• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

44.5 ಕೋಟಿ ಅಡ್ವಾನ್ಸ್ ಟ್ಯಾಕ್ಸ್ ಕಟ್ಟಿ ಹುಬ್ಬೇರಿಸಿದ ಸಲ್ಮಾನ್ ಖಾನ್

By Sachhidananda Acharya
|

ಬೆಂಗಳೂರು, ಮಾರ್ಚ್ 22: ಮತ್ತೊಮ್ಮೆ ತಾನು ಬಾಲಿವುಡ್ ಸುಲ್ತಾನ್ ಎಂಬುದನ್ನು ಸಲ್ಮಾನ್ ಖಾನ್ ನಿರೂಪಿಸಿದ್ದಾರೆ. 2016-17ನೇ ವರ್ಷಕ್ಕೆ ಎಲ್ಲಾ ನಟರನ್ನು ಮೀರಿ ಅತೀ ಹೆಚ್ಚಿನ ಮುಂಗಡ ತೆರಿಗೆಯನ್ನು ಸಲ್ಮಾನ್ ಖಾನ್ ಪಾವತಿಸಿದ್ದಾರೆ.

ಅಕ್ಷಯ್ ಕುಮಾರ್ ಮತ್ತು ಹೃತಿಕ್ ರೋಷನ್ ತೆರಿಗೆ ಪಾವತಿಯಲ್ಲಿ ಸಲ್ಮಾನ್ ಖಾನ್ ಗೆ ಪೈಪೋಟಿ ನೀಡುವಲ್ಲಿ ಸೋತಿದ್ದಾರೆ.

ವಿಶೇಷ ಅಂದರೆ ಕಿರುತೆರೆ ಹಾಸ್ಯ ಕಲಾವಿದ ಕರಣ್ ಶರ್ಮಾ ಆದಾಯದಲ್ಲಿ ಶೇಕಡಾ 206 ರಷ್ಟು ವೃದ್ಧಿಯಾಗಿದ್ದು ಎಲ್ಲರನ್ನೂ ಅಚ್ಚರಿಯಲ್ಲಿ ಕೆಡವಿದ್ದಾರೆ. ಇನ್ನು ಮುಂಗಡ ತೆರಿಗೆ ಪಾವತಿದಾರರಲ್ಲಿ ನಿರ್ದೇಶಕ ಕರಣ್ ಜೋಹರ್ ಕಾಣಿಸಿಕೊಂಡಿದ್ದು ಪಟ್ಟಿಯಲ್ಲಿರುವ ಏಕೈಕ ಡೈರೆಕ್ಟರ್ ಆಗಿದ್ದಾರೆ.[ಅಕ್ರಮ ಶಸ್ತ್ರಾಸ್ತ್ರ ಕೇಸ್ : ನಟ ಸಲ್ಮಾನ್ ಖಾನ್ ನಿರ್ದೋಷಿ]

ಇದೇ ವೇಳೆ ಮೂವರು ನಟಿಯರೂ ಟಾಪ್ 10 ಪಟ್ಟಿಯಲ್ಲಿದ್ದಾರೆ. ದೀಪಿಕಾ ಪಡುಕೋಣೆ, ಕರೀನಾ ಕಪೂರ್ ಮತ್ತು ಅಲಿಯಾ ಭ ಟ್ ಕೋಟಿ ಕೋಟಿ ಟ್ಯಾಕ್ಸ್ ಕಟ್ಟಿದ್ದಾರೆ.

ಅಡ್ವಾನ್ಸ್ ಟ್ಯಾಕ್ಸ್ ಎಂದರೇನು?

ಅಡ್ವಾನ್ಸ್ ಟ್ಯಾಕ್ಸ್ ಎಂದರೇನು?

