ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಶಿಕಲಾಗೆ ಚಾನ್ಸ್! ಅಕಸ್ಮಾತ್ ಅಪರಾಧಿಯಾದರೂ ಅನರ್ಹರಾಗುವುದಿಲ್ಲ

ತಮಿಳುನಾಡಿನ ಮುಖ್ಯಮಂತ್ರಿಯಾಗಲು ಕಾತುರದಿಂದ ಕಾದಿರುವ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ನಟರಾಜನ್ ಅವರ ರಾಜಕೀಯ ಯಾರ ಕೈಲಿದೆ? ರಾಜ್ಯಪಾಲರೋ ಅಥವಾ ಸುಪ್ರೀಂಕೋರ್ಟೋ? ಮುಂದೆ ಓದಿ...

By ವಿಕಾಸ್ ನಂಜಪ್ಪ
|
Google Oneindia Kannada News

ನವದೆಹಲಿ, ಫೆಬ್ರವರಿ 13: ತಮಿಳುನಾಡಿನ ಮುಖ್ಯಮಂತ್ರಿಯಾಗಲು ಕಾತುರದಿಂದ ಕಾದಿರುವ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ನಟರಾಜನ್ ಅವರ ರಾಜಕೀಯ ಭವಿಷ್ಯ ಯಾರ ಕೈಲಿದೆ? ರಾಜ್ಯಪಾಲರೋ ಅಥವಾ ಸುಪ್ರೀಂಕೋರ್ಟೋ? ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಸುಪ್ರೀಂಕೋರ್ಟಿನ ತೀರ್ಪಿನ ಮೇಲೆ ಶಶಿಕಲಾ ಮುಂದಿನ ಹೆಜ್ಜೆ ಇಡಬೇಕಾಗುತ್ತದೆ.

ದಿವಂಗತ ಜೆ ಜಯಲಲಿತಾ ಅವರು ಪ್ರಮುಖ ಆರೋಪಿಯಾಗಿರುವ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಸಹ ಆರೋಪಿಯಾಗಿರುವ ಶಶಿಕಲಾ ಅವರಿಗೆ ಕೇಸಿನ ಭೀತಿ ಮತ್ತೆ ಶುರುವಾಗಿದೆ. ಒನ್ ಇಂಡಿಯಾಕ್ಕೆ ಸಿಕ್ಕ ಮಾಹಿತಿ ಪ್ರಕಾರ ಈ ಪ್ರಕರಣ ಮಂಗಳವಾರ(ಫೆಬ್ರವರಿ 14) ವಿಚಾರಣೆಗೆ ಬರಲಿದ್ದು, ತೀರ್ಪು ನಿರೀಕ್ಷಿಸಬಹುದು.[ಜಯಲಲಿತಾ ಅಕ್ರಮ ಆಸ್ತಿ ಗಳಿಕೆ ಪ್ರಕರಣ : ಟೈಮ್ ಲೈನ್]

ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜೆ ಜಯಲಲಿತಾ ಅವರಿಗೆ ಜಾಮೀನು ಸಿಕ್ಕಿರುವುದನ್ನು ಪ್ರಶ್ನಿಸಿ ಕರ್ನಾಟಕ ಅರ್ಜಿ ಸಲ್ಲಿಸಿದೆ. [ಅಕ್ರಮ ಆಸ್ತಿ ಗಳಿಕೆ ಪ್ರಕರಣದ ತೀರ್ಪು : ಸಾಧ್ಯಾಸಾಧ್ಯತೆಗಳು!]

ಕಳೆದ ಮೂರು ತಿಂಗಳ ಹಿಂದೆಯೇ ಈ ಪ್ರಕರಣದ ತೀರ್ಪು ಹೊರಬೀಳಬೇಕಿತ್ತು. ಈ ಬಗ್ಗೆ ಘನ ನ್ಯಾಯಾಲಯಕ್ಕೆ ನಾನು ಮನವರಿಕೆ ಮಾಡಿಕೊಡಬೇಕಾಗಿತ್ತು ಎಂದು ಕರ್ನಾಟಕ ಪರ ವಕೀಲ ದುಷ್ಯಂತ್ ಹೇಳಿದ್ದಾರೆ.[ಶಶಿಕಲಾ ನಟರಾಜನ್ ವ್ಯಕ್ತಿಚಿತ್ರ]

