ಕೋಟಿ ಕೋಟಿ ಗಳಿಸಿದ ಸಲ್ಮಾನ್ ಖಾನ್ ಚಿತ್ರ ಮೋದಿಗೆ ಅರ್ಪಣೆ!

Posted By:
Subscribe to Oneindia Kannada
   ಸಲ್ಮಾನ್ ಖಾನ್ ರ ಟೈಗರ್ ಜಿಂದಾ ಹೇ ಸಿನಿಮಾ ನರೇಂದ್ರ ಮೋದಿಗೆ ಅರ್ಪಣೆ | Oneindia Kannada

   ನವದೆಹಲಿ, ಡಿ 30 (ಎಎನ್ಐ) : ಬಾಲಿವುಡ್ ಚಿತ್ರ ಜಗತ್ತಿನ ಬಾಕ್ಸ್ ಆಫೀಸ್ ಕಿಂಗ್ ಸಲ್ಮಾನ್ ಖಾನ್ ಪ್ರಮುಖ ಭೂಮಿಕೆಯಲ್ಲಿರುವ 'ಟೈಗರ್ ಜಿಂದಾ ಹೇ' ಚಿತ್ರವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಅರ್ಪಿಸಲು ಚಿತ್ರತಂಡ ನಿರ್ಧರಿಸಿದೆ.

   44.5 ಕೋಟಿ ಅಡ್ವಾನ್ಸ್ ಟ್ಯಾಕ್ಸ್ ಕಟ್ಟಿ ಹುಬ್ಬೇರಿಸಿದ ಸಲ್ಮಾನ್ ಖಾನ್

   ಕಳೆದ ವಾರ ಬಿಡುಗಡೆಗೊಂಡು ಈಗಾಗಲೇ ಇನ್ನೂರು ಕೋಟಿಗೂ ಮೇಲೆ ವಹಿವಾಟು ನಡೆಸಿರುವ ಈ ಚಿತ್ರದ ಪ್ರಮುಖ ತಾರಾಗಣದಲ್ಲಿ ಸಲ್ಮಾನ್ ಖಾನ್, ಕತ್ರಿನಾ ಕೈಫ್, ಪರೇಶ್ ರಾವಲ್, ಅಂಗದ್ ಬೇಡಿ ಮುಂತಾದವರಿದ್ದಾರೆ. ಚಿತ್ರವನ್ನು ಆಲಿ ಅಬ್ಬಾಸ್ ಜಫರ್ ನಿರ್ದೇಶಿಸಿದ್ದರು.

   Tiger Zinda Hai is a tribute to Prime Minister Narendra Modi, Movie director Ali Abbas Zafar

   ನೈಜಕಥೆಯನ್ನಾಧರಿಸಿದ ಚಿತ್ರವಿದು ಎಂದು ಹೇಳಿರುವ ನಿರ್ದೇಶಕ ಜಫರ್, ಈ ಚಿತ್ರವನ್ನು ನಾವು ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ವಿದೇಶಾಂಗ ಖಾತೆಯ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಅರ್ಪಿಸಲು ನಿರ್ಧರಿಸಿದ್ದೇವೆ ಎಂದಿದ್ದಾರೆ.

   ಸಲ್ಮಾನ್ ವಿರುದ್ಧ ಮೇಲ್ಮನವಿ ಅರ್ಜಿ ವಿಚಾರಣೆಗೆ ಸುಪ್ರೀಂ ಒಪ್ಪಿಗೆ

   ಪ್ರಧಾನಿಯವರ ಕಾರ್ಯಕ್ಷಮತೆಯ ಬಗ್ಗೆ ಚಿತ್ರದಲ್ಲೇ ಉಲ್ಲೇಖಿಸಲು ನಾವು ನಿರ್ಧರಿಸಿದ್ದೆವು, ಆದರೆ ಅದಕ್ಕೆ ಸೆನ್ಸಾರ್ ಮಂಡಳಿ ಅನುಮತಿ ನೀಡಿರಲಿಲ್ಲ ಎಂದು ನಿರ್ದೇಶಕರು ಹೇಳಿದ್ದಾರೆ. ಐಸಿಎಸ್ ಉಗ್ರರು ಭಾರತೀಯ ನರ್ಸುಗಳನ್ನು ಒತ್ತೆಯಾಗಿರಿಸಿಕೊಂಡಿದ್ದ ಕಥಾಹಂದರವನ್ನು ಚಿತ್ರ ಹೊಂದಿದೆ.

   2014ರಲ್ಲಿ ಪ್ರಧಾನಿಯಾಗಿ ನರೇಂದ್ರ ಮೋದಿ ಅಧಿಕಾರ ಸ್ವೀಕರಿಸಿಕೊಂಡ ನಂತರ ನಡೆದ ಘಟನೆಯೊಂದರಲ್ಲಿ, ಸುಮಾರು 46 ಭಾರತೀಯ ನರ್ಸುಗಳನ್ನು ಐಸಿಎಸ್ ಉಗ್ರರು ಇರಾಕ್ ನಲ್ಲಿ ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿದ್ದರು.

   ತುಂಬಾ ಸೂಕ್ಷ್ಮವಾಗಿದ್ದ ಈ ವಿಚಾರವನ್ನು ಪ್ರಧಾನಿ ಮೋದಿ, ಸಚಿವೆ ಸುಷ್ಮಾ ಸ್ವರಾಜ್ ಮತ್ತು ನಮ್ಮ ವಿದೇಶಾಂಗ ಸಚಿವಾಲಯ, ಹತ್ತು ದಿನಗಳ ನಿರಂತರ ಪ್ರಯತ್ನದಿಂದ ಅಚ್ಚುಕಟ್ಟಾಗಿ ನಿಭಾಯಿಸಿತ್ತು. ಎಲ್ಲಾ ಒತ್ತೆಯಾಳುಗಳನ್ನು ಬಿಡಿಸಿಕೊಂಡು ಬರುವಲ್ಲಿ ನಮ್ಮ ಸರಕಾರ ಯಶಸ್ವಿಯಾಗಿತ್ತು ಎಂದು ನಿರ್ದೇಶಕ ಜಫರ್ ಹೇಳಿದ್ದಾರೆ.

   ಈ ಘಟನೆಯನ್ನೇ ಸ್ಪೂರ್ತಿಯಾಗಿಸಿಕೊಂಡು ಟೈಗರ್ ಜಿಂದಾ ಹೇ ಚಿತ್ರವನ್ನು ನಿರ್ದೇಶಿಸಿದ್ದೇನೆ ಮತ್ತು ಈ ಚಿತ್ರ ಪ್ರಧಾನಿ ಮೋದಿಗೆ ಅರ್ಪಣೆ ಎಂದು ನಿರ್ದೇಶಕರು ಹೇಳಿದ್ದಾರೆ.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   Salman Khan and Katrina Kaif starer 'Tiger Zinda Hai' is a tribute to Prime Minister Narendra Modi. Director Ali Abbas Zafar has revealed the biggest kept secret of film. The plot of the film is inspired from the 2014 hostage rescue operation that India pulled off to save the lives of 46 of its nurses held captive by the Islamic State (ISIS) in Iraq.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