ಆರ್ಥಿಕ ವರ್ಷ ಮುಗಿಯುವ ಮೊದಲು ಮುಂದಿನ ವರ್ಷದ ಟ್ಯಾಕ್ಸ್ ಮುಂಗಡವಾಗಿ ಕಟ್ಟುವುದಕ್ಕೆ ಅಡ್ವಾನ್ಸ್ ಟ್ಯಾಕ್ಸ್ ಎನ್ನುತ್ತಾರೆ. 'ಪೇ ಆಸ್ ಯು ಅರ್ನ್' ಎನ್ನುವುದು ಈ ಯೋಜನೆಯ ಹೆಸರು. ಒಂದು ವರ್ಷದಲ್ಲಿ 10,000 ರೂಪಾಯಿಗಿಂತ ಹೆಚ್ಚಿನ ಟ್ಯಾಕ್ಸ್ ಪಾವತಿ ಮಾಡುವವರಿಗೆ ಮಾತ್ರ ಇದು ಅನ್ವಯವಾಗಲಿದೆ. ಒಂದು ವರ್ಷದಲ್ಲಿ ಎಷ್ಟು ಆದಾಯ ಸಂಪಾದಿಸುತ್ತಾರೋ ಅದರ ಶೇಕಡಾ 33 ರಷ್ಟು ಅಡ್ವಾನ್ಸ್ ಟ್ಯಾಕ್ಸ್ ಕಟ್ಟಬಹುದು.

ಬಾಲಿವುಡ್ ಸುಲ್ತಾನ್

ಬಾಲಿವುಡ್ ಸುಲ್ತಾನ್

2016-17ನೇ ಆರ್ಥಿಕ ವರ್ಷದಲ್ಲಿ ಸಲ್ಮಾನ್ ಖಾನ್ 44.5 ಕೋಟಿ ಮುಂಗಡ ತೆರಿಗೆ ಕಟ್ಟಿದ್ದಾರೆ. ಕಳೆದ ವರ್ಷ ಅಂದರೆ 2015-16ರಲ್ಲಿ ಅವರು 32.2 ಕೋಟಿ ಅಡ್ವಾನ್ಸ್ ತೆರಿಗೆ ಕಟ್ಟಿದ್ದರು. ಅವರ ಆದಾಯದಲ್ಲಿ ಶೇಕಡಾ 39ರಷ್ಟು ವೃದ್ಧಿಯಾಗಿರುವುದನ್ನು ಅವರ ತೆರಿಗೆ ಪಾವತಿ ತೋರಿಸುತ್ತಿದೆ.[ಸ್ಮಾರ್ಟ್ ಫೋನ್ ತಯಾರಿಕಾ ಕ್ಷೇತ್ರಕ್ಕೆ ಕಾಲಿಟ್ಟ ಸಲ್ಲು !!!]

 ಅಕ್ಷಯ್ ಕುಮಾರ್ ತೆರಿಗೆಯಲ್ಲಿ ಇಳಿಕೆ

ಅಕ್ಷಯ್ ಕುಮಾರ್ ತೆರಿಗೆಯಲ್ಲಿ ಇಳಿಕೆ

ಸಲ್ಮಾನ್ ಖಾನ್ ತೆರಿಗೆಯಲ್ಲಿ ಏರಿಕೆಯಾಗಿದ್ದರೆ ಅಕ್ಷಯ್ ಕುಮಾರ್ ತೆರಿಗೆಯಲ್ಲಿ ಇಳಿಕೆಯಾಗಿದೆ. ಕಳೆದ ವರ್ಷ ಸರಣಿ ಹಿಟ್ ಚಿತ್ರಗಳನ್ನು ನೀಡಿಯೂ ಅಕ್ಷಯ್ ಈ ವರ್ಷ 29.5 ಕೊಟಿ ಮುಂಗಡ ತೆರಿಗೆ ಕಟ್ಟಿದ್ದಾರೆ. 2015-16ರಲ್ಲಿ ಅವರು 30 ಕೋಟಿ ರೂಪಾಯಿ ತೆರಿಗೆ ಕಟ್ಟಿದ್ದರು. ಇದಕ್ಕೆ ಹೋಲಿಸಿದರೆ ಇದು ಕಡಿಮೆಯಾಗಿದೆ.

 ಮೂರನೇ ಸ್ಥಾನದಲ್ಲಿ ಹೃತಿಕ್

ಮೂರನೇ ಸ್ಥಾನದಲ್ಲಿ ಹೃತಿಕ್

25.5 ಕೋಟಿ ಮುಂಗಡ ತೆರಿಗೆ ಕಟ್ಟಿ ಹೃತಿಕ್ ರೋಷನ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಕಳೆದ ವರ್ಷ ಅವರು 14 ಕೋಟಿ ಟ್ಯಾಕ್ಸ್ ಕಟ್ಟಿದ್ದರು. ಅವರ ಆದಾಯದಲ್ಲಿ ಶೇಕಡಾ 74ರಷ್ಟು ವೃದ್ಧಿಯಾಗಿದೆ.[ಧರ್ಮದ ಬಗ್ಗೆ ಕೇಳಿದ್ದಕ್ಕೆ ಕೋರ್ಟ್ ನಲ್ಲಿ 'ನಾನು ಭಾರತೀಯ' ಎಂದ ಸಲ್ಲು]