ವಿಭಾಗೀಯ ಪೀಠದಿಂದ ತೀರ್ಪು

ವಿಭಾಗೀಯ ಪೀಠದಿಂದ ತೀರ್ಪು

ಜಯಾ ಅವರು ಅನಾರೋಗ್ಯ ಪೀಡಿತರಾಗಿ ಅಪೋಲೋ ಆಸ್ಪತ್ರೆ ಸೇರಿದವರು ಇಹಲೋಕ ವ್ಯಾಪಾರ ಮುಗಿಸಿದ್ದಾರೆ. ಆದರೆ, ತಮಿಳುನಾಡಿನ ನಿಯೋಜಿತ ಸಿಎಂ ಶಶಿಕಲಾ ನಟರಾಜನ್ ಹಾಗೂ ಇತರೆ ಆರೋಪಿಗಳಿಗೆ ಭಯ ಕಾಡುತ್ತಿದೆ. ಜಸ್ಟೀಸ್ ಪಿಸಿ ಘೋಸೆ ಹಾಗೂ ಅಮಿತಾವ್ ರಾಯ್ ಅವರಿರುವ ವಿಭಾಗೀಯ ಪೀಠದಿಂದ ತೀರ್ಪು ಹೊರ ಬೀಳಲಿದೆ.

ಜೆ ಜಯಲಲಿತಾ, ಶಶಿಕಲಾ ನಟರಾಜನ್, ಇಳವರಸಿ ಹಾಗೂ ಸುಧಾಕರಣ್ ಅವರನ್ನು ಅಪರಾಧಿ ಎಂದು ಕೆಳಹಂತದ ನ್ಯಾಯಲಯ ಘೋಷಿಸಿದೆ. ಈ ಬಗ್ಗೆ ಹೈಕೋರ್ಟಿನಲ್ಲಿ ಅಪೀಲ್ ಹಾಕಿದ ಬಳಿಕ ಎಲ್ಲರಿಗೂ ನೆಮ್ಮದಿ ಸಿಕ್ಕಿತ್ತು.

ಸಿಎಂ ಪಟ್ಟದ ಕನಸು ನುಚ್ಚುನೂರಾಗಲಿದೆ

ಸಿಎಂ ಪಟ್ಟದ ಕನಸು ನುಚ್ಚುನೂರಾಗಲಿದೆ

ಆರೋಪಿಗಳ ವಿರುದ್ಧ ಶಿಕ್ಷೆ ಪ್ರಮಾಣ ಪ್ರಕರಣದಲ್ಲಿ ಅಪರಾಧಿ ಎಂದು ಘೋಷಿತವಾದರೆ ಜಯಲಲಿತಾ ಅವರು ಅಕ್ರಮವಾಗಿ ಗಳಿಸಿದ ಆಸ್ತಿ ಎಲ್ಲವನ್ನು ಜಪ್ತಿ ಮಾಡಿ ಸರ್ಕಾರದ ಬೊಕ್ಕಸಕ್ಕೆ ಸೇರಿಸಲಾಗುತ್ತದೆ. ಮಿಕ್ಕ ಆರೋಪಿಗಳ ವಿರುದ್ಧ ಶಿಕ್ಷೆ ಪ್ರಮಾಣ ಪ್ರಕಟಿಸಲಾಗುತ್ತದೆ. ಕೆಳಹಂತದ ನ್ಯಾಯಾಲಯ 4 ವರ್ಷ ಶಿಕ್ಷೆ ಪ್ರಕಟಿಸಿತ್ತು. ಶಶಿಕಲಾ ಅವರ ಸಿಎಂ ಪಟ್ಟದ ಕನಸು ನುಚ್ಚುನೂರಾಗಲಿದೆ

ಕರ್ನಾಟಕದ ತಜ್ಞರ ಅಭಿಪ್ರಾಯವೇನು?

ಕರ್ನಾಟಕದ ತಜ್ಞರ ಅಭಿಪ್ರಾಯವೇನು?

