ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

An Insignificant Man: ಸಾಕ್ಷ್ಯಚಿತ್ರ ರೂಪದಲ್ಲಿ ತೆರೆಗೆ ಅಪ್ಪಳಿಸಿದ ಕೇಜ್ರಿವಾಲ್

By Sachhidananda Acharya
|
Google Oneindia Kannada News

ನವದೆಹಲಿ, ನವೆಂಬರ್ 16: 'ಆ್ಯನ್ ಇನ್ಸಿಗ್ನಿಫಿಕೆಂಟ್ ಮ್ಯಾನ್' (An Insignificant Man) ಸಿನಿಮಾ ಕಂ ಸಾಕ್ಷ್ಯಚಿತ್ರ ಶುಕ್ರವಾರ ದೇಶದಾದ್ಯಂತ ತೆರೆಗೆ ಬಂದಿದೆ. ಭಾರತದಲ್ಲಿ ನಡೆದ ಭ್ರಷ್ಟಾಚಾರ ವಿರೋಧಿ ಹೋರಾಟ ಮತ್ತು ಆಮ್ ಆದ್ಮಿ ಪಕ್ಷದ ಬೆಳವಣಿಗೆಯನ್ನು ಇಟ್ಟುಕೊಂಡು ಹಿಂದಿ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಈ ಸಿನಿಮಾ ನಿರ್ಮಿಸಲಾಗಿದೆ.

50ಕ್ಕೂ ಹೆಚ್ಚು ಅಂತರಾಷ್ಟ್ರೀಯ ಸಿನಿಮೋತ್ಸವಗಳನ್ನು ಪ್ರದರ್ಶನಗೊಂಡು, ಪ್ರಶಂಸೆ ಗಿಟ್ಟಿಸಿದ ಈ ಚಿತ್ರದ ಕಥೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸುತ್ತ ಗಿರಕಿ ಹೊಡೆಯುತ್ತದೆ.

SC dismisses plea to stay release of 'An insignificant man'

ಖುಷ್ಬೂ ರಂಕಾ ಮತ್ತು ವಿನಯ್ ಶುಕ್ಲಾ ನಿರ್ದೇಶನದ ಈ ಸಿನಿಮಾಗೆ ಆರಂಭದಲ್ಲಿ ಸರ್ಟಿಫಿಕೇಟ್ ನೀಡಲು ಸಿಬಿಎಫ್'ಸಿ ನಿರಾಕರಿಸಿತ್ತು. ಅರವಿಂದ ಕೇಜ್ರಿವಾಲ್, ದೆಹಲಿ ಮಾಜಿ ಸಿಎಂ ಶೀಲಾ ದೀಕ್ಷಿತ್, ಪ್ರಧಾನಿ ನರೇಂದ್ರ ಮೋದಿಯವರಿಂದ ನೋ ಅಬ್ಜೆಕ್ಷನ್ ಸರ್ಟಿಫಿಕೇಟ್ ತರುವಂತೆ ಅದು ಕೇಳಿಕೊಂಡಿತ್ತು. ಜತೆಗೆ ಬಿಜೆಪಿ, ಕಾಂಗ್ರೆಸ್ ಪದ ಬಳಕೆಗೆ ಬೀಪ್ ಶಬ್ದ ಬಳಸುವಂತೆ ಸೂಚಿಸಿತ್ತು.

ಆದರೆ ನಿರ್ದೇಶಕರು 'ಸಿನಿಮಾ ಸರ್ಟಿಫಿಕೇಟ್ ಮೇಲ್ಮನವಿ ನ್ಯಾಯಾಧಿಕರಣ'ದ ಮೊರೆ ಹೋಗಿ ಸಿನಿಮಾ ಬಿಡುಗಡೆಯ ಅವಕಾಶ ಗಿಟ್ಟಿಸಿಕೊಂಡಿದ್ದರು.

ಕೊನೆಯ ಪ್ರಯತ್ನವೆಂಬಂತೆ ಗುರುವಾರ ಈ ಸಿನಿಮಾದ ಬಿಡುಗಡೆಗೆ ತಡೆ ಕೋರಿ ಸುಪ್ರಿಂ ಕೋರ್ಟ್ ಮೊರೆ ಹೋಗಲಾಗಿತ್ತು. ಕೇಜ್ರಿವಾಲ್ ಮೇಲೆ ಸಾರ್ವಜನಿಕವಾಗಿ ಶಾಯಿ ಎರಚಿದ ಆರೋಪ ಎದುರಿಸುತ್ತಿರುವ ನಚಿಕೇತ ವಾಲ್ಹೇಕರ್ ಸಿನಿಮಾ ಬಿಡುಗಡೆಗೆ ತಡೆ ಕೋರಿ ಸಲ್ಲಿಸಿದ್ದ ಸರ್ವೋಚ್ಛ ನ್ಯಾಯಾಲಯ ತಿರಸ್ಕರಿಸಿದೆ.

ಈ ಮೂಲಕ ಶುಕ್ರವಾರ 'ಆ್ಯನ್ ಇನ್ಸಿಗ್ನಿಫಿಕೆಂಟ್ ಮ್ಯಾನ್' ಬಿಡುಗಡೆಯ ಭಾಗ್ಯ ಕಾಣುತ್ತಿದೆ. ಇದರೊಂದಿಗೆ ಕೇಜ್ರಿವಾಲ್ ಸಿನಿಮಾ ರೂಪದಲ್ಲಿ ಜನರ ಮುಂದೆ ಬರಲಿದ್ದಾರೆ.

English summary
The Supreme Court today dismissed a plea seeking stay on the nationwide release of the movie 'An insignificant man', which the petitioner claimed was based on the life of Delhi Chief Minister Arvind Kejriwal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X