ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ಯಾಮ್‌ಸಂಗ್‌ಗೆ ರಾಜೀನಾಮೆ- ಮೋದಿ ಸರ್ಕಾರದಲ್ಲಿ ಕೆಲಸ!

By Ashwath
|
Google Oneindia Kannada News

ಅಹಮದಾಬಾದ್‌, ಜೂನ್‌.2: ಸ್ಯಾಮ್‌ಸಂಗ್‌ನ ಸಂಶೋಧನಾ ವಿಭಾಗದ ಉಪ ಮುಖ್ಯಸ್ಥ, ಗುಜರಾತ್‌ನ ಮೂಲದ ಪ್ರಣವ್ ಮಿಸ್ತ್ರಿ, ಅಮೆರಿಕದ ಸಿಲಿಕಾನ್‌ ವ್ಯಾಲಿಯ ಕೋಟ್ಯಾಂತರ ರೂಪಾಯಿ ಸಂಬಳ ಬಿಟ್ಟು ನರೇಂದ್ರ ಮೋದಿಯವರ ಜೊತೆ ಕೆಲಸ ಮಾಡಲು ಉತ್ಸುಕರಾಗಿದ್ದಾರೆ.

ಮೋದಿ ಬೆಂಬಲಿಗರಾಗಿರುವ ಪ್ರಣವ್‌ ನನ್ನ ಲ್ಯಾಬ್‌ ಕೆಲಸಕ್ಕೆ ಗುಡ್‌ಬೈ ಹೇಳಿ ಮರಳಿ ಭಾರತಕ್ಕೆ ಬಂದು ಮೋದಿಯವರ ಜೊತೆ ಕೈ ಜೋಡಿಸಲು ನಾನು ಸಿದ್ದ ಎಂದು ಹೇಳಿದ್ದಾರೆ.

ಪ್ರಣವ್‌ ಅವರು 2011ರಲ್ಲಿ ಗುಜರಾತ್‌ನ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಮೋದಿಯವರನ್ನು ಭೇಟಿಯಾಗಿದ್ದರು. ಆ ಸಂದರ್ಭದಲ್ಲಿ ಪ್ರಣವ್ ಅವರು ಸಿಕ್ಸ್ತ್ ಸೆನ್ಸ್ ತಂತ್ರಜ್ಞಾನವನ್ನು ಪವರ್‌ ಪಾಯಿಂಟ್‌ ಮೂಲಕ ಮೋದಿಯವರಿಗೆ ವಿವರಿಸಿದ್ದರು. ಈ ತಂತ್ರಜ್ಞಾನಕ್ಕೆ ಮೋದಿಯವರು ಮೆಚ್ಚುಗೆ ಸೂಚಿಸಿದ್ದರು.

ಸ್ಯಾಮ್‌ಸಂಗ್‌ ಗೇರ್‌‌ ಯೋಜನೆ ನಂತರ ಒಂದು ಹೊಸ ಕಂಪೆನಿ ಸ್ಥಾಪಿಸಲು ಪ್ರಣವ್ ಚಿಂತಿಸಿದ್ದರು. ಆದರೆ ದುಡ್ಡು ಮಾಡಿ ಶ್ರೀಮಂತರಾಗದೇ ಭಾರತಕ್ಕೆ ಬಂದು ಜನಸಾಮಾನ್ಯರಿಗೆ ನೆರವಾಗುವ ಸಾಮಾನ್ಯ ಯೋಜನೆಗಳಿಗೆ ಕೆಲಸ ಮಾಡಲು ಮುಂದಾಗುತ್ತಿದ್ದೇನೆ ಎಂದು ಹೇಳಿದ್ದಾರೆ.[ಈತ ಮೋದಿ ಕಚೇರಿಯ ಪ್ರಮುಖ ಅಧಿಕಾರಿ]

Pranav Mistry

ನವೆಂಬರ್‌ 2013ರಲ್ಲಿ ಫೇಸ್‌ಬುಕ್‌ನಲ್ಲಿ "ಭವ್ಯ ಭಾರತದ ನಿರ್ಮಾಣಕ್ಕೆ ಮೋದಿಯವರಿಗೆ ಬಹಿರಂಗವಾಗಿ ಬೆಂಬಲ ನೀಡಬೇಕಾ'' ಎಂದು ಪ್ರಣವ್‌ ಪ್ರಶ್ನಿಸಿದ್ದರು.