 ಬೆಚ್ಚಿ ಬೀಳಿಸಿದ ಕಪಿಲ್ ಶರ್ಮಾ

ಬೆಚ್ಚಿ ಬೀಳಿಸಿದ ಕಪಿಲ್ ಶರ್ಮಾ

ಕಿರುತೆರೆಯ ಹಾಸ್ಯ ಕಲಾವಿದ ಕಪಿಲ್ ಶರ್ಮಾ ಎಲ್ಲರ ನಿರೀಕ್ಷೆಗೂ ಮೀರಿ 23.9 ಕೋಟಿ ಮುಂಗಡ ಆದಾಯ ತೆರಿಗೆ ಕಟ್ಟಿ ಬಾಲಿವುಡ್ ನಟರು ಹುಬ್ಬೇರುವಂತೆ ಮಾಡಿದ್ದಾರೆ. ಕಳೆದ ವರ್ಷ ಅವರು ಕಟ್ಟಿದ ತೆರಿಗೆ ಕೇವಲ 7 ಕೋಟಿ ಎಂಬುದು ಗಮನಾರ್ಹ. ಅವರ ವೈಯಕ್ತಿಕ ಆದಾಯದಲ್ಲಿ ಶೇಕಡಾ 206ರಷ್ಟು ವೃದ್ದಿಯಾಗಿದೆ. ಹಾಗಾಗಿ ಈ ಮಟ್ಟಕ್ಕೆ ಮುಂಗಡ ತೆರಿಗೆ ಪಾವತಿಸಿದ್ದಾರೆ ಎಂದು ಐಟಿ ಅಧಿಕಾರಿಗಳೂ ಹೇಳಿದ್ದಾರೆ.

ಆರನೇ ಸ್ಥಾನದಲ್ಲಿ ರಣಬೀರ್ ಕಪೂರ್

ಆರನೇ ಸ್ಥಾನದಲ್ಲಿ ರಣಬೀರ್ ಕಪೂರ್

ಏ ದಿಲ್ ಹೇ ಮುಷ್ಕಿಲ್ ಚಿತ್ರದ ಭರ್ಜರಿ ಯಶಸ್ಸಿನ ನಂತರವೂ ರಣಬೀರ್ ಕಪೂರ್ ಆದಾಯದಲ್ಲಿ ಭಾರೀ ಇಳಿಕೆಯಾಗಿದೆ. ಕಳೆದ ವರ್ಷ 22.3 ಕೋಟಿ ಟ್ಯಾಕ್ಸ್ ಕಟ್ಟಿದ್ದ ಅವರು ಈ ಬಾರಿ ಕೇವಲ 16.5 ಕೋಟಿ ಟ್ಯಾಕ್ಸ್ ಕಟ್ಟಿದ್ದಾರೆ.

ಅಮೀರ್ ಖಾನ್

ಅಮೀರ್ ಖಾನ್

ಮಿಸ್ಟರ್ ಪರ್ಪೆಕ್ಷನಿಸ್ಟ್ ಅಮೀರ್ ಖಾನ್ ರಣಬೀರ್ ಕಪೂರ್ ನಂತರದ ಸ್ಥಾನದಲ್ಲಿದ್ದಾರೆ. ದಂಗಲ್ ಯಶಸ್ಸಿನ ನಂತರ ಅವರ ಆದಾಯದಲ್ಲಿ ಭಾರೀ ಏರಿಕೆಯಾದಂತೆ ಕಾಣಿಸುತ್ತಿದೆ. 2015-16ರರಲ್ಲಿ 9.6 ಕೋಟಿ ತೆರಿಗೆ ಕಟ್ಟಿದ್ದ ಅವರು ಈ ಬಾರಿ 14.8 ಕೋಟಿ ತೆರಿಗೆ ಕಟ್ಟಿದ್ದಾರೆ.

