• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜೈಲಿನಲ್ಲಿರೋ ಸ್ಯಾಮ್ ಸಂಗ್ ಬಾಸ್ ಕೈಯಲ್ಲೇ ಸ್ಮಾರ್ಟ್ ಫೋನಿಲ್ಲ!!

|

ಸಿಯೋಲ್, ಫೆಬ್ರವರಿ 24: ತನ್ನ ತವರು ದೇಶವಾದ ದಕ್ಷಿಣ ಕೊರಿಯಾದ ಅಧ್ಯಕ್ಷರಿಗೆ ಲಂಚ ನೀಡಿದ ಪ್ರಕರಣವೊಂದರಲ್ಲಿ ಅಪರಾಧಿಯಾಗಿ ಜೈಲು ಪಾಲಾಗಿರುವ ಸ್ಯಾಮ್ ಸಂಗ್ ಕಂಪನಿಯ ಉಪಾಧ್ಯಕ್ಷ ಜೇ ವೈ. ಲೀ ಅವರ ಕೈಯ್ಯಲ್ಲೇ ಈಗ ಸ್ಮಾರ್ಟ್ ಫೋನ್ ಇಲ್ಲ.

ಹೌದು. ಇಡೀ ಜಗತ್ತಿಗೇ ಸ್ಮಾರ್ಟ್ ಫೋನನ್ನು ಹಂಚಿದ ಕಂಪನಿಯ ಒಡೆಯ ಈಗ ಒಂದು ಫೋನ್ ಮಾಡಬೇಕೆಂದರೂ ಅಲ್ಲಿ ಜೈಲು ಸಿಬ್ಬಂದಿಯನ್ನು ಕೇಳಬೇಕು. ಅಂಥ ಪರಿಸ್ಥಿತಿಯಿದೆ. ದಿನದ 24 ಗಂಟೆ ಪೂರಾ ಅವರು ತಮ್ಮ ಸೆಲ್ ನಲ್ಲಿ ಒಂಟಿಯಾಗಿರುತ್ತಾರೆಂದು ಮೂಲಗಳು ತಿಳಿಸಿವೆ.[ಸ್ಯಾಮ್ ಸಂಗ್ ಕಂಪನಿ ಬಾಸ್ ಲೀ ಬಂಧನ]

ಅಷ್ಟೇ ಅಲ್ಲ, ನಿತ್ಯವೂ ತಾನು ಬಯಸಿದ ಮೃಷ್ಟಾನ್ನ ಭೋಜನ ಸವಿಯುತ್ತಿದ್ದ ಲೀ ಈಗ ಜೈಲು ಊಟಕ್ಕೆ ಮಾತ್ರ ಸೀಮಿತರಾಗಿದ್ದಾರಂತೆ. ಅವರ ಲಕ್ಷುರಿ ಉಡುಪು, ದುಬಾರಿ ಪಫ್ಯೂಮ್ ಇದ್ಯಾವುದರ ಸಂಪರ್ಕವಿಲ್ಲದೆ ಅವರು ಸಮಯ ದೂಡುತ್ತಿದ್ದಾರೆ. ಇದು ಆರಂಭದಲ್ಲಿ ಅವರಿಗೆ ತೀರಾ ಕಿರಿಕಿರಿ ಎಂದೆನಿಸಿದರೂ ಕ್ರಮೇಣ ಜೈಲು ವಾಸಕ್ಕೆ ಹೊಂದಿಕೊಂಡಿದ್ದಾರೆಂದು ಹೇಳಲಾಗಿದೆ.

ಆದರೆ, ಅವರಿಗೆ ತಮ್ಮ ವಿರುದ್ಧದ ಪ್ರಕರಣದ ಬಗ್ಗೆ ತಮ್ಮ ವಕೀಲರ ಬಳಿ ಚರ್ಚಿಸಲು ಅವಕಾಶ ನೀಡಲಾಗಿದೆ. ಇದಕ್ಕಾಗಿ ಪ್ರತ್ಯೇಕ ಕೋಣೆಯೊಂದನ್ನು ಅವರಿಗೆ ನೀಡಲಾಗಿದೆ. ಅಲ್ಲಿ ಅವರು ತಮಗೆ ಬೇಕಾದಷ್ಟು ಹೊತ್ತು ತಮ್ಮ ವಕೀಲರು ಹಾಗೂ ಕಾನೂನು ಸಲಹೆಗಾರರ ಬಳಿ ಮಾತುಕತೆ ನಡೆಸಬಹುದಾಗಿದೆ.[ಸ್ಯಾಮ್ ಸಂಗ್ ದಬ್ಬಿ ಅಗ್ರಪಟ್ಟಕ್ಕೇರಿದ ಮೈಕ್ರೋಮ್ಯಾಕ್ಸ್]

ಅಲ್ಲದೆ, ಜೈಲಿನಲ್ಲಿದ್ದರೂ ಸ್ಯಾಮ್ ಸಂಗ್ ಕಂಪನಿಯಲ್ಲಿ ಅವರ ಸ್ಥಾನಕ್ಕೇನೂ ಚ್ಯುತಿ ಬಂದಿಲ್ಲವಂತೆ. ಅವರು ಈಗಲೂ ಸ್ಯಾಮ್ ಸಂಗ್ ಕಂಪನಿಯ ಉಪಾಧ್ಯಕ್ಷರಾಗಿದ್ದಾರೆಂದು ಹೇಳಲಾಗಿದೆ. ಪ್ರಮುಖ ನಿರ್ಧಾರಗಳನ್ನು ಅವರಿಗೆ ಸಂಬಂಧಪಟ್ಟವರೇ ಜೈಲಿಗೆ ಬಂದು ಅವರ ಬಳಿ ಚರ್ಚಿಸಿ ಲೀ ನೀಡುವ ಸೂಚನೆಗಳನ್ನು ಪಾಲಿಸುತ್ತಿದ್ದಾರೆಂದು ಹೇಳಲಾಗಿದೆ.

English summary
The Samsung boss Jay Y. Lee is spending his jail term after being convicted in a bribery case, is living no smart phone, no basic felicities inside the jail, says a report.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X