ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೀರವ್ ಮೋದಿಗೆ ಸೇರಿದ ಸಾಗರೋತ್ತರ ಖಾತೆಗಳಿಗೆ ಎಸ್.ಬಿ.ಐ ಬೀಗ

By Sachhidananda Acharya
|
Google Oneindia Kannada News

ನವದೆಹಲಿ, ಮಾರ್ಚ್ 2: ನೀರವ್ ಮೋದಿ ಕಂಪನಿಗಳಿಗೆ ಸೇರಿದ ಮೂರು ಸಾಗರೋತ್ತರ ಖಾತೆಗಳನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸ್ಥಗಿತಗೊಳಿಸಿದೆ. ಮಾತ್ರವಲ್ಲ ಈ ಖಾತೆಗಳಿಗೆ ಸೇರಿದ ಮಾಹಿತಿಯನ್ನು ಬ್ಯಾಂಕ್ ಅಧಿಕಾರಿಗಳು ತನಿಖಾ ಸಂಸ್ಥೆಗಳ ಜೊತೆ ಹಂಚಿಕೊಂಡಿದ್ದಾರೆ.

ನೀರವ್ ಮೋದಿಗೆ ಸೇರಿದ 523 ಕೋಟಿ ಆಸ್ತಿ ಜಪ್ತಿ, ಕೌಂಟಿಂಗ್ನೀರವ್ ಮೋದಿಗೆ ಸೇರಿದ 523 ಕೋಟಿ ಆಸ್ತಿ ಜಪ್ತಿ, ಕೌಂಟಿಂಗ್

"ನಾವು ನಮ್ಮಲ್ಲೇ ಆಂತರಿಕ ತನಿಖೆ ನಡೆಸಿದ್ದೇವೆ. ಈ ವೇಳೆ ನೀರವ್ ಮೋದಿ ಕಂಪನಿಗಳಿಗೆ ಸೇರಿದ ಖಾತೆಗಳು ನಮ್ಮ ಸಾಗರೋತ್ತರ ಶಾಖೆಗಳಲ್ಲಿ ಇರುವುದು ಪತ್ತೆಯಾಗಿದೆ. ಈ ಹಿನ್ನಲೆಯಲ್ಲಿ ನಾವು ಈ ಖಾತೆಗಳ ವ್ಯವಹಾರವನ್ನು ಸ್ಥಗಿತಗೊಳಿಸಿದ್ದೇವೆ," ಎಂದು ಬ್ಯಾಂಕ್ ಅಧಿಕಾರಿಯೊಬ್ಬರು ಪಿಟಿಐಗೆ ಮಾಹಿತಿ ನೀಡಿದ್ದಾರೆ.

SBI freezes three overseas deposit accounts of Nirav Modi

ಈ ಖಾತೆಗಳು ಬ್ಯಾಂಕಿನ ದುಬೈ, ಬಹ್ರೇನ್ ಮತ್ತು ಆಟ್ವೆರ್ಪ್ ನಲ್ಲಿ ಇದೆ ಎಂದು ತಿಳಿದು ಬಂದಿದೆ. ಈ ಖಾತೆಗಳಿಗೂ ಪಿಎನ್ ಬಿ ಹಗರಣಕ್ಕೂ ನೇರವಾದ ಸಂಬಂಧಗಳಿಲ್ಲ ಎಂದು ಎಸ್.ಬಿ.ಐ ಹೇಳಿದೆ. ಆದರೆ ಮಾಹಿತಿಗಳನ್ನು ಹಂಚಿಕೊಂಡಿರುವದರಿಂದ 'ಸಿಬಿಐ' ಮತ್ತು 'ಇಡಿ'ಯ ತನಿಖೆಗೆ ಸಹಾಯಕವಾಗಲಿದೆ ಎಂದು ಬ್ಯಾಂಕ್ ಹೇಳಿಕೊಂಡಿದೆ.

ನೀರವ್ ಮೋದಿಗೂ ನಮ್ಮ ಮೈಸೂರಿಗೂ ಏನಿದು ಲಿಂಕು..!?ನೀರವ್ ಮೋದಿಗೂ ನಮ್ಮ ಮೈಸೂರಿಗೂ ಏನಿದು ಲಿಂಕು..!?

English summary
SBI has frozen three accounts of Nirav Modi group companies and shared the information related to those accounts with investigative agencies.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X