ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ಹಿಂದೆ ಕೂಡ ರಫೇಲ್ ನಂಥ ಅಗ್ನಿ ಪರೀಕ್ಷೆ ಎದುರಿಸಿತ್ತು!

|
Google Oneindia Kannada News

ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ಪ್ರಚಾರದ ವೇಳೆ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ತಮ್ಮ ಭಾಷಣವನ್ನು ಆರಂಭಿಸುತ್ತಿದ್ದದ್ದೇ ರಫೇಲ್.. ಮೋದಿಜೀ.. ಅನಿಲ್ ಅಂಬಾನಿ.. ಎಂದು. ಅದೆಷ್ಟೋ ಬಾರಿ ತಮ್ಮ ಭಾಷಣದ ವೇಳೆ, ಪ್ರಧಾನಿ ಹುದ್ದೆಗೆ ಗೌರವವನ್ನೂ ಕೊಡದೇ ಚೌಕೀದಾರ್ ಚೋರ್ ಹೇ ಅಂದಿದ್ದರು.

ಸರ್ವೋಚ್ಚ ನ್ಯಾಯಾಲಯದ ಕಟಕಟೆಯಲ್ಲಿದ್ದ ರಫೇಲ್ ಹಗರಣಕ್ಕೆ ಸುಪ್ರೀಂಕೋರ್ಟ್ ಶುಕ್ರವಾರ (ಡಿ 14) ಮಂಗಳ ಹಾಡಿದೆ. ಡೀಲ್ ಕುರಿತ ವಿಚಾರಣೆಯ ಎಲ್ಲಾ ಅರ್ಜಿಯನ್ನು ವಜಾಗೊಳಿಸಿದ ಸುಪ್ರೀಂ ಕೋರ್ಟ್, ರಫೇಲ್ ಪ್ರಕ್ರಿಯೆಯಲ್ಲಿ ಪಕ್ಷಪಾತ ನಡೆದಿದೆ ಎಂಬುದಕ್ಕೆ ಸಾಕ್ಷ್ಯಗಳಿಲ್ಲ ಎನ್ನುವ ಆದೇಶ ನೀಡಿದೆ.

ಬಿಜೆಪಿ ವಿರುದ್ದ ತಿರುಗಿಬೀಳಲು ವಿರೋಧ ಪಕ್ಷಗಳಿಗೆ ಮಹಾನ್ ಅಸ್ತ್ರ ಸಿಗಬಹುದು ಎಂದೇ ವ್ಯಾಖ್ಯಾನಿಸಲಾಗುತ್ತಿದ್ದ ಈ ಹಗರಣದ ತೀರ್ಪು, ಬಿಜೆಪಿ ನಿರಾಳವಾಗುವಂತೆ ಮಾಡಿದ್ದು, ಪಂಚ ರಾಜ್ಯಗಳ ಸೋಲಿನ ಒತ್ತಡದಿಂದ ಹೊರಬರಲು ಅಮಿತ್ ಶಾ, ಮೋದಿ & ಟೀಂಗೆ ಒಂದೊಳ್ಳೆ ಅವಕಾಶ ಸಿಕ್ಕಂತಾಗಿದೆ.

ಸಿಕ್ಕ ಅವಕಾಶಗಳನ್ನು ಭರ್ಜರಿಯಾಗಿ ಎಲ್ಲಾ ಕಾರ್ನರ್ ಗಳಿಂದ ಬಳಸಿಕೊಳ್ಳುತ್ತಿರುವ ಬಿಜೆಪಿ, ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ವಿರುದ್ದ ಟೀಕೆಗಳ ಸುರಿಮಳೆಯನ್ನೇ ಹರಿಸುತ್ತಿದ್ದಾರೆ. ಇದಕ್ಕೆ ಪ್ರತ್ಯುತ್ತರ ನೀಡುತ್ತಿರುವ ಕಾಂಗ್ರೆಸ್, ಜೆಪಿಸಿ (ಜಂಟಿ ಪಾರ್ಲಿಮೆಂಟರಿ ಕಮಿಟಿ) ತನಿಖೆ ನಡೆಯಲಿ ಎಂದು ಆಗ್ರಹಿಸುತ್ತಿದೆ.