ಈ ಪ್ರಕರಣದಿಂದ ದಿವಂಗತ ಜೆ ಜಯಲಲಿತಾ ಅವರ ಹೆಸರನ್ನು ತೆಗೆದು ಹಾಕುವಂತೆ ಕರ್ನಾಟಕ ಮನವಿ ಮಾಡಲಿದೆ ಎಂಬ ಗಾಳಿ ಸುದ್ದಿ ಹಬ್ಬಿದೆ. ಆದರೆ, ಇದು ಸತ್ಯಕ್ಕೆ ದೂರವಾದ ಮಾತು. ಆ ರೀತಿ ಯಾವುದೇ ಮನವಿ ಮಾಡಿಲ್ಲ ಎಂದು ಕರ್ನಾಟಕದ ಕಾನೂಣು ತಂಡ ಹೇಳಿದೆ. ಸಿಆರ್ ಪಿಸಿ 394ರಂತೆ ಪ್ರಕರಣದಲ್ಲಿ ಜಯಲಲಿತಾ ಆರೋಪಿಯಾಗಿದ್ದಾರೆ.

ತೀರ್ಪಿನ ಸಾಧ್ಯತೆಗಳೇನು?

ತೀರ್ಪಿನ ಸಾಧ್ಯತೆಗಳೇನು?

* ಕರ್ನಾಟಕ ಹೈಕೋರ್ಟ್ ಆದೇಶ ಎತ್ತಿ ಹಿಡಿದರೆ, ಶಶಿಕಲಾ ಸೇರಿದಂತೆ ಎಲ್ಲರೂ ಬಚಾವ್.
* ಕೆಳಹಂತದ ನ್ಯಾಯಾಲಯದ ತೀರ್ಪು ಎತ್ತಿಹಿಡಿದರೆ ಕನಿಷ್ಠ ನಾಲ್ಕು ವರ್ಷ ಶಿಕ್ಷೆ ಹಾಗೂ 100 ಕೋಟಿ ರು ದಂಡ
* ಪ್ರಮುಖ ಆರೋಪಿ ಜಯಲಲಿತಾ ನಿಧನರಾಗಿರುವುದರಿಂದ ಪ್ರಕರಣವನ್ನು ಮತ್ತೊಮ್ಮೆ ಕೈಗೆತ್ತಿಕೊಳ್ಳುವಂತೆ ಕರ್ನಾಟಕ ಹೈಕೋರ್ಟಿಗೆ ಸೂಚಿಸಬಹುದು. ಕರ್ನಾಟಕದ ವಕೀಲರು ವಿಚಾರಣೆಗಾಗಿ ಪುನಃ ಹೊಸದಾಗಿ ಮನವಿ ಸಲ್ಲಿಸಬೇಕಾಗುತ್ತದೆ.

ಚುನಾವಣೆ ಸ್ಪರ್ಧಿಸುವಂತಿಲ್ಲ

ಚುನಾವಣೆ ಸ್ಪರ್ಧಿಸುವಂತಿಲ್ಲ

ಚುನಾಯಿತ ಪ್ರತಿನಿಧಿ ಅಲ್ಲದ ಕಾರಣ, ಈ ಪ್ರಕರಣದಲ್ಲಿ ಅಪರಾಧಿ ಎನಿಸಿಕೊಂಡರು ಅನರ್ಹವಾಗುವುದಿಲ್ಲ. ಬದಲಿಗೆ 6 ವರ್ಷಗಳ ಕಾಲ ಚುನಾವಣೆ ಸ್ಪರ್ಧಿಸುವುದರಿಂದ ನಿರ್ಬಂಧಿಸಲಾಗುವುದು. ಜತೆಗೆ ಕೆಳಹಂತದ ನ್ಯಾಯಾಲಯದ ತೀರ್ಪು ಎತ್ತಿ ಹಿಡಿದರೆ ಒಟ್ಟು 10 ವರ್ಷಗಳ ಕಾಲ ಚುನಾವಣೆ ಸ್ಪರ್ಧಿಸಲು ಸಾಧ್ಯವಿಲ್ಲ.

English summary
It is clear now that Sasikala Natarajan's fate would be decided by the Supreme Court and not the Governor. While there is no clear indication as yet, sources say that the verdict in the disproportionate assets case is likely to be delivered by the Supreme Court on Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X