• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

8 ತಿಂಗಳ ಗರ್ಭಿಣಿ ಆಗಿದ್ದರೂ ರೋಗಿಗಳಿಗೆ ಚಿಕಿತ್ಸೆ ನೀಡಿದ ವೈದ್ಯೆ

|

ರಾಯ್ಪುರ್, ಏಪ್ರಿಲ್ 21: ಕೊರೊನಾ ವಿರುದ್ಧದ ಹೋರಾಟದಲ್ಲಿ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಗಳ ಶ್ರಮ ಬಹಳ ದೊಡ್ಡದಿದೆ. ಇಂತಹ ಕಠಿಣ ಸಮಯದಲ್ಲಿ ತಮ್ಮ ಆರೋಗ್ಯದ ಬಗ್ಗೆ ಯೋಚನೆ ಮಾಡದೆ, ಅವರು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ.

ಛತ್ತಿಸ್‌ಘಡದಲ್ಲಿ ವೈದ್ಯರೊಬ್ಬರು ತಾವು ಗರ್ಭಿಣಿ ಆಗಿದ್ದರೂ, ಆಸ್ಪತ್ರೆಗೆ ಬಂದು ಕೆಲಸ ಮಾಡುತ್ತಿದ್ದಾರೆ. ಕೊರೊನಾ ಭೀತಿ ನಡುವೆ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಸಂತೋಶಿ ಮಾಣಿಕ್ಪುರಿ ಎಂಬ ವೈದ್ಯರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ಸೂಚಿಸಿದ್ದಾರೆ.

ತನ್ನ ಮಗುವಿಗಿಂತ ರೋಗಿಗಳು ಮುಖ್ಯ ಎಂದ ಬೆಂಗಳೂರಿನ ನರ್ಸ್

ಸಂತೋಶಿ ಮಾಣಿಕ್ಪುರಿ ಛತ್ತಿಸ್‌ಘಡದ ಕೊಂಡಾಗವ್ನ್ ಜಿಲ್ಲೆಯ, ಕೇರವಾಹಿ ಎಂಬ ಗ್ರಾಮದ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದಾರೆ. ಅವರು ಈಗ 8 ತಿಂಗಳ ಗರ್ಭಿಣಿ ಆಗಿದ್ದರೆ. ಆದರು ಈ ಸಮಯದಲ್ಲಿಯೂ ರೋಗಿಗಳಿಗೆ ಚಿಕಿತ್ಸೆ ನೀಡಿ, ತಮ್ಮ ಕೆಲಸ ಮಾಡುತ್ತಿದ್ದಾರೆ.

ಈ ಬಗ್ಗೆ ಮಾತನಾಡಿರುವ ಅವರು ''ನನ್ನ ಕೆಲಸವನ್ನು ಮಾಡಲು ನನಗೆ ಸಂತೋಷವಾಗಿದೆ ಮತ್ತು ನಾನು ಈ ಸಮಯದಲ್ಲಿ ದೇಶಕ್ಕೆ ಸೇವೆ ಸಲ್ಲಿಸುತ್ತಿದ್ದೇನೆ'' ಎಂದು ಹೆಮ್ಮೆಯಿಂದ ಕೇಳಿಕೊಂಡಿದ್ದಾರೆ.

ಈ ಸಮಯದಲ್ಲಿ ತಮ್ಮ ಪತಿ ಹಾಗೂ ಕುಟುಂಬದ ಸಂಪೂರ್ಣ ಬೆಂಬಲ ಇದೆ. ಅವರು ತನ್ನ ಕೆಲಸಕ್ಕೆ ಪ್ರೋತ್ಸಾಹ ನೀಡುತ್ತಿದ್ದಾರೆ ಎಂದು ಸಂತೋಶಿ ಮಾಣಿಕ್ಪುರಿ ಸಂತಸ ವ್ಯಕ್ತಪಡಿಸಿದ್ದಾರೆ.

ಛತ್ತಿಸ್‌ಘಡದಲ್ಲಿ 33 ಕೊರೊನಾ ವೈರಸ್‌ ಪಾಸಿಟಿವ್ ಪ್ರಕರಣಗಳು ಈವರೆಗೆ ಕಂಡು ಬಂದಿದೆ.

English summary
Santoshi Manikpuri a health care professional from chhattisgarh attending to patients even in the 8th month of her pregnancy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X