ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೆಲ್ಲೂರು ಮೂಲದ ವಿಜ್ಞಾನಿ ಡಿಅರ್ ಡಿಒ ಚೇರ್ಮನ್

By Mahesh
|
Google Oneindia Kannada News

ನವದೆಹಲಿ, ಆಗಸ್ಟ್ 26: ವಿಜ್ಞಾನಿ, ರಕ್ಷಣಾ ಸಚಿವರ ವೈಜ್ಞಾನಿಕ ಸಲಹೆಗಾರರಾಗ್ರುವ ಆಂಧ್ರಪ್ರದೇಶದ ನೆಲ್ಲೂರು ಮೂಲದ ಡಾ. ಜಿ. ಸತೀಶ್​ ರೆಡ್ಡಿ ಅವರನ್ನು ಭಾರತದ ರಕ್ಷಣಾ ಸಂಶೋಧನೆ ಅಭಿವೃದ್ಧಿ ಸಂಸ್ಥೆ (ಡಿಆರ್​ಡಿಒ) ಅಧ್ಯಕ್ಷರನ್ನಾಗಿ ಹಾಗೂ ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಇಲಾಖೆ (ಡಿಡಿಆರ್&ಡಿ)ಯ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿದೆ.

ಡಾ. ​ರೆಡ್ಡಿ ಅವರ ನೇಮಕಾತಿಗೆ ಸಂಪುಟದ ನೇಮಕಾತಿ ಸಮಿತಿಯು ಶನಿವಾರದಂದು ಅನುಮೋದನೆ ನೀಡಿದ್ದು, ಎರಡು ವರ್ಷಗಳ ಕಾಲ ಕಾರ್ಯ ನಿರ್ವಹಿಸಲಿದ್ದಾರೆ.

ಚಿತ್ರದುರ್ಗದ ಚಳ್ಳಕೆರೆಯ 'ಡಿಆರ್‌ಡಿಒ ಎಟಿಆರ್'ಗೆ ಜೇಟ್ಲಿ ಚಾಲನೆಚಿತ್ರದುರ್ಗದ ಚಳ್ಳಕೆರೆಯ 'ಡಿಆರ್‌ಡಿಒ ಎಟಿಆರ್'ಗೆ ಜೇಟ್ಲಿ ಚಾಲನೆ

ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್​ ಅವರ ವೈಜ್ಞಾನಿಕ ಸಲಹೆಗಾರರಾಗಿರುವ ಡಾ. ರೆಡ್ಡಿ ಅವರು, ಕ್ಷಿಪಣಿ ಅಭಿವೃದ್ಧಿ, ಅಂತರಿಕ್ಷಯಾನ ತಂತ್ರಜ್ಞಾನ ಸಂಶೋಧನೆಯ ಮೂಲಕ ಸಾಕಷ್ಟು ಕೊಡುಗೆ ನೀಡಿದ್ದಾರೆ.

Satheesh Reddy appointed as new DRDO chairman

ನೆಲ್ಲೂರು ಮೂಲದ ಡಾ. ಜಿ.ಸತೀಶ್​ ರೆಡ್ಡಿ ಅವರು ಆಂಧ್ರಪ್ರದೇಶದ ಜವಹರಲಾಲ್​ ನೆಹರೂ ಟೆಕ್ನಲಾಜಿಕಲ್​ ಯೂನಿವರ್ಸಿಟಿಯಲ್ಲಿ ಎಲೆಕ್ಟ್ರಾನಿಕ್ಸ್​ ಅಂಡ್​ ಕಮ್ಯುನಿಕೇಶನ್​ ಇಂಜಿನಿಯರಿಂಗ್​ನಲ್ಲಿ ಪದವಿ ಪಡೆದಿದ್ದಾರೆ. ಲಂಡನ್​ನ ರಾಯಲ್​ ಇನ್ಸ್​ಟಿಟ್ಯೂಟ್​ ಆಫ್​ ನ್ಯಾವಿಗೇಷನ್​ನಲ್ಲಿ, ಯುಕೆಯ ರಾಯಲ್​ ಏರೋನಾಟಿಕಲ್​ ಸೊಸೈಟಿಯಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿ ವಿದ್ಯಾಭ್ಯಾಸ ಮಾಡಿದ್ದರು.

ರಷ್ಯಾದ ಅಕಾಡೆಮಿ ಆಫ್ ನ್ಯಾವಿಗೇಷನ್​ ಅಂಡ್​ ಮೋಷನ್​ ಕಂಟ್ರೋಲ್​ನಲ್ಲಿ ವಿದೇಶಿ ಸದಸ್ಯರಾಗಿದ್ದರು. ಕಂಪ್ಯೂಟರ್​ ಸೊಸೈಟಿ ಆಫ್​ ಇಂಡಿಯಾ, ಇಂಡಿಯನ್​ ನ್ಯಾಷನಲ್​ ಆಫ್​ ಎಂಜಿನಿಯರಿಂಗ್​, ಏರೋನಾಟಿಕ್​ ಸೊಸೈಟಿ ಆಫ್​ ಇಂಡಿಯಾ, ಯುಕೆಯ ಇನ್ಸ್​ಟಿಟ್ಯೂಟ್​ ಆಫ್​ ಎಂಜಿನಿಯರಿಂಗ್​ ಅಂಡ್​ ಟೆಕ್ನಾಲಜಿಯಲ್ಲಿ ಸಂಶೋಧನಾರ್ಥಿಯಾಗಿದ್ದರು. ಭಾರತದ ಹಾಗೂ ವಿದೇಶಗಳಲ್ಲಿ ಪ್ರೊಫೆಸರ್​ ಆಗಿ, ವಿಜ್ಞಾನಿಯಾಗಿ ಸೇವೆ ಸಲ್ಲಿಸಿದ್ದಾರೆ.

ಇಂಡಿಯನ್​ ಸೈನ್ಸ್​ ಕಾಂಗ್ರೆಸ್​ ಅಸೋಸಿಯೇಷನ್​ ನೀಡುವ ಪ್ರತಿಷ್ಠಿತ ಹೋಮಿ ಜಹಂಗೀರ್​ ಬಾಬಾ ಪ್ರಶಸ್ತಿಗೆ ಇವರು ಭಾಜನರಾಗಿದ್ದಾರೆ. ಇವರು ಯುಕೆಯ ರಾಯಲ್​ ಏರೋನಾಟಿಕ್​ ಸೊಸೈಟಿಯಿಂದ ಬೆಳ್ಳಿ ಪದಕ ಪಡೆದ ಮೊದಲ ಭಾರತದ ವಿಜ್ಞಾನಿಯಾಗಿದ್ದಾರೆ. ಭಾರತದ ಐಇಐ ಹಾಗೂ ಅಮೆರಿಕಾದ ಐಇಇಇಯ ಜಂಟಿ ಪ್ರಶಸ್ತಿಗೆ ಭಾಜನರಾದ ಮೊದಲಿಗರಾಗಿದ್ದಾರೆ.

English summary
Distinguished scientist and scientific adviser to the defence minister, Dr G. Satheesh Reddy has been appointed for the post of secretary, Department of Defence Research and Development and chairman of Defence Research and Development Organisation (DRDO). Dr Reddy is a native of SPSR Nellore district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X