇ ಎಲ್‌ಜಿಬಿಟಿ ಸಮುದಾಯವೂ ಸಮಾನ ಹಕ್ಕುಗಳನ್ನು ಹೊಂದಿವೆ.

* ಎಲ್‌ಜಿಬಿಟಿ ಸಮುದಾಯಕ್ಕೆ ಜೀವಿಸುವ ಹಕ್ಕಿನ ಭಾಗವಾದ ಖಾಸಗಿತನದ ಹಕ್ಕು ಸಂಪೂರ್ಣವಾಗಿ ಅನ್ವಯವಾಗುತ್ತದೆ.

ಸಹಮತದ ಸಲಿಂಗಕಾಮ ಅಪರಾಧವಲ್ಲ ಎಂದ ಸುಪ್ರೀಂ ಕೋರ್ಟ್ಸಹಮತದ ಸಲಿಂಗಕಾಮ ಅಪರಾಧವಲ್ಲ ಎಂದ ಸುಪ್ರೀಂ ಕೋರ್ಟ್

* ದೇಹದ ಕುರಿತ ನಿರ್ಧಾರ ವೈಯಕ್ತಿಕವಾದದ್ದು. ಅದು ಆಯ್ಕೆಗೆ ಸಂಬಂಧಿಸಿದ್ದು ಹಾಗೂ ಘನತೆಯ ಭಾಗ.

* ಸ್ವಯಂ ಅಭಿವ್ಯಕ್ತಿಯನ್ನು ನಿರಾಕರಿಸುವುದು ಸಾವಿಗೆ ಸಮಾನ.

* ಗುರುತಿನ ಪೋಷಣೆ ಬದುಕಿನ ಪಿರಾಮಿಡ್‌ನ ಭಾಗ

SC verdict on section 377: LGBT Explained in a nut-shell

English summary
The Supreme Court on Thursday struck down Section 377 of the Indian Code partially. While it held that consensual same sex between adults in private is not an offence, it also said that acts without consent would remain an offence.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X