ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಲಿಂಗಕಾಮ ಅಪರಾಧವಲ್ಲ: ಅರ್ಜಿದಾರರ ಪರ ವಕೀಲರ ವಾದ

|
Google Oneindia Kannada News

ನವದೆಹಲಿ, ಜುಲೈ 10: ಸಲಿಂಗ ಕಾಮ ಅಪರಾಧವಲ್ಲ ಎಂಬ ದೆಹಲಿ ಹೈಕೋರ್ಟ್‌ನ ತೀರ್ಪನ್ನು ವಜಾಗೊಳಿಸಿ 2013ರಲ್ಲಿ ತಾನು ನೀಡಿದ ತೀರ್ಪಿನ ಕುರಿತು ಮರುಪರಿಶೀಲನೆ ನಡೆಸುವುದಾಗಿ ಸುಪ್ರೀಂಕೋರ್ಟ್ ಹೇಳಿದೆ.

ಸಲಿಂಗ ಕಾಮ ಅಪರಾಧ ಎಂದು ಪರಿಗಣಿಸುವ ಐಪಿಸಿ ಸೆಕ್ಷನ್ 377ಅನ್ನು ರದ್ದುಗೊಳಿಸುವಂತೆ ಕೋರಿ ವಿವಿಧ ಸಂಘ ಸಂಸ್ಥೆಗಳು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಮಂಗಳವಾರ ನಡೆಸಿದ ಸುಪ್ರೀಂಕೋರ್ಟ್, ಅದನ್ನು ಬುಧವಾರವೂ ಮುಂದುವರಿಸಲಿದೆ.

ಸಲಿಂಗಕಾಮ ಹಿಂದುತ್ವಕ್ಕೆ ವಿರೋಧಿ : ಸುಬ್ರಮಣಿಯನ್ ಸ್ವಾಮಿಸಲಿಂಗಕಾಮ ಹಿಂದುತ್ವಕ್ಕೆ ವಿರೋಧಿ : ಸುಬ್ರಮಣಿಯನ್ ಸ್ವಾಮಿ

ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ನೇತೃತ್ವದ ಸಾಂವಿಧಾನಿಕ ಪೀಠ, ಸೆಕ್ಷನ್ 377ರ ಸಾಂವಿಧಾನಿಕ ಅಸ್ತಿತ್ವ ಹಾಗೂ ಸಲಿಂಗಿಗಳ ಮೂಲಭೂತ ಹಕ್ಕುಗಳ ಕುರಿತು ಪರಿಶೀಲನೆ ನಡೆಸುವುದಾಗಿ ತಿಳಿಸಿದೆ.

sc to continue hearing on section 377 issue

ಸಲಿಂಗ ಕಾಮ ಅಪರಾಧವಾಗಲಾರದು ಎಂದು ಅರ್ಜಿದಾರರ ಪರವಾದ ವಕೀಲರು ವಾದ ಮಂಡಿಸಿದರು.

ಒಬ್ಬ ವ್ಯಕ್ತಿಯು ವಿಭಿನ್ನ ಲೈಂಗಿಕ ಆಸಕ್ತಿ ಹೊಂದಿದ್ದರೆ ಅದನ್ನು ಅಪರಾಧ ಎಂದು ಪರಿಗಣಿಸಬಾರದು. ಅದು ನಿಸರ್ಗದ ನಿಯಮಕ್ಕೆ ವಿರುದ್ಧವಾದುದು ಎಂಬುದಾಗಿಯೂ ನೋಡಬಾರದು ಎಂದು ಅರವಿಂದ್ ದಟ್ಟರ್ ವಾದಿಸಿದರು.

1860ರ ಈ ಕಾನೂನನ್ನು ಭಾರತದ ಮೇಲೆ ಹೇರಲಾಗಿದೆ ಎಂದು ಅವರು ಹೇಳಿದರು.

ಸಲಿಂಗ ಸಂಬಂಧ ಅಪರಾಧ: ಸೆಕ್ಷನ್ 377ರ ವಿರುದ್ಧದ ಅರ್ಜಿ ವಿಚಾರಣೆ ಇಂದುಸಲಿಂಗ ಸಂಬಂಧ ಅಪರಾಧ: ಸೆಕ್ಷನ್ 377ರ ವಿರುದ್ಧದ ಅರ್ಜಿ ವಿಚಾರಣೆ ಇಂದು

ಅರ್ಜಿದಾರರೊಬ್ಬರ ಪರವಾಗಿ ಹಾಜರಾದ ವಕೀಲ ಮುಕುಲ್ ರೋಹಟಗಿ, ಸಮಾಜ ಬದಲಾದಂತೆ ಮೌಲ್ಯಗಳೂ ಬದಲಾಗುತ್ತವೆ. 160 ವರ್ಷಗಳ ಹಿಂದೆ ಯಾವುದು ನೈತಿಕ ಎನ್ನಲಾಗುತ್ತಿತ್ತೋ ಅದನ್ನು ಈಗ ಅನೈತಿಕ ಆಗಿರಬಹುದು ಎಂದು ಹೇಳಿದರು.

ಸೆಕ್ಷನ್ 377 ಮಾನವ ಹಕ್ಕುಗಳನ್ನು ಉಲ್ಲಂಘಿಸುತ್ತದೆ. ಲೈಂಗಿಕ ಆಸಕ್ತಿಗೂ ಲಿಂಗಕ್ಕೂ ಸಂಬಂಧವಿಲ್ಲ ಎಂದು ಅವರು ವಾದಿಸಿದರು.

English summary
Hearing on IPC Section 377 will continue on Wednesday in Supreme Court. Supreme Court said it will examine its 2013 verdict on this issue.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X