ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಕೊಡುಗೆ: ಹಜ್ ಯಾತ್ರಾರ್ಥಿಗಳ ಸಂಖ್ಯೆ ಹೆಚ್ಚಳ

By Mahesh
|
Google Oneindia Kannada News

Recommended Video

ನರೇಂದ್ರ ಮೋದಿ ಕೊಡುಗೆ : ಭಾರತದ ಹಜ್ ಕೋಟಾ ಏರಿಸಿದ ಸೌದಿ | Oneindia Kannada

ನವದೆಹಲಿ, ಜನವರಿ 10: ಪ್ರತಿ ವರ್ಷ ಪವಿತ್ರ ಹಜ್ ಯಾತ್ರೆಗೆ ಭಾರತದಿಂದ ತೆರಳುವ ಯಾತ್ರಾರ್ಥಿಗಳ ಸಂಖ್ಯೆ ಹೆಚ್ಚಳಕ್ಕೆ ಬೇಡಿಕೆ ಬರುತ್ತಿತ್ತು. ಮೋದಿ ಸರ್ಕಾರ ಈ ಬಗ್ಗೆ ಕ್ರಮ ಕೈಗೊಂಡಿದ್ದು, ಭಾರತದಿಂದ ಪ್ರತಿ ವರ್ಷ ಹಜ್ ಯಾತ್ರೆಗೆ ತೆರಳುವ ಭಾರತೀಯರ ಸಂಖ್ಯಾ ಮಿತಿ ಏರಿಕೆ ಮಾಡಿದೆ. ಇತ್ತೀಚಿನ ಮನ್ ಕಿ ಬಾತ್ ನಲ್ಲಿ ಮೋದಿ ಅವರು ಈ ಬಗ್ಗೆ ಪ್ರಸ್ತಾಪಿಸಿದ್ದರು. ಮಹಿಳೆಯರಿಗೆ ಹಜ್ ಯಾತ್ರೆ ಕೈಗೊಳ್ಳುವ ಅವಕಾಶವನ್ನು ಸರ್ಕಾರ ನೀಡುತ್ತಿದೆ.

5,000 ಹೆಚ್ಚುವರಿ ಹಜ್ ಯಾತ್ರಿಕರಿಗೆ ಮೆಕ್ಕಾಗೆ ಪ್ರಯಾಣ ಭಾಗ್ಯ ಒದಗಿಸಲು ಮುಂದಾಗಿರುವ ಭಾರತ ಸರ್ಕಾರದ ಕ್ರಮಕ್ಕೆ ಸೌದಿ ಅರೇಬಿಯಾ ಸರ್ಕಾರ ಅನುಮತಿ ನೀಡಿದೆ. ಹೀಗಾಗಿ, ಹಜ್ ಯಾತ್ರಾರ್ಥಿಗಳ ಕೋಟಾ ಈಗ 1,75,025ಕ್ಕೇರಲಿದೆ ಎಂದು ಕೇಂದ್ರ ಅಲ್ಪಸಂಖ್ಯಾತ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಹೇಳಿದ್ದಾರೆ.

ಸಂಕ್ರಾಂತಿ ವಿಶೇಷ ಪುಟ

ಸ್ವಾತಂತ್ರ್ಯ ನಂತರ ಇದೇ ಮೊದಲ ಬಾರಿಗೆ ಭಾರತೀಯ ಹಜ್ ಯಾತ್ರಿಕರ ಕೋಟಾದಲ್ಲಿ ಭಾರಿ ಏರಿಕೆಗೆ ಅವಕಾಶ ಸಿಕ್ಕಿದೆ ಎಂದು ನಖ್ವಿ ತಿಳಿಸಿದರು. ಹಜ್ ಮತ್ತು ಉಮ್ರಾ ಸಚಿವರೊಂದಿಗೆ ಮೆಕ್ಕಾದಲ್ಲಿ ಸಚಿವ ನಖ್ವಿ ದ್ವಿಪಕ್ಷೀಯ ವಾರ್ಷಿಕ ಹಜ್ ಒಪ್ಪಂದಕ್ಕೆ ಸಹಿ ಹಾಕಿದ್ದನ್ನು ಇಲ್ಲಿ ಸ್ಮರಿಸಬಹುದು.

Saudi increases India’s Haj quota by 5,000

ಕಳೆದ ಎರಡು ವರ್ಷಗಳಲ್ಲಿ 40,000ಕ್ಕೂ ಹೆಚ್ಚಿನ ಹಜ್ ಯಾತ್ರಿಕರಿಗೆ ಕೇಂದ್ರ ಸರ್ಕಾರದ ಮನವಿ ಮೇರೆಗೆ ಸೌದಿ ಅವಕಾಶ ಕಲ್ಪಿಸಿದೆ. ಸೌದಿಯ ರಾಜ ಸಲ್ಮಾನ್ ಬಿನ್ ಅಬ್ದುಲ್ ಅಜೀಜ್ ಅಲ್ ಸೌದ್ ಜತೆ ಪ್ರಧಾನಿ ಮೋದಿ ಅವರು ಒಪ್ಪಂದ ಸ್ನೇಹ ಸಂಬಂಧ ಹೊಂದಿರುವುದರಿಂದ ಇದೆಲ್ಲ ಸಾಧ್ಯವಾಗಿದೆ ಎಂದು ಸಚಿವ ನಖ್ವಿ ಹೇಳಿದರು.

ಮಹಿಳಾ ಯಾತ್ರಿಗಳು: 2018ರಲ್ಲಿ ಹಜ್ ಯಾತ್ರೆಗಾಗಿ 3,55,000 ಅರ್ಜಿಗಳು ಬಂದಿವೆ. ಈ ಬಾರಿ ಭಾರತದಿಂದ 1,300 ಮಹಿಳೆಯರು ಮಹ್ರಾಮ್(ಪುರುಷರ ಸಂಗಾತಿಯ ನೆರವಿಲ್ಲದೆ) ಇಲ್ಲದೆ ಹಜ್ ಯಾತ್ರೆ ಕೈಗೊಳ್ಳುವ ಅವಕಾಶವೂ ಲಭಿಸಲಿದೆ. ಸಮುದ್ರಯಾನದ ಮೂಲಕ ಸೌದಿಗೆ ಪ್ರಯಾಣ ಭಾಗ್ಯ ನೀಡುವ ಬಗ್ಗೆ ಕೂಡಾ ಮಾತುಕತೆ ನಡೆಯುತ್ತಿದೆ.

English summary
Saudi Arabia has increased India's Haj quota by 5,000, taking it to 1,75,025, the highest since Independence. Union minority affairs minister Mukhtar Abbas Naqvi
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X