ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಲ್ಮಾನ್‌ ಜಾಮೀನು ಅರ್ಜಿಯ ತೀರ್ಪು ಮಧ್ಯಾಹ್ನ ಪ್ರಕಟ

|
Google Oneindia Kannada News

ಬೆಂಗಳೂರು, ಏಪ್ರಿಲ್ 07: ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ 5 ವರ್ಷ ಜೈಲು ಶಿಕ್ಷೆಗೆ ಒಳಗಾಗಿರುವ ನಟ ಸಲ್ಮಾನ್ ಖಾನ್‌ ಜಾಮೀನು ಅರ್ಜಿಯ ತೀರ್ಪನ್ನು ಶನಿವಾರ ಮಧ್ಯಾಹ್ನಕ್ಕೆ ಕಾಯ್ದಿರಿಸಲಾಗಿದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | 2018ರ ನಿಮ್ಮ ಕನಸಿನ ಸಂಪುಟವನ್ನು ಆಯ್ಕೆ ಮಾಡಿ

ಬೆಳಿಗ್ಗೆ 10.30ರ ಸುಮಾರಿಗೆ ಅರ್ಜಿ ವಿಚಾರಣೆ ಆರಂಭಿಸಿದ ನ್ಯಾಯಾಧೀಶ ರವೀಂದ್ರ ಕುಮಾರ್ ಜೋಶಿ, ತೀರ್ಪನ್ನು ಮಧ್ಯಾಹ್ನದ ಊಟದ ಬಳಿಕ ಪ್ರಕಟಿಸುವುದಾಗಿ ತಿಳಿಸಿದರು.

ನ್ಯಾಯಾಧೀಶರ ವರ್ಗಾವಣೆ: ಸಲ್ಮಾನ್ ಖಾನ್ ಜಾಮೀನು ಕಗ್ಗಂಟು?ನ್ಯಾಯಾಧೀಶರ ವರ್ಗಾವಣೆ: ಸಲ್ಮಾನ್ ಖಾನ್ ಜಾಮೀನು ಕಗ್ಗಂಟು?

ಸಲ್ಮಾನ್ ಜಾಮೀನು ಅರ್ಜಿಗೆ ಸಂಬಂಧಿಸಿದಂತೆ ಪ್ರಾಸಿಕ್ಯೂಷನ್ ಮತ್ತು ಸಲ್ಮಾನ್ ಪರ ವಕೀಲರ ವಾದ ಮಂಡನೆ ಪೂರ್ಣಗೊಂಡಿದೆ.

salmans bail plea: order to be pronounced after lunch

ಜೋಧಪುರ ಜೆಎಂಸಿ ನ್ಯಾಯಾಲಯ ಸಲ್ಮಾನ್ ಖಾನ್‌ಗೆ ಗುರುವಾರ ಶಿಕ್ಷೆ ಪ್ರಕಟಿಸಿತ್ತು. ಅದರ ಬೆನ್ನಲ್ಲೇ ಸಲ್ಮಾನ್ ಪರ ವಕೀಲರು ಜಾಮೀನು ಅರ್ಜಿ ಸಲ್ಲಿಸಿದ್ದರು. ಶುಕ್ರವಾರ ಅರ್ಜಿ ವಿಚಾರಣೆ ನಡೆಸಿದ ಜೋಧಪುರ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ರವೀಂದ್ರ ಕುಮಾರ್ ಜೋಶಿ ತೀರ್ಪನ್ನು ಶನಿವಾರಕ್ಕೆ ಕಾಯ್ದಿರಿಸಿದ್ದರು.

ಸಲ್ಮಾನ್ ಜಾಮೀನು ಅರ್ಜಿ: ಬದಲಾಗದ ನ್ಯಾಯಾಧೀಶರುಸಲ್ಮಾನ್ ಜಾಮೀನು ಅರ್ಜಿ: ಬದಲಾಗದ ನ್ಯಾಯಾಧೀಶರು

ಸಹ ಆರೋಪಿಗಳಾಗಿದ್ದ ನಟರಾದ ಸೈಫ್ ಅಲಿಖಾನ್, ಸೊನಾಲಿ ಬೇಂದ್ರೆ, ಟಬು, ನೀಲಂ ಕೊಠಾರಿ ಮತ್ತು ಸ್ಥಳೀಯ ಪ್ರವಾಸಿ ಗೈಡ್ ವಿರುದ್ಧ ಸಾಕ್ಷ್ಯಾಧಾರಗಳು ಇಲ್ಲದ ಕಾರಣ ಅವರನ್ನು ಖುಲಾಸೆ ಮಾಡಲಾಗಿತ್ತು.

English summary
Jodhpur Sessions Court Judge Ravindra Kumar Joshi has reserved the order on actor Salman Khan’s bail plea till after lunch..
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X