ಕರಣ್ ಜೋಹರ್ ಆದಾಯದಲ್ಲಿ ರಾಕೆಟ್ ವೇಗ

ಕರಣ್ ಜೋಹರ್ ಆದಾಯದಲ್ಲಿ ರಾಕೆಟ್ ವೇಗ

ಟಾಪ್ 10 ಪಟ್ಟಿಯಲ್ಲಿ ಒಬ್ಬರೇ ಒಬ್ಬರು ನಿರ್ದೇಶಕರು ಸ್ಥಾನ ಪಡೆದಿದ್ದಾರೆ, ಅವರೇ ಕರಣ್ ಜೋಹಾರ್. ಕಪಿಲ್ ಶರ್ಮಾ ರೀತಿಯಲ್ಲಿ ಕರಣ್ ಜೋಹರ್ ಆದಾಯದಲ್ಲಿಯೂ ಏರಿಕೆಯಾಗಿದೆ. ಕಳೆದ ಬಾರಿ ಕೇವಲ 35 ಲಕ್ಷ ತೆರಿಗೆ ಪಾವತಿಸಿದ್ದ ಅವರು ಈ ಬಾರಿ 4 ಕೋಟಿ ಪಾವತಿಸಿದ್ದಾರೆ. ಅವರ ಆದಾಯದಲ್ಲಿ ಶೇಕಡಾ 473ರಷ್ಟು ಏರಿಕೆಯಾಗಿದೆ.

ದೀಪಿಕಾ ಪಡುಕೋಣೆ

ದೀಪಿಕಾ ಪಡುಕೋಣೆ

ಮುಂಗಡ ತೆರಿಗೆ ಪಾವತಿಸಿದವರಲ್ಲಿ ನಟಿಯರೂ ಸೇರಿದ್ದಾರೆ. ನಟಿಯರ ವಿಭಾಗದಲ್ಲಿ ದೀಪಿಕಾ ಪಡುಕೋಣೆ ಮೊದಲ ಸ್ಥಾನದಲ್ಲಿದ್ದು 10.25 ಕೋಟಿ ತೆರಿಗೆ ಪಾವತಿಸಿದ್ದಾರೆ. XXX: Return of Xander Cage ಹಾಲಿವುಡ್ ಚಿತ್ರದ ನಂತರವೂ ಅವರ ಆದಾಯದಲ್ಲಿ ಕೇವಲ ಶೇಕಡಾ 13ರಷ್ಟು ಏರಿಕೆಯಾಗಿದೆ ಅಷ್ಟೆ. ಕಳೆದ ವರ್ಷ ಅವರು 9 ಕೋಟಿ ತೆರಿಗೆ ಪಾವತಿಸಿದ್ದರು.

ಅಲಿಯಾ ಭಟ್

ಅಲಿಯಾ ಭಟ್

ಅಲಿಯಾ ಭಟ್ ಆದಾಯದಲ್ಲಿ ಶೇಕಡಾ 46 ರಷ್ಟು ಏರಿಕೆಯಾಗಿದೆ. ಈ ಬಾರಿ 4.33 ಕೋಟಿ ತೆರಿಗೆಯನ್ನು ಅವರು ಪಾವತಿಸಿದ್ದಾರೆ. ಕಳೆದ ವರ್ಷ ಅವರು 2.9 ಕೋಟಿ ತೆರಿಗೆ ಪಾವತಿಸಿದ್ದರು.

ಇಳಿದ ಅಮ್ಮನ ಆದಾಯ

ಇಳಿದ ಅಮ್ಮನ ಆದಾಯ

ಈ ವರ್ಷ ಅಮ್ಮನಾಗಿದ್ದರಿಂದ ಕರೀನಾ ಕಪೂರ್ ಆದಾಯದಲ್ಲಿ ಭಾರೀ ಇಳಿಕೆಯಾಗಿದೆ 2015-16ರಲ್ಲಿ 7 ಕೋಟಿ ತೆರಿಗೆ ಪಾವತಿಸಿದ್ದ ಅವರು ಈ ಬಾರಿ ಕೇವಲ 3.9 ಕೋಟಿ ತೆರಿಗೆ ಪಾವತಿಸಿದ್ದಾರೆ. ಒಟ್ಟಾರೆ ಕರೀನಾ ಆದಾಯದಲ್ಲಿ ಶೇಕಡಾ 44 ರಷ್ಟು ಇಳಿಕೆಯಾಗಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Once again Salman Khan proved that he is a Bollywood sultan after paying 44.5 crore advance tax in the financial year 2016-17 followed by Akshay Kumar and Hrithik Roshan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more