ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಕಲಿ ಎನ್ ಕೌಂಟರ್ ಕೇಸ್ : ಮೋದಿ ವಿರುದ್ಧ ತಿರುಗಿಬಿದ್ದ ಪತ್ರಕರ್ತ, ಸಾಹಿತಿ

|
Google Oneindia Kannada News

ಅಹಮದಾಬಾದ್/ ನವದೆಹಲಿ, ಡಿಸೆಂಬರ್ 03: ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗ ನಡೆದಿದೆ ಎನ್ನಲಾದ 22ಕ್ಕೂ ಅಧಿಕ ನಕಲಿ ಎನ್ ಕೌಂಟರ್ ಪ್ರಕರಣ ಮತ್ತೊಮ್ಮೆ ಸುಪ್ರೀಂಕೋರ್ಟಿನಲ್ಲಿ ವಿಚಾರಣೆಗೆ ಬರುತ್ತಿದೆ. ಮೋದಿ ವಿರುದ್ಧ ಪತ್ರಕರ್ತರೊಬ್ಬರು ಹಾಗೂ ಜನಪ್ರಿಯ ಸಾಹಿತಿಯೊಬ್ಬರು ನೀಡಿದ ದೂರನ್ನು ಕೋರ್ಟ್ ಮಾನ್ಯ ಮಾಡಿದೆ.

ತುಳಸಿರಾಮ್ ಎನ್ ಕೌಂಟರ್ : ಅಮಿತ್ ಶಾ ವಿರುದ್ಧ ಕೊಲೆ ಸಂಚು ಆರೋಪ ತುಳಸಿರಾಮ್ ಎನ್ ಕೌಂಟರ್ : ಅಮಿತ್ ಶಾ ವಿರುದ್ಧ ಕೊಲೆ ಸಂಚು ಆರೋಪ

ಹಿರಿಯ ಪತ್ರಕರ್ತ ಬಿ.ಜಿ ವರ್ಗೀಸ್ ಹಾಗೂ ಗೀತ ಸಾಹಿತಿ ಜಾವೇದ್ ಅಖ್ತರ್ ಅವರು ಮೋದಿ ವಿರುದ್ಧ ನೀಡಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಸ್ವೀಕರಿಸಿದೆ. 22 ಎನ್ ಕೌಂಟರ್ ಪ್ರಕರಣಗಳ ಮರು ವಿಚಾರಣೆ ನಡೆಸಲು ಅನುಮತಿ ಕೋರಿದ ವರದಿಯನ್ನು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗಾಯಿ, ಜಸ್ಟೀಸ್ ಎಚ್ಎಸ್ ಬೇಡಿ ಪರಿಶೀಲಿಸಿದ್ದಾರೆ.

ನಕಲಿ ಎನ್ ಕೌಂಟರ್ : ಅಮಿತ್ ಶಾಗೆ ಕೋರ್ಟಿನಿಂದ ಕ್ಲೀನ್ ಚಿಟ್ನಕಲಿ ಎನ್ ಕೌಂಟರ್ : ಅಮಿತ್ ಶಾಗೆ ಕೋರ್ಟಿನಿಂದ ಕ್ಲೀನ್ ಚಿಟ್

ಆದರೆ, 22 ನಕಲಿ ಎನ್ ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜಸ್ಟೀಸ್ ಬೇಡಿ ಅವರ ವರದಿಯನ್ನು ಬಹಿರಂಗಪಡಿಸುವಂತಿಲ್ಲ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಪ್ರತಿಕ್ರಿಯಿಸಿದ್ದಾರೆ.

ಅಂತೂ ಇಂತೂ ವಂಜಾರಾಗೆ ಸಿಕ್ತು ಜಾಮೀನುಅಂತೂ ಇಂತೂ ವಂಜಾರಾಗೆ ಸಿಕ್ತು ಜಾಮೀನು

SC to hear pleas on 22 fake encounters in Gujarat, when Modi was CM

ಡಿಸೆಂಬರ್ 12ಕ್ಕೆ ವಿಚಾರಣೆ ಮುಂದೂಡಲಾಗಿದೆ. 2002ರಿಂದ 2007ರ ನಡುವೆ ನಡೆದಿರುವ ನಕಲಿ ಎನ್ ಕೌಂಟರ್ ಪ್ರಕರಣಗಳ ಬಗ್ಗೆ ಪತ್ರಕರ್ತ ವರ್ಗೀಸ್, ಕಾರ್ಯಕರ್ತ ಶಬಾಂಹಶ್ಮಿ ಹಾಗೂ ಸಾಹಿತಿ ಜಾವೇದ್ ಅಖ್ತರ್ ಅವರು ಮಾಹಿತಿ ಕಲೆ ಹಾಕಿ ಅಂದಿನ ಗುಜರಾತ್ ಸರ್ಕಾರದ ವಿರುದ್ಧ ಕೋರ್ಟಿಗೆ ವರದಿ ನೀಡಿದ್ದಾರೆ.

English summary
The Supreme Court will hear a plea on the 22 alleged fake encounters that took place in Gujarat when Narendra Modi was the Chief Minister of the state. The petitions were filed by veteran journalist, B G Verghese and lyricist, Javed Akhtar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X