ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುಳ್ಳು ಸುದ್ದಿ, ನಕಲಿ ಖಾತೆ; ಕೇಂದ್ರ, ಟ್ವಿಟ್ಟರ್‌ಗೆ ಸುಪ್ರೀಂ ನೋಟೀಸ್

|
Google Oneindia Kannada News

ನವದೆಹಲಿ, ಫೆಬ್ರುವರಿ 12: ನಕಲಿ ಖಾತೆಗಳು ಹಾಗೂ ದ್ವೇಷ ಬಿತ್ತರಿಸುವಂಥ ಸುಳ್ಳು ಸುದ್ದಿಗಳ ಹರಡುವಿಕೆ ನಿಯಂತ್ರಣಕ್ಕೆ ಕ್ರಮ ತೆಗೆದುಕೊಳ್ಳುವ ಬಗ್ಗೆ ಕೇಂದ್ರ ಸರ್ಕಾರ ಹಾಗೂ ಟ್ವಿಟರ್‌ಗೆ ಸುಪ್ರೀಂ ಕೋರ್ಟ್ ಶುಕ್ರವಾರ ನೋಟೀಸ್ ಜಾರಿ ಮಾಡಿದೆ.

ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೊಬ್ಡೆ, ಎಸ್ ಎ ಬೋಪಣ್ಣ ಹಾಗೂ ವಿ ರಾಮಸುಬ್ರಹ್ಮಣಿಯನ್ ಅವರನ್ನೊಳಗೊಂಡ ಪೀಠವು, ಸುಳ್ಳು ಸುದ್ದಿ ಹರಡುವಿಕೆ ತಡೆ ಕುರಿತು ಸಲ್ಲಿಕೆಯಾಗಿದ್ದ ಅರ್ಜಿ ಸಂಬಂಧ ನೋಟೀಸ್ ನೀಡಿದೆ.

 ಭಾರತದಲ್ಲಿನ ತನ್ನ ತಂಡದ ಪುನರ್‌ರಚನೆಗೆ ಮುಂದಾದ ಟ್ವಿಟ್ಟರ್ ಭಾರತದಲ್ಲಿನ ತನ್ನ ತಂಡದ ಪುನರ್‌ರಚನೆಗೆ ಮುಂದಾದ ಟ್ವಿಟ್ಟರ್

ದೇಶದಲ್ಲಿ ಹಲವು ಗಲಭೆಗಳಿಗೆ ಸುಳ್ಳು ಸುದ್ದಿ ಮೂಲ ಕಾರಣಗಳಾಗುತ್ತಿದೆ. ಈಚೆಗೆ ದೆಹಲಿಯಲ್ಲಿ ನಡೆದ ಘಟನೆಯೂ ಇದಕ್ಕೆ ಹೊರತಲ್ಲ. ಜಾತೀಯತೆ, ಕೋಮುವಾದ ಹರಡಲು ಬೋಗಸ್ ಖಾತೆಗಳನ್ನು ಸೃಷ್ಟಿಸಲಾಗುತ್ತಿದೆ. ಇದು ದೇಶದ ಐಕ್ಯತೆಗೆ ಧಕ್ಕೆ ತರುತ್ತಿದೆ. ಸದ್ಯಕ್ಕೆ ಭಾರತದಲ್ಲಿ 35 ಮಿಲಿಯನ್ ಗೂ ಹೆಚ್ಚು ಟ್ವಿಟ್ಟರ್ ಖಾತೆಗಳಿದ್ದು, 350 ಮಿಲಿಯನ್ ಗೂ ಹೆಚ್ಚು ಫೇಸ್ ಬುಕ್ ಖಾತೆಗಳಿವೆ. ಇದರಲ್ಲಿ 10% ಟ್ವಿಟ್ಟರ್ ಹಾಗೂ 10% ಫೇಸ್ ಬುಕ್ ಖಾತೆಗಳು ನಕಲಿ ಹಾಗೂ ಬೋಗಸ್ ಆಗಿವೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

SC Notice To Central And Twitter To Regulate Content Spreading Hate

ದೇಶವಿರೋಧಿ ಹಾಗೂ ಪ್ರಚೋದನಕಾರಿ ಅಂಶಗಳನ್ನು ಪ್ರಚುರಪಡಿಸಿದರೆ ಕ್ರಮ ತೆಗೆದುಕೊಳ್ಳಲು ಕಾನೂನು ರಚನೆಗೆ ನಿರ್ದೇಶನ ನೀಡಬೇಕೆಂದು ಅರ್ಜಿಯಲ್ಲಿ ಕೋರಲಾಗಿತ್ತು.

ಈ ಸಂಬಂಧ ಕೆಲವು ದಿನಗಳಿಂದ ಕೇಂದ್ರ ಹಾಗೂ ಟ್ವಿಟ್ಟರ್ ನಡುವೆ ಮಾತುಕತೆ ನಡೆಯುತ್ತಿದೆ. ಈ ತಿಂಗಳ ಮೊದಲಲ್ಲಿ 1178 ಖಾತೆಗಳ ಮೇಲೆ ನಿರ್ಬಂಧ ಹೇರುವಂತೆ ಕೇಂದ್ರ ಟ್ವಿಟ್ಟರ್ ಗೆ ಸೂಚಿಸಿತ್ತು. ಕೇಂದ್ರ ಸೂಚಿಸಿದ ಖಾತೆಗಳಲ್ಲಿ 97% ಖಾತೆಗಳಿಗೆ ಈಗಾಗಲೇ ನಿರ್ಬಂಧ ಹೇರಲಾಗಿದೆ ಎಂದು ಟ್ವಿಟ್ಟರ್ ಮಾಹಿತಿ ನೀಡಿತ್ತು.

English summary
supreme Court issued notices to the Centre and Twitter India to regulate chate-spreading content,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X