ರಫೇಲ್ ಡೀಲ್ : ಚೌಕಿದಾರ್ ಚೋರ್ ಎಂದಿದ್ದ ರಾಹುಲ್ ಗೆ ಭಾರೀ ಮುಖಭಂಗರಫೇಲ್ ಡೀಲ್ : ಚೌಕಿದಾರ್ ಚೋರ್ ಎಂದಿದ್ದ ರಾಹುಲ್ ಗೆ ಭಾರೀ ಮುಖಭಂಗ

ಚುನಾವಣೆಯ ಸಂದರ್ಭಗಳಲ್ಲಿ, ಅದು ಅಸೆಂಬ್ಲಿ ಚುನಾವಣೆಯೇ ಇರಲಿ, ಲೋಕಸಭಾ ಚುನಾವಣೆಯೇ ಇರಲಿ, ಬಿಜೆಪಿ ಇಂತಹ ಅಪವಾದಗಳನ್ನು ಎದುರಿಸುತ್ತಿರುವುದಕ್ಕೆ ಹಲವು ಉದಾಹರಣೆಗಳಿವೆ. ಮುಂದೆ ಓದಿ..

ಅಟಲ್ ಬಿಹಾರಿ ವಾಜಪೇಯಿ ಕಾಲ

ಅಟಲ್ ಬಿಹಾರಿ ವಾಜಪೇಯಿ ಕಾಲ

ಮಾಜಿ, ದಿವಂಗತ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಕಾಲದಲ್ಲಿ ಮತ್ತು ಈಗಿನ ಮೋದಿ, ಯಡಿಯೂರಪ್ಪನವರವರೆಗೆ, ನ್ಯಾಯಾಲಯದಲ್ಲಿದ್ದ ಪ್ರಕರಣಗಳನ್ನು ಇಟ್ಟುಕೊಂಡು ವಿರೋಧ ಪಕ್ಷಗಳು ಬಿಜೆಪಿಯನ್ನು ರುಬ್ಬಿದ್ದೇ ರುಬ್ಬಿದ್ದು. ಆದರೆ, ಚುನಾವಣಾ ಫಲಿತಾಂಶ ಹೊರಬಂದ ನಂತರ, ನ್ಯಾಯಾಲಯದ ತೀರ್ಪು, ಬಿಜೆಪಿ ಪರವಾಗಿಯೇ ಇದಿದ್ದಕ್ಕೆ ಕೆಲವು ಉದಾಹರಣೆಗಳಿವೆ. ನ್ಯಾಯಾಲಯದಲ್ಲಿದ್ದ ಪ್ರಕರಣಗಳು ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲು ತಡೆಯೊಡ್ಡಿದ ಪ್ರಮುಖ ಅಂಶ ಎನ್ನಲು ಸಾಧ್ಯವಿಲ್ಲದಿದ್ದರೂ, ಮತದಾರನ ಮೇಲೆ ಪ್ರಭಾವ ಸ್ವಲ್ಪಮಟ್ಟಿಗಾದರೂ ಬೀರಿತ್ತು. ಯಾವುದು ಅಂತಹ ಪ್ರಕರಣಗಳು, ಮುಂದಿನ ಸ್ಲೈಡಿನಲ್ಲಿ ಮುಂದುವರಿಸಲಾಗಿದೆ.

ಕಿವುಡನಿಗೆ ಉತ್ತರ ಕೇಳಿಸುವುದಿಲ್ಲ: ರಾಹುಲ್‌ ವಿರುದ್ಧ ಜೇಟ್ಲಿ ವ್ಯಂಗ್ಯ ಕಿವುಡನಿಗೆ ಉತ್ತರ ಕೇಳಿಸುವುದಿಲ್ಲ: ರಾಹುಲ್‌ ವಿರುದ್ಧ ಜೇಟ್ಲಿ ವ್ಯಂಗ್ಯ

