ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಲ್ಮಾನ್ ತಂದೆಯಿಂದ ಮೋದಿ ಉರ್ದು ವೆಬ್ಸೈಟಿಗೆ ಚಾಲನೆ

|
Google Oneindia Kannada News

ಮುಂಬೈ, ಏ 19: ಹಿಂದೂ - ಮುಸ್ಲಿಂ ಭಾವೈಕ್ಯತೆಯ ಸಂಕೇತ ಎನ್ನುವಂತೆ ಬಾಲಿವುಡ್ ನಟ ಸಲ್ಮಾನ್ ಖಾನ್ ತಂದೆ ಸಲೀಂ ಖಾನ್ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯವರ ಉರ್ದು ವೆಬ್ ಸೈಟಿಗೆ ಚಾಲನೆ ನೀಡಿದ್ದಾರೆ.

ಖ್ಯಾತ ಸಾಹಿತಿಯೂ ಆಗಿರುವ ಸಲೀಂ ಖಾನ್, ಬಾಂದ್ರಾ ಗ್ರಾಮಾಂತರ ಪ್ರದೇಶದಲ್ಲಿರುವ ತನ್ನ ನಿವಾಸದಲ್ಲಿ http://www.narendramodi.in/lng/urdu ಅಂತರ್ಜಾಲಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಸ್ಥಳೀಯ ಬಿಜೆಪಿ ಮುಖಂಡ ಎನ್ ಸಿ ಶೈನಾ ಹಾಜರಿದ್ದರು.

Salman Khan father launches Narendra Modi Urdu Web Site

ನನ್ನ ಮತ್ತು ಮೋದಿಜಿ ನಡುವೆ ಉತ್ತಮ ಭಾಂದವ್ಯವಿದೆ. ಅಲ್ಲದೇ ನನಗೆ ಉರ್ದು ಭಾಷೆಯ ಮೇಲೆ ವ್ಯಾಮೋಹ ಜಾಸ್ತಿ. ಮೋದಿಯವರ ಉರ್ದು ಅಂತರ್ಜಾಲಕ್ಕೆ ಕೆಲವೊಂದು ಸಲಹೆಯನ್ನು ನರೇಂದ್ರ ಮೋದಿಯವರಿಗೆ ನೀಡಿದ್ದೆ ಎಂದು ಸಲೀಂ ಖಾನ್ ಹೇಳಿದ್ದಾರೆ.

ನಾನು ಪತ್ರಿಕೆಗಳಿಗೆ ಲೇಖನ ಬರೆಯುವ ಹವ್ಯಾಸ ಇಟ್ಟುಕೊಂಡಿದ್ದೇನೆ. ಇದರಿಂದ ನನ್ನ ಮತ್ತು ಮೋದಿಯವರ ನಡುವಣ ಭಾಂದವ್ಯ ವೃದ್ದಿಯಾಯಿತು. ನನ್ನ ಮೂಲಕ ಅಂತರ್ಜಾಲಕ್ಕೆ ಚಾಲನೆ ನೀಡಿ, ಮುಸ್ಲಿಂರನ್ನು ಓಲೈಸುವ ಉದ್ದೇಶ ಬಿಜೆಪಿಯವರಿಗೆ ಇಲ್ಲ ಎಂದು ಖುದ್ದು ಸಲೀಂ ಖಾನ್ ಈ ಸಂದರ್ಭದಲ್ಲಿ ಸ್ಪಷ್ಟ ಪಡಿಸಿದ್ದಾರೆ.

ಮುಸ್ಲಿಂ ಮುಖಂಡರ ಕೆಂಗಣ್ಣು: ಬಾಲಿವುಡ್ ನಟ ಸಲ್ಮಾನ್ ಖಾನ್ ಮತ್ತು ಅವರ ತಂದೆ ಸಲೀಂ ಖಾನ್ ಮತ್ತೆ ಮುಸ್ಲಿಂ ಮುಖಂಡರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಮೋದಿ ಅವರನ್ನು ಓಲೈಸುವ ಹಿಂದಿನ ಉದ್ದೇಶ ಏನು ಎಂದು ಇವರಿಬ್ಬರು ಸ್ಪಷ್ಟ ಪಡಿಸಲಿ ಎಂದು ಮುಖಂಡರು ಪ್ರಶ್ನಿಸಿದ್ದಾರೆ.

ಆಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ಸಭೆ ಸೇರಿದ್ದ ಮುಸ್ಲಿಂ ಮುಖಂಡರು, ಸಲೀಂ ಖಾನ್ ಮೋದಿ ಉರ್ದು ವೆಬ್ ಸೈಟ್ ಉದ್ಘಾಟಿಸಿದ್ದಕ್ಕೆ ನಮ್ಮ ತೀವ್ರ ವಿರೋಧವಿದೆ. ಇದರ ಹಿಂದೆ ಇವರಿಬ್ಬರಿಗೆ ವೈಯಕ್ತಿಕ ಲಾಭ ಏನಾದರೂ ಇದೆಯೇ ಎನ್ನುವುದನ್ನು ಮುಸ್ಲಿಂ ಸಮುದಾಯಕ್ಕೆ ಇವರು ತಿಳಿಸಬೇಕು ಎಂದು ಸಮುದಾಯದ ಮುಖಂಡ ಜಸಿಂ ಮೊಹಮ್ಮದ್ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

(image courtesy:ANI)

English summary
Veteran script writer and Bollywood actor Salman Khan's father, Salim Khan launched the Urdu version of BJP Prime Ministerial candidate Narendra Modi's official website.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X