ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೀಟ್, ಜೆಇಇ ಪರೀಕ್ಷೆ ಮುಂದೂಡಿಕೆ ಅರ್ಜಿ ತಿರಸ್ಕರಿಸಿದ ಸುಪ್ರೀಂ

|
Google Oneindia Kannada News

ನವದೆಹಲಿ, ಆ. 17: ಇಂಜಿನಿಯರಿಂಗ್ ಹಾಗೂ ವೈದ್ಯಕೀಯ ವೃತ್ತಿಪರ ಕೋರ್ಸ್ ಗಳಿಗೆ ಪ್ರವೇಶ ಒದಗಿಸುವ NEET, JEE ಮುಂದೂಡುವಂತೆ ಕೋರಿ 11 ರಾಜ್ಯಗಳು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಇಂದು ತಿರಸ್ಕರಿಸಿದೆ.

ಕೊರೋನಾ ಸಾಂಕ್ರಾಮಿಕ ರೋಗದ ನಡುವೆ ಈ ಎರಡು ಪರೀಕ್ಷೆ ನಡೆಸುವುದು ಕಷ್ಟಕರ ಎಂದು ಪರೀಕ್ಷೆ ಮುಂದೂಡುವಂತೆ ಕೋರಿ 11 ರಾಜ್ಯಗಳ 11 ವಿದ್ಯಾರ್ಥಿಗಳ ಪರವಾಗಿ ವಕೀಲ ಅಲಖ್ ಅಲೋಕ್ ಶ್ರೀವಾಸ್ತವ ವಾದಿಸಿದರು. ಆದರೆ, ಜಸ್ಟೀಸ್ ಅರುಣ್ ಮಿಶ್ರಾ ಅವರು ಅರ್ಜಿ ತಿರಸ್ಕರಿಸಿ, ಶಿಕ್ಷಣವು ಮುಕ್ತವಾಗಿರಬೇಕು, ಕೊವಿಡ್ 19 ಇನ್ನೂ ಒಂದು ವರ್ಷವಾದರೂ ಇರಬಹುದು, ಇನ್ನು ಒಂದು ವರ್ಷ ಕಾಯಲು ನೀವು ಸಿದ್ಧವೇ ಎಂದು ಪ್ರಶ್ನಿಸಿದರು.

ಕೊವಿಡ್ 19: JEE, NEET 2020 ಪರೀಕ್ಷೆ ಮತ್ತೆ ಮುಂದೂಡಿಕೆಕೊವಿಡ್ 19: JEE, NEET 2020 ಪರೀಕ್ಷೆ ಮತ್ತೆ ಮುಂದೂಡಿಕೆ

ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಪರೀಕ್ಷೆಗಳನ್ನು ನಡೆಸಬೇಕು ಮತ್ತು ಸಾಕಷ್ಟು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗುವುದು ಎಂದು ಎನ್‌ಟಿಎ ಪರ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹೇಳಿದರು.

SC dismisses Petitions seeking postponement of NEET-JEE

ಪರೀಕ್ಷೆಗಳು ನಡೆಯದಿದ್ದರೆ, ಅದು ದೇಶಕ್ಕೆ ನಷ್ಟವಾಗುವುದಿಲ್ಲವೇ? ವಿದ್ಯಾರ್ಥಿಗಳು ಶೈಕ್ಷಣಿಕ ವರ್ಷವನ್ನು ಕಳೆದುಕೊಳ್ಳುತ್ತಾರೆ. ಮುನ್ನೆಚ್ಚರಿಕೆಗಳೊಂದಿಗೆ ಪರೀಕ್ಷೆಗಳನ್ನು ಏಕೆ ನಡೆಸಲು ಸಾಧ್ಯವಿಲ್ಲ? ಕೊವಿಡ್ 19 ನಡುವೆ ನ್ಯಾಯಾಲಯವು ಕಾರ್ಯ ನಿರ್ವಹಿಸುತ್ತಿಲ್ಲವೇ ಎಂದು ಜಸ್ಟೀಸ್ ಅರುಣ್ ಮಿಶ್ರಾ ಪ್ರಶ್ನಿಸಿದರು.

