ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಬ್ಲಿಘಿ ಜಮಾತ್ ಸದಸ್ಯರ ವಿರುದ್ಧದ ಪ್ರಕರಣಗಳ ತ್ವರಿತ ವಿಚಾರಣೆಗೆ ಸುಪ್ರೀಂಕೋರ್ಟ್ ಸೂಚನೆ

|
Google Oneindia Kannada News

ನವದೆಹಲಿ, ನವೆಂಬರ್ 2: ವೀಸಾ ನಿಯಮಾವಳಿಗಳ ಉಲ್ಲಂಘನೆಗೆ ಸಂಬಂಧಿಸಿದಂತೆ ತಬ್ಲಿಘಿ ಜಮಾತ್ ಸಂಘಟನೆಯ ವಿದೇಶಿ ಸದಸ್ಯರ ವಿರುದ್ಧದ ಬಾಕಿ ಉಳಿದಿರುವ ಪ್ರಕರಣಗಳ ವಿಚಾರಣೆಯನ್ನು ತ್ವರಿತಗೊಳಿಸುವಂತೆ ಕೆಳಹಂತದ ನ್ಯಾಯಾಲಯಗಳಿಗೆ ಸುಪ್ರೀಂಕೋರ್ಟ್ ಸೋಮವಾರ ಸೂಚಿಸಿದೆ.

ನಿಜಾಮುದ್ದೀನ್ ಮರ್ಕಜ್‌ನಲ್ಲಿ ನಡೆದ ಸಮಾವೇಶದಲ್ಲಿ ಭಾಗವಹಿಸಿದ್ದ ತಬ್ಲಿಘಿ ಜಮಾತ್‌ನ ವಿದೇಶಿ ಸದಸ್ಯರನ್ನು ಕಪ್ಪುಪಟ್ಟಿಗೆ ಸೇರಿಸಿದ್ದರ ವಿರುದ್ಧ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆಯನ್ನು ನವೆಂಬರ್ 20ಕ್ಕೆ ನಿಗದಿಪಡಿಸಿದ ನ್ಯಾಯಮೂರ್ತಿಗಳಾದ ಎ.ಎಂ. ಖಾನ್ವಿಲ್ಕರ್, ದಿನೇಶ್ ಮಹೇಶ್ವರಿ ಮತ್ತು ಸಂಜೀವ್ ಖನ್ನಾ ಅವರನ್ನು ಒಳಗೊಂಡ ನ್ಯಾಯಪೀಠ, ಈ ಪ್ರಕರಣಗಳ ವಿಚಾರಣೆಯನ್ನು ವೇಗವಾಗಿ ನಡೆಸುವಂತೆ ಕೆಳ ನ್ಯಾಯಾಲಯಗಳಿಗೆ ನಿರ್ದೇಶಿಸಿತು.

ತಬ್ಲಿಘಿ ಜಮಾತ್; ಭಾರತಕ್ಕೆ 10 ವರ್ಷ ಬರದಂತೆ ನಿರ್ಬಂಧ ತಬ್ಲಿಘಿ ಜಮಾತ್; ಭಾರತಕ್ಕೆ 10 ವರ್ಷ ಬರದಂತೆ ನಿರ್ಬಂಧ

ತಬ್ಲಿಘಿ ಜಮಾತ್ ಸದಸ್ಯರ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲರಾದ ಮನೇಕಾ ಗುರುಸ್ವಾಮಿ, ಎಂಟು ಸದಸ್ಯರ ಬಿಡುಗಡೆಗೆ ಸಂಬಂಧಿಸಿದ ಅರ್ಜಿಗಳ ವಿಚಾರಣೆಯನ್ನು ಕೆಳಹಂತದ ನ್ಯಾಯಾಲಯಗಳಲ್ಲಿ ನ. 10ಕ್ಕೆ ನಿಗದಿಗೊಳಿಸಲಾಗಿದೆ ಎಂದು ತಿಳಿಸಿದರು.

SC Trail Courts To Expedite Hearing Against Foreign Tablighi Jamaat In Visa Violation Cases

ಜಮಾತ್‌ನ ಕೆಲವು ವಿದೇಶಿ ಸದಸ್ಯರು ಬಿಡುಗಡೆಯಾದ ಪ್ರಕರಣಗಳಲ್ಲಿ ಅಧಿಕಾರಿಗಳು ಮರು ಪರಿಶೀಲನೆಗೆ ಕೇಳಿದ್ದಾರೆ ಎಂದು ಮತ್ತೊಬ್ಬ ಹಿರಿಯ ವಕೀಲ ಸಿ.ಯು ಸಿಂಗ್ ಹೇಳಿದರು.

ತಬ್ಲಿಘಿ ಜಮಾತ್‌; ಜಾಮೀನು, ಕ್ರಿಮಿನಲ್ ಕೇಸ್ ರದ್ದು, ದೇಶಕ್ಕೆ ವಾಪಸ್ತಬ್ಲಿಘಿ ಜಮಾತ್‌; ಜಾಮೀನು, ಕ್ರಿಮಿನಲ್ ಕೇಸ್ ರದ್ದು, ದೇಶಕ್ಕೆ ವಾಪಸ್

Recommended Video

DK Ravi ನಾನು ತುಂಬಾ ಚನ್ನಾಗಿದ್ವಿ! | Kusuma Exclusive Interview | Part 2 | Oneindia Kannada

ಇಂತಹ ಅರ್ಜಿಗಳನ್ನು ನ್ಯಾಯಾಲಯಗಳು ಬೇಗನೆ ವಿಚಾರಣೆ ನಡೆಸಬೇಕು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು. ತಬ್ಲಿಘಿ ಜಮಾತ್‌ನ ವಿದೇಶಿ ಸದಸ್ಯರುಗಳ ವಿರುದ್ಧ 11 ರಾಜ್ಯಗಳಲ್ಲಿ ಒಟ್ಟು 205 ಎಫ್‌ಐಆರ್‌ಗಳು ದಾಖಲಾಗಿವೆ. ಇದುವರೆಗೂ 2,765 ಸದಸ್ಯರನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದೆ ಎಂದು ಕೇಂದ್ರ ಸರ್ಕಾರ ತನ್ನ ಪ್ರಮಾಣಪತ್ರದಲ್ಲಿ ತಿಳಿಸಿದೆ. ಇವರಲ್ಲಿ 2,679 ವಿದೇಶಿಗರು (9 ಭಾರತದ ಹೊರದೇಶದ ನಾಗರಿಕರು-ಒಸಿಐ) ಸೇರಿದ್ದಾರೆ. ಉಳಿದ 86 ನೇಪಾಳಿ ಪ್ರಜೆಗಳಿಗೆ ವೀಸಾದ ಅಗತ್ಯವಿರಲಿಲ್ಲ.

English summary
Supreme Court on Monday has directed Trial courts to expedite hearing in the cases against Tablighi Jamaat members for alleged Visa violations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X