ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅತಿ ಶ್ರೀಮಂತ ಪಕ್ಷ : ಪ್ರಾದೇಶಿಕ ಪಕ್ಷಗಳ ಪೈಕಿ ಎಸ್ಪಿ, ಡಿಎಂಕೆ ಮುಂದು!

|
Google Oneindia Kannada News

ನವದೆಹಲಿ, ಮಾರ್ಚ್ 07 : 2017-18ನೇ ಸಾಲಿನ ಆರ್ಥಿಕ ವರ್ಷದ ಅತಿ ಶ್ರೀಮಂತ ಪಕ್ಷಗಳ ಪೈಕಿ ಸಮಾಜವಾದಿ ಪಕ್ಷ, ಡಿಎಂಕೆ, ಟಿಆರ್ ಎಸ್ ಮುಂದಿವೆ ಎಂದು ಅಸೋಸಿಯೇಷನ್ ಫಾರ್ ಡೆಮೊಕ್ರಾಟಿಕ್ ರಿಫಾರ್ಮ್(ಎಡಿಆರ್) ವರದಿ ಹೇಳಿದೆ.

2017-18ನೇ ಆರ್ಥಿಕ ವರ್ಷದಲ್ಲಿ 37ಕ್ಕೂ ಅಧಿಕ ಪ್ರಾದೇಶಿಕ ಪಕ್ಷಗಳು ಗಳಿಸಿದ ಮೊತ್ತ ಹಾಗೂ ಖರ್ಚು ವೆಚ್ಚವನ್ನು ಲೆಕ್ಕ ಹಾಕಿ, ಎಡಿಆರ್ ವರದಿ ತಯಾರಿಸಿದೆ. ಈ ವರದಿ ಪ್ರಕಾರ, ಒಟ್ಟಾರೆ, ಈ ಪಕ್ಷಗಳ ಒಟ್ಟು ಆದಾಯ 237.27 ಕೋಟಿ ರು ನಷ್ಟಿದೆ.

Samajwadi Party Was Richest Regional Party in 2018, DMK and TRS Follow Next

ಅಖಿಲೇಶ್ ಯಾದವ್ ಅವರ ಪಕ್ಷ ಗರಿಷ್ಠ ಆದಾಯ 47.19 ಕೋಟಿ ರು ಗಳಿಕೆ ಹೊಂದಿದೆ. ಒಟ್ಟಾರೆ, 37 ಪಕ್ಷಗಳ ಆದಾಯದಲ್ಲಿ ಶೇ 19.89ರಷ್ಟು ಆದಾಯ ಹೊಂದಿದೆ. ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಹಾಗೂ ಟಿಆರ್ ಎಸ್ ಕ್ರಮವಾಗಿ 35.74 ಕೋಟಿ ರು ಹಾಗೂ 27.27 ಕೋಟಿ ರು ಗಳಿಕೆ ಹೊಂದಿವೆ. ಮೂರು ಪಕ್ಷಗಳು 110.21 ಕೋಟಿ ರು (46.45%) ಗಳಿಸಿವೆ.

ಕಾಂಗ್ರೆಸ್‌ ಮಹಾಘಟಬಂಧನ್‌ನ ಭಾಗ: ಅಖಿಲೇಶ್ ಯಾದವ್ ಕಾಂಗ್ರೆಸ್‌ ಮಹಾಘಟಬಂಧನ್‌ನ ಭಾಗ: ಅಖಿಲೇಶ್ ಯಾದವ್

ಎಡಿಆರ್ ವಿಶ್ಲೇಷಣೆಯಂತೆ 2016-17 ಆರ್ಥಿಕ ವರ್ಷದಲ್ಲಿ ಉಳಿದ 34 ಪ್ರಾದೇಶಿಕ ಪಕ್ಷಗಳ ಆದಾಯ 409.64 ಕೋಟಿ ರು ನಿಂದ 2017-18ರಲ್ಲಿ ಶೇ 42ರಷ್ಟು ಇಳಿಕೆ ಕಂಡು 236.86ಕೋಟಿ ರುಗೆ ಕುಸಿದಿದೆ. 34 ಪಕ್ಷಗಳ ಖರ್ಚುವೆಚ್ಚಗಳು 2016-17 ಆರ್ಥಿಕ ವರ್ಷದಲ್ಲಿ 468.63 ಕೋಟಿ ರು ನಿಂದ ಶೇ 63.72ರಷ್ಟು ಕುಸಿದು 2017-18 ಆರ್ಥಿಕ ವರ್ಷದಲ್ಲಿ 298.61 ಕೋಟಿ ರು ಕುಸಿದಿದೆ.

ನ್ಯಾಷನಲ್ ಕಾನ್ಫರೆನ್ಸ್, ಪೀಪಲ್ಸ್ ಡೆಮೊಕ್ರಾಟಿಕ್ ಪಾರ್ಟಿ ಹಾಗೂ ಬೋಡೋಲ್ಯಾಂಡ್ ಪೀಪಲ್ಸ್ ಫ್ರಂಟ್ ಸೇರಿದಂತೆ 11 ಪಕ್ಷಗಳ ಆದಾಯ, ಖರ್ಚುವೆಚ್ಚಗಳು ಲಭ್ಯವಾಗಿಲ್ಲ ಎಂದು ಎಡಿಆರ್ ಹೇಳಿದೆ.

English summary
The Samajwadi Party is the richest regional party, followed by the DMK and TRS, a report released by the Association for Democratic Reforms (ADR) has said. The report analysed the income and expenditure of 37 regional political parties for the financial year 2017-18. According to the ADR analysis, the total income of these parties for 2017-18 was Rs 237.27crore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X