ರಾಷ್ಟ್ರೀಯ ಪರೀಕ್ಷಾ ಸಂಸ್ಥೆ(NTA) ಜುಲೈ 3ರಂದು ಹೊರಡಿಸಿದ ಪ್ರಕಟಣೆಯಂತೆ ಪದವಿಪೂರ್ವ jEE ಪರೀಕ್ಷೆಗಳು ಸೆಪ್ಟೆಂಬರ್ 1 ರಿಂದ ಸೆಪ್ಟೆಂಬರ್ 6 ರವರೆಗೆ ನಿಗದಿಯಾಗಿದೆ. ವೈದ್ಯಕೀಯ ಪ್ರವೇಶNational Eligibility-cum-Entrance Test(NEET)ವನ್ನು ಸೆಪ್ಟೆಂಬರ್ 13 ಕ್ಕೆ ನಿಗದಿಪಡಿಸಲಾಗಿದೆ.

ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ JEE ಮುಖ್ಯ ಪರೀಕ್ಷೆ ಸೆಪ್ಟೆಂಬರ್ 1-6, JEE advanced ಪರೀಕ್ಷೆ ಸೆಪ್ಟೆಂಬರ್ 27ರಂದು ನಡೆಯಲಿದೆ. ಸೆಪ್ಟೆಂಬರ್ 13ರಂದು NEET ಪರೀಕ್ಷೆ ನಿಗದಿಯಾಗಿದೆ ಎಂದು ಮಾನವ ಸಂಪನ್ಮೂಲ ಇಲಾಖೆ ಸಚಿವ ರಮೇಶ್ ಪೋಖ್ರಿಯಾಲ್ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

ವಿಶ್ವವಿದ್ಯಾಲಯ ಅನುದಾನ ಆಯೋಗದ ರಾಷ್ಟ್ರೀಯ ಅರ್ಹತಾ ಪರೀಕ್ಷೆ (ಯುಜಿಸಿ ನೆಟ್), ಕಾಮನ್ ಮ್ಯಾನೇಜ್‌ಮೆಂಟ್ ಅಡ್ಮಿಷನ್ ಟೆಸ್ಟ್ (ಸಿಎಂಎಟಿ) ಪರೀಕ್ಷೆಗಳ ಜತೆಗೆ ಈ ಪರೀಕ್ಷೆಗಳನ್ನು ಕೂಡ ನಡೆಸುವ ಹೊಣೆಗಾರಿಕೆಯನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆಗೆ (ಎನ್‌ಟಿಎ) ವಹಿಸಿಕೊಂಡಿದೆ. ಇದಕ್ಕೂ ಮುನ್ನ JEE ಮತ್ತು NEETನಿರ್ವಹಣೆಯನ್ನು ಸಿಬಿಎಸ್‌ಇ ನಡೆಸುತ್ತಿತ್ತು. ಈ ವರ್ಷ ಮೆಡಿಕಲ್ ವೃತ್ತಿಪರ ಕೋರ್ಸ್ ಪ್ರವೇಶಕ್ಕಾಗಿ ನಡೆಯುವ NEET ಜುಲೈ 26ರಂದು ನಿಗದಿಯಾಗಿತ್ತು, ಇಂಜಿನಿಯರಿಂಗ್ ಕೋರ್ಸ್ ಪ್ರವೇಶಕ್ಕಾಗಿ ನಡೆಯುವ ಜೆಇಇ ಮೇನ್ಸ್ ಜುಲೈ 18 ರಿಂದ 23 ರಂದು ನಡೆಯಲು ನಿಗದಿಪಡಿಸಲಾಗಿತ್ತು. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಐಐಟಿ) ಆಯೋಜಿಸುವ ಜೆಇಇ- advanced ಪರೀಕ್ಷೆ ಆಗಸ್ಟ್ 23ರಂದು ನಿಗದಿಯಾಗಿತ್ತು.

English summary
The Supreme Court today dismissesed a petition that sought postponement of NEET and JEE. The petitioners from 11 states demanded that the exams be postponed in the wake of the COVID-19 pandemic.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X