ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಲ್ಲಿದ್ದಲು ಹಗರಣ, ಸುಪ್ರೀಂ ಮಹತ್ವದ ತೀರ್ಪು

|
Google Oneindia Kannada News

ನವದೆಹಲಿ, ಆ.25 : ಕಲ್ಲಿದ್ದಲು ಹಂಚಿಕೆ ಪ್ರಕರಣದ ಬಗ್ಗೆ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಸೋಮವಾರ ಮಹತ್ವದ ಆದೇಶವೊಂದನ್ನು ನೀಡಿದೆ. ಯುಪಿಎ ಸರ್ಕಾರದ ಅವಧಿ ಸೇರಿದಂತೆ 1993ರಿಂದ ನಂತರ ಮಂಜೂರಾದ ಎಲ್ಲ ಕಲ್ಲಿದ್ದಲು ನಿಕ್ಷೇಪ ಹಂಚಿಕೆಗಳನ್ನು ಕೋರ್ಟ್ ರದ್ದುಪಡಿಸಿದೆ.

ಅರ್ಜಿಯ ವಿಚಾರಣೆ ವೇಳೆ ಕಲ್ಲಿದ್ದಲು ನಿಕ್ಷೇಪಗಳ ಹಂಚಿಕೆ ಪಾದರ್ಶಕವಾಗಿಲ್ಲ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದ್ದು, ಇಲಾಖೆಯ ಸ್ಕ್ರೀನಿಂಗ್ ಕಮಿಟಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದೆ. 1993ರಿಂದ ಈಚೆಗೆ ಮಂಜೂರಾದ ಎಲ್ಲಾ ನಿಕ್ಷೇಪಗಳ ಹಂಚಿಕೆಯನ್ನು ರದ್ದುಗೊಳಿ ಆದೇಶ ಹೊರಡಿಸಿದೆ.

supreme court

ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಮಾಡುವಾಗ ನಿಯಮಾವಳಿಗಳನ್ನು ಪಾಲಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಕೋರ್ಟ್, ಆದ್ದರಿಂದ ಹಂಚಿಕೆ ರದ್ದುಗೊಳಿಸಿರುವುದಾಗಿ ಆದೇಶದಲ್ಲಿ ಸ್ಪಷ್ಟಪಡಿಸಿದೆ. ಆದರೆ, ತನ್ನ ಆದೇಶದಲ್ಲಿ ಕೋರ್ಟ್ ಅಲ್ಟ್ರಾ ಮೆಗಾ ಪವರ್‌ ಪ್ರಾಜೆಕ್ಟ್‌ಗಳಿಗೆ ಮಂಜೂರು ಮಾಡಲಾದ ಕಲ್ಲಿದ್ದಲು ಬ್ಲಾಕ್‌ಗಳ ಹಂಚಿಕೆಯನ್ನು ರದ್ದುಗೊಳಿಸಿಲ್ಲ. [ಕಲ್ಲಿದ್ದಲು ಹಗರಣ: ಜಿಂದಾಲ್ ಮೇಲೆ ಎಫ್‌ಐಆರ್]

1993 ರಿಂದ 2009ರವರೆಗಿನ ಸಮಯದಲ್ಲಿನ ಎಲ್ಲ 32 ಹಂಚಿಕೆಗಳು ಸುಪ್ರೀಂ ಆದೇಶದ ಹಿನ್ನಲೆಯಲ್ಲಿ ರದ್ದಾಗಲಿವೆ. ಕಲ್ಲಿದ್ದಲು ನಿಕ್ಷೇಪ ಪುನರ್ ಹಂಚಿಕೆಗೆ ಸಂಬಂಧಿಸಿದಂತೆ ಸೆಪ್ಟೆಂಬರ್ ರಿಂದ ನಡೆಯುವ ವಿಚಾರಣೆಯಲ್ಲಿ ಈ ಕುರಿತ ವಾದಗಳನ್ನು ಆಲಿಸುವುದಾಗಿ ಕೋರ್ಟ್ ಆದೇಶದಲ್ಲಿ ತಿಳಿಸಿದೆ. ಅಲ್ಲದೆ, ಪ್ರಕರಣದ ವಿಚಾರಣೆಯನ್ನು ಸೆಪ್ಟೆಂಬರ್ 1ಕ್ಕೆ ಮುಂದೂಡಿದೆ.

ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಆರ್.ಎಂ.ಲೋಧಾ, ನ್ಯಾ.ಮದನ್ ಬಿ.ಲೋಕೂರ್ ಮತ್ತು ನ್ಯಾ.ಕುರಿಯನ್ ಜೋಸೆಫ್ ಅವರ ತ್ರೀ ಸದಸ್ಯಪೀಠ ಈ ಆದೇಶ ನೀಡಿದ್ದು, ಕಲ್ಲಿದ್ದಲು ಗಣಿಗಾರಿಕೆ ಪರವಾನಿಗೆ ನೀಡುವ ವಿಷಯದಲ್ಲಿ ಮುಂದಿನ ಹೆಜ್ಜೆ ಇಡಲು ಸಮಿತಿಯೊಂದನ್ನು ಸ್ಥಾಪಿಸಲು ಸೂಚನೆ ನೀಡಿದೆ.

English summary
The Supreme Court of India on Monday held that the coal blocks allocated from 1993 onwards were illegal and devoid of any procedure. The court said the allocations were done in arbitrary, non-transparent manner and were against public interest.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X