• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜಮ್ಮು & ಕಾಶ್ಮೀರ ಭಾರತದ ಭಾಗವಲ್ಲ ಎಂದು ತೋರಿಸಿದ ಸೌದಿ ಅರೇಬಿಯಾ: ಭಾರತದ ಆಕ್ಷೇಪ

|

ನವದೆಹಲಿ, ಅಕ್ಟೋಬರ್ 30: ಸೌದಿ ಅರೇಬಿಯಾವು ಹೊಸದಾಗಿ ಚಲಾವಣೆಗೆ ತಂದಿರುವ 20 ರಿಯಾಲ್ ಬ್ಯಾಂಕ್‌ನೋಟುಗಳಲ್ಲಿ ಕೇಂದ್ರಾದಳಿತ ಪ್ರದೇಶಗಳಾದ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಅನ್ನು ಭಾರತದ ಭೂಭಾಗದಿಂದ ಹೊರಗೆ ಇರುವಂತೆ ತೋರಿಸಿರುವುದು ಭಾರತಕ್ಕೆ ಅಸಮಾಧಾನ ಉಂಟುಮಾಡಿದೆ.

ಈ ಸಂಬಂಧ ಸೌದಿ ಅರೇಬಿಯಾಕ್ಕೆ ಭಾರತ ತನ್ನ ಪ್ರತಿಭಟನೆಯನ್ನು ದಾಖಲಿಸಿದೆ. ಈ ಕೂಡಲೇ ಬ್ಯಾಂಕ್ ನೋಟನ್ನು ಹಿಂದಕ್ಕೆ ಪಡೆದುಕೊಳ್ಳಬೇಕು ಮತ್ತು ಸರಿಯಾದ ನಕ್ಷೆಯೊಂದಿಗೆ ಮರು ಬಿಡುಗಡೆ ಮಾಡುವಂತೆ ಅದು ಒತ್ತಾಯಿಸಿದೆ.

ಪಾಕ್ 'ಕಾಲ್ಪನಿಕ ನಕ್ಷೆ' ವಿರೋಧಿಸಿ ಎಸ್ ಸಿಓ ಸಭೆ ತೊರೆದ ಭಾರತ

'ಭಾರತದ ಬಾಹ್ಯ ಪ್ರಾದೇಶಿಕ ಗಡಿಗಳನ್ನು ಬ್ಯಾಂಕ್ ನೋಟುಗಳಲ್ಲಿ ತಪ್ಪಾಗಿ ಚಿತ್ರಿಸಿರುವ ಸಂಗತಿಯನ್ನು ನಾವು ಗಮನಿಸಿದ್ದೇವೆ. ಈ ಸಂಬಂಧ ತುರ್ತಾಗಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೌದಿ ಅರೇಬಿಯಾಕ್ಕೆ ನವದೆಹಲಿ ಆಗ್ರಹಿಸಿದೆ' ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ ಹೇಳಿದ್ದಾರೆ.

ಗುರುವಾರ ಪಾಕಿಸ್ತಾನ್ ಆಕ್ರಮಿತ ಕಾಶ್ಮೀರದ (ಪಿಒಕೆ) ಕಾರ್ಯಕರ್ತರೊಬ್ಬರು, ಪಾಕಿಸ್ತಾನದ ನಕ್ಷೆಯಿಂದ ಸೌದಿ ಅರೇಬಿಯಾವು ಪಿಒಕೆ ಮತ್ತು ಗಿಲ್ಗಿಟ್-ಬಲ್ಟಿಸ್ತಾನ್‌ಗಳನ್ನು ತೆಗೆದುಹಾಕಿದೆ ಎಂದಿದ್ದರು.

'ಸೌದಿ ಅರೇಬಿಯಾದಿಂದ ಭಾರತಕ್ಕೆ ದೀಪಾವಳಿ ಉಡುಗೊರೆ. ಗಿಲ್ಗಿಟ್-ಬಲ್ಟಿಸ್ತಾನ್ ಮತ್ತು ಕಾಶ್ಮೀರವನ್ನು ಪಾಕಿಸ್ತಾನದ ನಕ್ಷೆಯಿಂದ ತೆಗೆದುಹಾಕಲಾಗಿದೆ' ಎಂದು ಹೋರಾಟಗಾರ ಅಮ್ಜದ್ ಅಯುಬ್ ಟ್ವೀಟ್ ಮಾಡಿದ್ದರು.

ಲಡಾಖ್ಅನ್ನು ಚೀನಾದಲ್ಲಿ ತೋರಿಸಿದ ವಿವಾದಕ್ಕೆ ಅಸಮರ್ಪಕ ಉತ್ತರ ನೀಡಿದ ಟ್ವಿಟ್ಟರ್

ನವೆಂಬರ್ 21-22ರಂದು ನಡೆಯಲಿರುವ ಜಿ-20 ಸಮ್ಮೇಳನವನ್ನು ತನ್ನ ಅಧ್ಯಕ್ಷತೆಯಲ್ಲಿ ಆಯೋಜಿಸುತ್ತಿರುವ ಸಂದರ್ಭದ ಸಲುವಾಗಿ ಸೌದಿ ಅರೇಬಿಯಾ ಹೊಸ 20 ರಿಯಾಲ್ ನೋಟುಗಳನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಇರುವ ಭೂಪಟದಲ್ಲಿ ಗಿಲ್ಗಿಟ್-ಬಲ್ಟಿಸ್ತಾನ್ ಮತ್ತು ಪಿಒಕೆಯನ್ನು ಪಾಕಿಸ್ತಾನದ ಭಾಗ ಎಂದು ತೋರಿಸಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿವೆ.

English summary
The new 20 Riyal banknote issued by Saudi Arabia depict Jammu and Kashmir and Ladakh outside the territory of India. New Delhi has lodged a protest on it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X