ಮೋದಿಯವರು ಪ್ರಮಾಣ ವಚನ ಸ್ವೀಕರಿಸಿದ ದಿನ '' ಇಂದಿನಿಂದ ಭಾರತದಲ್ಲಿ ಹೊಸ ಬದಲಾವಣೆ ಆಗಲಿದೆ. ವಂಶಪಾರಂಪರೆಯ ರಾಜಕಾರಣದಿಂದ ಭಾರತ ಮುಕ್ತವಾದ ದಿನ" ಎಂದು ಮೋದಿಯವರನ್ನು ಬೆಂಬಲಿಸಿ ಟ್ವೀಟ್‌ ಮಾಡಿದ್ದರು.

ಪ್ರಧಾನಿ ಮೋದಿ ಮತ್ತು ಪ್ರಣವ್‌ ಮಿಸ್ತ್ರಿ ಭೇಟಿಗೆ ಇನ್ನೂ ಅಧಿಕೃತ ದಿನ ನಿಗದಿಯಾಗಿಲ್ಲ. ಜೂನ್‌ ತಿಂಗಳಿನಲ್ಲಿ ನರೇಂದ್ರ ಮೋದಿ ಮತ್ತು ಪ್ರಣವ್‌ ಮಿಸ್ತ್ರಿ ಭೇಟಿಯಾಗುವ ಸಾಧ್ಯತೆಯಿದೆ. ಮಾಹಿತಿಗಳ ಪ್ರಕಾರ ಸರ್ಕಾರದ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯದ ಸಲಹೆಗಾರರಾಗಿ ಅವರು ನೇಮಕವಾಗುವ ಸಾಧ್ಯತೆಯಿದೆ.

ಪ್ರಣವ್‌ ಮಿಸ್ತ್ರಿ:
ಸ್ಯಾಮ್‌ಸಂಗ್‌ ಕಂಪನಿಯ ಸಂಶೋಧನಾ ವಿಭಾಗದಲ್ಲಿರುವ ಪ್ರಣವ್ ಮಿಸ್ತ್ರಿ ಅವರು ಬಾಂಬೆ ಐಐಟಿಯ ಹಳೇವಿದ್ಯಾರ್ಥಿ. ಸ್ಯಾಮ್‌ಸಂಗ್‌ನ ಥಿಂಕ್‌ ಟ್ಯಾಂಕ್‌‌ ವಿಭಾಗ ಮುಖ್ಯಸ್ಥರಾಗಿದ್ದಾರೆ. ವೇರಬಲ್‌ ಕಂಪ್ಯೂಟಿಂಗ್‌, ಅಗ್‌‌‌ಮೆಂಟೆಡ್‌ ರಿಯಾಲಿಟಿ, ಗೆಶ್ಚರ್‌ ತಂತ್ರಜ್ಞಾನ, ರೊಬೊಟಿಕ್ಸ್‌ ಕ್ಷೇತ್ರದಲ್ಲಿ ಸಂಶೋಧನೆ ನಡೆಸಿದ್ದಾರೆ.ವಿಶ್ವ ಆರ್ಥಿಕ ವೇದಿಕೆಯವರು 2013ರಲ್ಲಿ ಪ್ರಣವ್‌ ಮಿಸ್ತ್ರಿ 'ಯಂಗ್‌ ಗ್ಲೋಬಲ್‌ ಲೀಡರ್‌ ' ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಸ್ಯಾಮ್‌ಸಂಗ್‌ ವೇರಬಲ್‌ ಸಾಧನ ಗೆಲಾಕ್ಸಿ ಗೇರ್‌ ಕೈಗಡಿಯಾರವನ್ನು ರೂಪಿಸಿದ ಕೀರ್ತಿ‌ ಇವರದು.

English summary
India-born computer scientist and all-round whiz kid Pranav Mistry, known for cutting-edge innovations focused on the fields of wearable technology and augmented reality among others, wants nothing more than to give up what many would consider a dream job and come back home to work with Narendra Modi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X