ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಟ್ಟಿಂಗ್ ಬಜಾರಿನ ಒಲವು ಯಾವ ಪಕ್ಷದತ್ತ?

|
Google Oneindia Kannada News

ವದೆಹಲಿ, ಮೇ 21: ಮತದಾನೋತ್ತರ ಸಮೀಕ್ಷೆಗಳು ಬಿಜೆಪಿ ಹಾಗೂ ಎನ್‌ಡಿಎ ಪರ ಒಲವು ತೋರಿದ ಬೆನ್ನಲ್ಲೇ ದೇಶದ ಪ್ರಮುಖ ಬೆಟ್ಟಿಂಗ್ ಬಜಾರ್‌ಗಳಲ್ಲಿ ಆಡಳಿತಾರೂಢ ಬಿಜೆಪಿ ಪರ ಬಾಜಿ ಕಟ್ಟುತ್ತಿದ್ದಾರೆ.

ಯಾವುದೇ ಪ್ರಮುಖ ಬಾಜಿ ಮಾರುಕಟ್ಟೆಯಲ್ಲಿ ಬಿಜೆಪಿಗೆ ಪೂರ್ಣ ಬಹುಮತ ದೊರೆಯದಿದ್ದರೂ ಎನ್‌ಡಿಎ ಸುಲಭವಾಗಿ ಅಧಿಕಾರಕ್ಕೆ ಬರಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಬಿಜೆಪಿಗೆ 245ರ ಆಸುಪಾಸಿನಲ್ಲಿ ಸೀಟುಗಳು ಸಿಗಬಹುದು ಆದರೆ ಎನ್‌ಡಿಎ 300ರ ಗಡಿ ದಾಟಿಲಿದೆ ಎಂಬುದು ಎಲ್ಲಾ ಬಾಜಿಕೋರರ ನಿರೀಕ್ಷೆಯಾಗಿದೆ.

ಬೆಟ್ಟಿಂಗ್ ಬಜಾರಿನಲ್ಲಿ ಕೊನೆ ಸುತ್ತು, ಯಾರ ಗಮ್ಮತ್ತು, ಯಾರಿಗೆ ಆಪತ್ತುಬೆಟ್ಟಿಂಗ್ ಬಜಾರಿನಲ್ಲಿ ಕೊನೆ ಸುತ್ತು, ಯಾರ ಗಮ್ಮತ್ತು, ಯಾರಿಗೆ ಆಪತ್ತು

ಆದರೆ ಪ್ರತಿಪಕ್ಷ ಕಾಂಗ್ರೆಸ್‌ಗೆ ಮಾತ್ರ ಎಲ್ಲರೂ 80ರ ಆಸುಪಾಸಿನ ಸಂಖ್ಯೆ ನೀಡಿದ್ದಾರೆ. ಹೀಗಾಗಿ ಬಿಜೆಪಿಗೆ ಕಳೆದ ಬಾರಿಗಿಂತ 40 ಸೀಟುಗಳು ಕೊರತೆಯಾದರೆ ಅದೇ ಕಾಂಗ್ರೆಸ್‌ಗೆ 40 ಸೀಟುಗಳು ಅಧಿಕವಾಗಿ ಸಿಗಲಿದೆ ಎನ್ನುವುದು ಬಾಜಿ ಬಾಜಾರ್‌ನ ನಿರೀಕ್ಷೆಯಾಗಿದೆ.

Satta Bazaars forecast BJP victory but expect lower than pollsters

ಈ ಬಾರಿ ಬಾಜಿ ಬಜಾರ್‌ನಲ್ಲಿ 1 ಲಕ್ಷ ಕೋಟಿಗೂ ಅಧಿಕ ಹಣಹೂಡಿಕೆಯಾಗಿದೆ ಎನ್ನುವ ಮಾಹಿತಿ ಇದೆ.

2019 ಎಕ್ಸಿಟ್ ಪೋಲ್ ಸರಾಸರಿ: 'ಚೌಕಿದಾರ್' ಮೋದಿ ಮತ್ತೊಮ್ಮೆ2019 ಎಕ್ಸಿಟ್ ಪೋಲ್ ಸರಾಸರಿ: 'ಚೌಕಿದಾರ್' ಮೋದಿ ಮತ್ತೊಮ್ಮೆ

ರಾಜಸ್ತಾನದಲ್ಲಿ ಬಿಜೆಪಿಗೆ 242-245, ಕಾಂಗ್ರೆಸ್‌ಗೆ 75-80 ಸ್ಥಾನಗಳು. ಮುಂಬೈನಲ್ಲಿ ಬಿಜೆಪಿಗೆ 238-241, ಕಾಂಗ್ರೆಸ್‌ಗೆ 78-81 ಸ್ಥಾನಗಳು, ಗುಜರಾತ್‌ನಲ್ಲಿ ಬಿಜೆಪಿಗೆ 242-244, ಕಾಂಗ್ರೆಸ್‌ಗೆ 80-82 ಸ್ಥಾನಗಳು, ದೆಹಲಿಯಲ್ಲಿ ಬಿಜೆಪಿಗೆ 238-241, ಕಾಂಗ್ರೆಸ್‌ಗೆ 79-81 ಸ್ಥಾನಗಳು, ಮಧ್ಯಪ್ರದೇಶದಲ್ಲಿ ಬಿಜೆಪಿಗೆ 246-248 ಸ್ಥಾನಗಳ, ಕಾಂಗ್ರೆಸ್‌ಗೆ 80-82 ಸ್ಥಾನಗಳು ಲಭ್ಯವಾಗಲಿವೆ ಎಂದು ಅಂದಾಜಿಸಿದೆ. ಸಟ್ಟಾ ಬಜಾರ್ ಮಾತ್ರ ಮತದಾನೋತ್ತರ ಸಮೀಕ್ಷೆಗಳಿಗಿಂತ ಕಡಿಮೆ ಸೀಟನ್ನು ಬಿಜೆಪಿಗೆ ನೀಡಿದೆ.

English summary
Much like the exit polls, several ‘satta bazaars’ have also predicted a second term for the BJP-led NDA in the centre for the next five years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X