1999ರಲ್ಲಿ ನಡೆದ ಕಾರ್ಗಿಲ್ ಯುದ್ದ

1999ರಲ್ಲಿ ನಡೆದ ಕಾರ್ಗಿಲ್ ಯುದ್ದ

1999ರಲ್ಲಿ ನಡೆದ ಕಾರ್ಗಿಲ್ ಯುದ್ದದಲ್ಲಿ ಮೃತಪಟ್ಟ ಯೋಧರ ಅಂತ್ಯ ಸಂಸ್ಕಾರಕ್ಕೆ ಶವಪೆಟ್ಟಿಗೆ (ಕೋಫಿನ್) ಖರೀದಿ ಹಗರಣವನ್ನು ಇಟ್ಟುಕೊಂಡು, ಕಮ್ಯೂನಿಸ್ಟರು ಮತ್ತು ಕಾಂಗ್ರೆಸ್, ವಾಜಪೇಯಿ ನೇತೃತ್ವದ ಎನ್ಡಿಎ ಸರಕಾರದ ವಿರುದ್ದ ತಿರುಗಿಬಿದ್ದಿತ್ತು. 1,87,000 ಅಮೆರಿಕನ್ ಡಾಲರ್ ಹಗರಣ ಇದು ಎಂದು ಕಾಂಗ್ರೆಸ್ ಆರೋಪಿಸಿತ್ತು. ಮೃತ ಯೋಧರ ಶವಪೆಟ್ಟಿಗೆಯಲ್ಲೂ ಬಿಜೆಪಿ ಕಮಿಷನ್ ಹೊಡೆದಿದೆ ಎಂದು ಕಾಂಗ್ರೆಸ್ ಆರೋಪಿಸಿತ್ತು, ಎಡ ಪಕ್ಷದವರೂ ಹಿಂದೆ ಬಿದ್ದಿರಲಿಲ್ಲ.

ರಾಹುಲ್ ಗಾಂಧಿ ಭಾಷಣವೂ ಮತ್ತು ರಫೇಲ್ ಫೈಟರ್ ಜೆಟ್ ಮೌಲ್ಯವೂ! ರಾಹುಲ್ ಗಾಂಧಿ ಭಾಷಣವೂ ಮತ್ತು ರಫೇಲ್ ಫೈಟರ್ ಜೆಟ್ ಮೌಲ್ಯವೂ!

ಕಾಂಗ್ರೆಸ್ ನೇತೃತ್ವದ ಯುಪಿಎ + ಕಮ್ಯೂನಿಸ್ಟರು

ಕಾಂಗ್ರೆಸ್ ನೇತೃತ್ವದ ಯುಪಿಎ + ಕಮ್ಯೂನಿಸ್ಟರು

2004ರ ಲೋಕಸಭಾ ಚುನಾವಣೆಯನ್ನು ಶವಪೆಟ್ಟಿಗೆ ವಿಚಾರವನ್ನು ಪ್ರಮುಖವಾಗಿ ಇಟ್ಟುಕೊಂಡೇ ಕಣಕ್ಕಿಳಿದ್ದಿದ್ದ ಕಾಂಗ್ರೆಸ್ ನೇತೃತ್ವದ ಯುಪಿಎ + ಕಮ್ಯೂನಿಸ್ಟರು, ವಾಜಪೇಯಿ ನೇತೃತ್ವದ ಎನ್ಡಿಎ ಸರಕಾರ ಮತ್ತೆ ಅಧಿಕಾರಕ್ಕೆ ಬರುವುದನ್ನು ತಪ್ಪಿಸಲು ಯಶಸ್ವಿಯಾಗಿದ್ದರು. ಆದರೆ, ಈ ಹಗರಣದ ನಂತರ ನಡೆದ ಎರಡು ಸಾರ್ವತ್ರಿಕ ಚುನಾವಣೆಯ ಬಳಿಕ ಸಿಬಿಐ ಮತ್ತು ಸರ್ವೋಚ್ಚ ನ್ಯಾಯಾಲಯದಿಂದ, ಎನ್ಡಿಎ ಸರಕಾರ, ವಾಜಪೇಯಿ ಮತ್ತು ಕಾರ್ಗಿಲ್ ಯುದ್ದದ ವೇಳೆ ರಕ್ಷಣಾ ಸಚಿವರಾಗಿದ್ದ ಜಾರ್ಜ್ ಫೆರ್ನಾಂಡಿಸ್ ಅವರಿಗೆ ಕ್ಲೀನ್ ಚಿಟ್ ಸಿಕ್ಕಿತ್ತು.

ರಾಹುಲ್ ಸುಳ್ಳಿಗೆ ಸುಪ್ರೀಂ ಛೀಮಾರಿ: ಅಮಿತ್ ಶಾ ಲೇವಡಿ ರಾಹುಲ್ ಸುಳ್ಳಿಗೆ ಸುಪ್ರೀಂ ಛೀಮಾರಿ: ಅಮಿತ್ ಶಾ ಲೇವಡಿ

ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ

ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ

ಸುಪ್ರೀಂಕೋರ್ಟ್ ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಿರುದ್ಧ ದಾಖಲಾಗಿದ್ದ 5 ಪ್ರಕರಣಗಳನ್ನು ವಜಾಗೊಳಿಸಿ ಇದೇ ಡಿಸೆಂಬರ್ ನಾಲ್ಕರಂದು ಆದೇಶ ಹೊರಡಿಸಿತ್ತು. ಯಡಿಯೂರಪ್ಪ ಹಾಗೂ ಅವರ ಕುಟುಂಬ ಸದಸ್ಯರ ವಿರುದ್ಧ ಶಿವಮೊಗ್ಗ ಮೂಲದ ವಕೀಲ ಸಿರಾಜಿನ್ ಪಾಷಾ 5 ಕೇಸುಗಳನ್ನು ದಾಖಲಿಸಿದ್ದರು. ಈ ಪ್ರಕರಣಗಳನ್ನು ರದ್ದುಗೊಳಿಸುವಂತೆ ಕೋರಿ ಯಡಿಯೂರಪ್ಪ ಕಾನೂನು ಹೋರಾಟ ನಡೆಸುತ್ತಿದ್ದರು. ಕರ್ನಾಟಕದಲ್ಲಿ ಹೊಸ ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂದ ಆರು ತಿಂಗಳ ನಂತರ ಈ ಆದೇಶ ಹೊರಬಿದ್ದಿದೆ. ಅಸೆಂಬ್ಲಿ ಚುನಾವಣೆಯಲ್ಲಿ ಜೆಡಿಎಸ್, ಕಾಂಗ್ರೆಸ್ ಅದರಲ್ಲೂ ಪ್ರಮುಖವಾಗಿ ಮಾಜಿ ಸಿಎಂ ಸಿದ್ದರಾಮಯ್ಯನವರು, ಬಿಎಸ್ವೈ ಅವರನ್ನು 'ಜೈಲಿಗೆ ಹೋಗಿ ಬಂದವರು' ಎಂದು ಹೋದಲೆಲ್ಲಾ ಟೀಕಿಸಿದ್ದರು.

ಯುದ್ದ ವಿಮಾನ ಖರೀದಿ ಪ್ರಕ್ರಿಯೆ ಮತ್ತು ದರ ನಿರ್ಧಾರ

ಯುದ್ದ ವಿಮಾನ ಖರೀದಿ ಪ್ರಕ್ರಿಯೆ ಮತ್ತು ದರ ನಿರ್ಧಾರ

ಇನ್ನು ರಫೇಲ್ ವಿವಾದ. ಯುದ್ದ ವಿಮಾನ ಖರೀದಿ ಪ್ರಕ್ರಿಯೆ ಮತ್ತು ದರ ನಿರ್ಧಾರ ಕುರಿತು ಸ್ವತಂತ್ರ ತನಿಖೆ ನಡೆಸುವ ಅಗತ್ಯವಿದೆ ಎಂದು ಸರ್ವೋಚ್ಚ ನ್ಯಾಯಾಲಯದಲ್ಲಿ ಪಿಐಎಲ್ ದಾಖಲಾಗಿತ್ತು. ಖರೀದಿ ದರ ವಿವರ ಒದಗಿಸುವಂತೆ ಕೇಂದ್ರಕ್ಕೆ ಸುಪ್ರೀಂ ಸೂಚಿಸಿತ್ತು. ಮುಚ್ಚಿದ ಲಕೋಟೆಯಲ್ಲಿ ಸುಪ್ರೀಂ ಸೂಚಿಸಿದ್ದ ದಾಖಲೆಗಳನ್ನು ಕೇಂದ್ರ ನೀಡಿತ್ತು. ವಾದವಿವಾದಗಳನ್ನು ಆಲಿಸಿದ ಸುಪ್ರೀಂ, ಈ ವಿಚಾರದಲ್ಲಿ ಯಾವುದೇ ಅಕ್ರಮ ನಡೆದಿಲ್ಲ. ಸಂದೇಹ ಪಡುವುದಕ್ಕೆ ಕಾರಣವೇ ಇಲ್ಲ ಎಂದು ತೀರ್ಪು ನೀಡಿತ್ತು. ಪಂಚ ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ತನ್ನ ವಿರೋಧಿ ಬಿಜೆಪಿ ಮತ್ತು ಮೋದಿಯ ವಿರುದ್ದ ಪ್ರತೀ ಸಾರ್ವಜನಿಕ ಭಾಷಣದಲ್ಲೂ ಈ ವಿಚಾರವನ್ನು ಇಟ್ಟುಕೊಂಡು ಟೀಕಿಸಿತ್ತು.

English summary
Supreme Court verdict on Rafale defence deal: This is not happening first time to BJP. Earlier during 2004 general election, opposition was criticizing Vajapyee led NDA government over Kargil coffin issue and Yeddyurppa over land scam and now Rafale deal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X