ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ 44 ಬಿಲಿಯನ್ ಅಮೆರಿಕನ್ ಡಾಲರ್ ಹೂಡಿಕೆ ‌ಮಾಡಲಿರುವ ಸೌದಿ

|
Google Oneindia Kannada News

ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಉಗ್ರ ದಾಳಿಯನ್ನು ಸೌದಿ ಅರೇಬಿಯಾ ತೀವ್ರವಾಗಿ ಖಂಡಿಸಿದೆ. ಭಯೋತ್ಪಾದನೆ ಹಾಗೂ ಜಮ್ಮು ಮತ್ತು ಕಾಶ್ಮೀರದ ವಿಚಾರದಲ್ಲಿ ಕಳೆದ ಕೆಲ ವರ್ಷಗಳಲ್ಲಿ ಸೌದಿ ಅರೇಬಿಯಾದ ನಿಲುವಿನಲ್ಲಿ ಬದಲಾವಣೆ ಆಗಿದೆ. ಪಾಕಿಸ್ತಾನ ಹೇಳುವುದನ್ನು ಸೌದಿ ಒಪ್ಪಲು ಸಾಧ್ಯವಿಲ್ಲ ಎಂದಿರುವುದಾಗಿ ಮೂಲಗಳು ತಿಳಿಸಿವೆ.

ಭಾರತದ ಜತೆಗೆ ಭದ್ರತಾ ಒಪ್ಪಂದಗಳನ್ನು ಸೌದಿ ಅರೇಬಿಯಾ ಮಾಡಿಕೊಂಡಿದೆ. ಎರಡೂ ದೇಶಗಳು ಭಯೋತ್ಪಾದನಾ ನಿಗ್ರಹದಲ್ಲಿ ಸಕ್ರಿಯವಾಗಿವೆ. ಗುಪ್ತಚರ ಮಾಹಿತಿಗಳ ವಿನಿಮಯ ಮಾಡಿಕೊಳ್ಳುತ್ತವೆ. ಭಯೋತ್ಪಾದನೆ ಹಾಗೂ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದ ಮಾಹಿತಿಯನ್ನು ಹಂಚಿಕೊಳ್ಳುತ್ತಿವೆ. ಕಳೆದ ಕೆಲವು ವರ್ಷಗಳಲ್ಲಿ ಹಲವಾರು ಉಗ್ರರನ್ನು ಭಾರತಕ್ಕೆ ಹಸ್ತಾಂತರಿಸಿದೆ.

ಪಾಕಿಸ್ತಾನವೆಂದರೆ ಲವ್ವೋ ಲವ್ವು ಎಂದ ಸೌದಿ ದೊರೆ ಪಾಕಿಸ್ತಾನವೆಂದರೆ ಲವ್ವೋ ಲವ್ವು ಎಂದ ಸೌದಿ ದೊರೆ

ಸೌದಿ ಅರ್ಮಕೋ ಮತ್ತು ಅಬುಧಾಬಿ ರಾಷ್ಟ್ರೀಯ ತೈಲ ಕಂಪನಿಯು (ಎಡಿಎನ್ ಒಸಿ) ರತ್ನಗಿರಿಯ ರಿಫೈನರಿ ಯೋಜನೆಯಲ್ಲಿ 44 ಬಿಲಿಯನ್ ಅಮೆರಿಕನ್ ಡಾಲರ್ ಹೂಡಿಕೆ ಮಾಡುವ ಬಗ್ಗೆ ಯುವರಾಜ ಮೊಹ್ಮದ್ ಬಿನ್ ಸಲ್ಮಾನ್ ಭಾರತದ ಭೇಟಿ ವೇಳೆ ಮಾತುಕತೆ ಆಗಲಿದೆ.

Saudi made a very strong denouncement of Pulwama attack

ಇನ್ನು ಸಲ್ಮಾನ್ ಅವರು ಪಾಕಿಸ್ತಾನದಲ್ಲಿ ಹೂಡಿಕೆ ಮಾಡುವುದಾಗಿ ಘೋಷಿಸಿರುವ $ 20 ಬಿಲಿಯನ್ ಅನ್ನು ಭಾರತದ ಹೂಡಿಕೆ ಜತೆಗೆ ಹೋಲಿಸಲು ಸಾಧ್ಯವಿಲ್ಲ ಎಂದು ಮೂಲಗಳು ತಿಳಿಸಿವೆ. ಪಾಕಿಸ್ತಾನಕ್ಕೆ ನೀಡಿರುವುದು ತುರ್ತು ಪರಿಹಾರ ನಿಧಿ ಹಾಗೂ ಭಾರತದಲ್ಲಿನ ಹೂಡಿಕೆಯು ಆರ್ಥಿಕತೆಗೆ ಚೈತನ್ಯ ನೀಡುತ್ತದೆ. ಈಗಾಗಲೇ ಜಿಡಿಪಿ ಪ್ರಗತಿ ದರ 7% ಇದೆ. ಸೌದಿಯು ಭಾರತಕ್ಕೆ ವ್ಯೂಹಾತ್ಮಕ ಭಾಗೀದಾರ ದೇಶ ಎಂಬ ಪಟ್ಟಿಯಲ್ಲಿ ಎಂಟನೇ ಸ್ಥಾನ ನೀಡಿದೆ ಎನ್ನಲಾಗಿದೆ.

ಪುಲ್ವಾಮಾ ದಾಳಿಯ ರೂವಾರಿ ಜೈಷ್ ನ ಕಮ್ರನ್ ಮತ್ತೊಬ್ಬ ಖಲಾಸ್ಪುಲ್ವಾಮಾ ದಾಳಿಯ ರೂವಾರಿ ಜೈಷ್ ನ ಕಮ್ರನ್ ಮತ್ತೊಬ್ಬ ಖಲಾಸ್

ಮೊಹ್ಮದ್ ಬಿನ್ ಸಲ್ಮಾನ್ ಭೇಟಿ ವೇಳೆ ಭಾರತವು ಸೌದಿ ಅರೇಬಿಯಾ ಜತೆಗೆ ಐದು ಒಡಂಬಡಿಕೆಗೆ ಸಹಿ ಮಾಡಲಾಗುವುದು. ರಕ್ಷಣಾ ಸಹಕಾರ ಹೆಚ್ಚಳವಾಗಲಿದೆ. ಜತೆಗೆ ಜಂಟಿ ನೌಕಾ ಸೇನಾಭ್ಯಾಸ ಕೂಡ ಶೀಘ್ರದಲ್ಲಿ ನಡೆಸಲಾಗುತ್ತದೆ ಎಂದು ತಿಳಿದುಬಂದಿದೆ.

English summary
Sources on Saudi Arabia's position on terrorism emanating from Pakistan: Saudi made a very strong denouncement of Pulwama attack. There is a big transformation in Saudi understanding of terrorism and Jammu & Kashmir in last few years. Saudi does not accept Pakistan's narrative.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X