ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರ್ದಾರ್ ಪಟೇಲ್ ಜನ್ಮದಿನ: 'ರನ್ ಫಾರ್ ಯೂನಿಟಿ'ಗೆ ಪ್ರಧಾನಿ ಚಾಲನೆ

By Sachhidananda Acharya
|
Google Oneindia Kannada News

ನವದೆಹಲಿ, ಅಕ್ಟೋಬರ್ 31: ಇಂದು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮ ದಿನ. ಈ ಹಿನ್ನಲೆಯಲ್ಲಿ ಇಂದು ಬೆಳಿಗ್ಗೆಯೇ ಪಟೇಲರ ಸಮಾಧಿಗೆ ತೆರಳಿ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಉಪರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು, ಪ್ರಧಾನಿ ನರೇಂದ್ರ ಮೋದಿ ಪುಷ್ಪ ನಮನ ಸಲ್ಲಿಸಿದರು.

ನಂತರ ಮೇಜರ್ ಧ್ಯಾನ್ ಚಂದ್ ರಾಷ್ಟ್ರೀಯ ಕ್ರೀಡಾಂಗಣದಲ್ಲಿ 'ರನ್ ಫಾರ್ ಯೂನಿಟಿ' ಏಕತಾ ಓಟಕ್ಕೆ ಪ್ರಧಾನಿ ಮೋದಿ ಚಾಲನೆ ನೀಡಿದರು.

Sardar Patel's birth anniversary: Modi flags off 'Run for Unity' at Major Dhyan Chand Stadium

ಚಾಲನಾ ಸಮಾರಂಭದಲ್ಲಿ ಮಾತನಾಡಿದ ಅವರು, "ಇವತ್ತು ಸರ್ದಾರ್ ವಲ್ಲಭಭಾಯಿ ಪಟೇಲ್ ಜನ್ಮದಿನವೂ ಹೌದು. ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ಮೃತರಾದ ದಿನವೂ ಹೌದು. ಇಬ್ಬರನ್ನೂ ರಾಷ್ಟ್ರ ಸ್ಮರಿಸುತ್ತದೆ" ಎಂದು ಹೇಳಿದರು.

ಈ ರನ್ ಫಾರ್ ಯೂನಿಟಿಯಲ್ಲಿ ದೇಶದ ಯುವ ಜನಾಂಗ ಭಾಗವಹಿಸುತ್ತಿರುವುದು ನನಗೆ ಹಮ್ಮೆಯನ್ನುಂಟು ಮಾಡಿದೆ. ಇದರಲ್ಲಿ ಭಾಗವಹಿಸುವುದು ಮಾತ್ರವಲ್ಲ ಯುವ ಜನಾಂಗ ಸರ್ದಾರ್ ಪಟೇಲರು ದೇಶಕ್ಕೆ ನೀಡಿದ ಕೊಡುಗೆಯನ್ನು ಗೌರವಿಸಬೇಕು ಎಂದು ತಿಳಿಸಿದರು.

Sardar Patel's birth anniversary: Modi flags off 'Run for Unity' at Major Dhyan Chand Stadium

"ಸ್ವಾತಂತ್ರ್ಯ ಪೂರ್ವದಲ್ಲಿ ಮತ್ತು ಸ್ವಾತಂತ್ರ್ಯ ನಂತರ ಅವರು ಭಾರತಕ್ಕೆ ನೀಡಿದ ಕೊಡುಗೆಯ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ. ಬಹುಸಂಸ್ಕೃತಿಯ ದೇಶ ಭಾರತ. ಹೀಗಿದ್ದೂ ಏಕತೆಯಿಂದಿರುವುದು ನಮ್ಮ ವಿಶೇಷತೆ ಎಂದು ಮೋದಿ ಶ್ಲಾಘನೆ," ವ್ಯಕ್ತಪಡಿಸಿದರು.

ರನ್ ಫಾರ್ ಯೂನಿಟಿ ಓಟಕ್ಕೆ ಚಾಲನೆ ನೀಡುವ ವೇಳೆ ಕ್ರೀಡಾಪಟುಗಳಾದ ದೀಪಾ ಕರ್ಮಾಕರ್, ಸರ್ದಾರ್ ಸಿಂಗ್, ಸುರೇಶ್ ರೈನಾ, ಕರಣಂ ಮಲ್ಲೇಶ್ವರಿ ಮೊದಲಾದವರು ಹಾಜರಿದ್ದರು.

English summary
Prime minister Narendra Modi flags off 'Run for Unity' at Major Dhyan Chand Stadium in Delhi on Sardar Vallabhbhayi Patel's birth anniversary.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X