ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏ.29ಕ್ಕೆ ಸಲ್ಲೂ ಎಲ್ಲಿದ್ರೂ ಕೋರ್ಟಿಗೆ ಹಾಜರಾಗಬೇಕು!

By Mahesh
|
Google Oneindia Kannada News

ಜೋಧಪುರ, ಏ.24: ಹಿಟ್ ಅಂಡ್ ರನ್ ಕೇಸಿನ ತೀರ್ಪಿನ ಭೀತಿಯಲ್ಲಿರುವ ಬಾಲಿವುಡ್ ನಟ ಸಲ್ಮಾನ್ ಖಾನ್ ಈಗ ಮತ್ತೊಂದು ಪ್ರಕರಣ ಕೊರಳಿಗೆ ಬಿಗಿಯಾಗಿ ಸುತ್ತಿಕೊಳ್ಳುತ್ತಿದೆ. ಹುಷಾರಿಲ್ಲ, ಶೂಟಿಂಗ್ ಇದೆ ಎಂದು ನೆಪ ಹೇಳುವುದನ್ನು ಬಿಟ್ಟು ಏ.29ರಂದು ಎಲ್ಲೇ ಇದ್ದರೂ ಕೋರ್ಟಿಗೆ ಹಾಜರಾಗಿ ಹೇಳಿಕೆ ನೀಡಬೇಕು ಎಂದು ಮಾಜಿಸ್ಟ್ರೇಟ್ ಜಡ್ಜ್ ಅನುಪಮ ಬಿಜಲಾನಿ ಆದೇಶಿಸಿದ್ದಾರೆ.

ಸಲ್ಮಾನ್ ಖಾನ್ ಅವರು ಶೂಟಿಂಗ್ ನಲ್ಲಿ ನಿರತರಾಗಿದ್ದಾರೆ. ಅವರು ವಿದೇಶಕ್ಕೆ ತೆರಳಲು ಅನುಮತಿ ನೀಡಿ, ಅವರು ಖುದ್ದು ಹಾಜರಾಗಲು ಸಾಧ್ಯವಿಲ್ಲ ಎಂದು ಸಲ್ಮಾನ್ ಖಾನ್ ಅವರ ವಕೀಲ ಎಚ್ಎಂ ಸಾರಸ್ವತ್ ಅವರು ಮಾಡಿದ ಮನವಿಯನ್ನು ಜಡ್ಜ್ ಅನುಪಮ ತಿರಸ್ಕರಿಸಿದ್ದಾರೆ.

ಸುಮಾರು 16 ವರ್ಷಗಳ ನಂತರ ಪ್ರಕರಣದ ತೀರ್ಪು ಹೊರ ಬರಬೇಕಿದ್ದು, ಈ ಕಾಯ್ದಿಟ್ಟ ತೀರ್ಪಿನಲ್ಲಿ ಏನಿದೆಯೋ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ. ಈ ನಡುವೆ ಆರು ಜನ ಸಾಕ್ಷಿಗಳನ್ನು ಮತ್ತೊಮ್ಮೆ ವಿಚಾರಣೆಗೊಳಪಡಿಸಲು ಸಲ್ಮಾನ್ ಖಾನ್ ವಕೀಲರು ಮಾಡಿರುವ ಮನವಿಯನ್ನು ಕೋರ್ಟ್ ಪುರಸ್ಕರಿಸಿದೆ..[ಸಲ್ಮಾನ್ 10 ವರ್ಷ ಜೈಲು ಶಿಕ್ಷೆ ಭೀತಿ]

Salman Khan Asked To Appear Before Court On April 29

ಅಕ್ರಮ ಶಸ್ತ್ರಾಸ್ತ್ರ ಬಳಸಿಕೊಂಡು ಕೃಷ್ಣಮೃಗ, ಚೀಂಕರಗಳನ್ನು ಹತ್ಯೆ ಮಾಡಿದ ಆರೋಪ ಹೊತ್ತಿರುವ 49ವರ್ಷದ ಬಹುಬೇಡಿಕೆಯ ನಟ ಸಲ್ಮಾನ್ ಖಾನ್ ಅವರಿಗೆ ಶೂಟಿಂಗ್ ಗಾಗಿ ಬ್ರಿಟನ್ ಗೆ ತೆರಳಲು ಕೋರ್ಟ್ ಇನ್ನೂ ಅನುಮತಿ ನೀಡಿಲ್ಲ. . ಭಜರಂಗಿ ಭಾಯ್ ಜಾನ್, ರಾಮ್ ರತನ ಧನ್ ಪಾವೋ ಚಿತ್ರಗಳಲ್ಲಿ ಸಲ್ಮಾನ್ ನಿರತರಾಗಿದ್ದಾರೆ. [ಸಲ್ಮಾನ್ 'ಫಾರೀನ್ ಟೂರಿಗೆ ಕಂಟಕ]

ಅಕ್ರಮ ಶಸ್ತ್ರಾಸ್ತ್ರ ಬಳಕೆ: ಕೃಷ್ಣಮೃಗ ಬೇಟೆಯಾಡಲು ಸಲ್ಮಾನ್ ಖಾನ್ ಹಾಗೂ ಇತರೆ ಆರೋಪಿಗಳು ಬಳಸಿದ ಶಸ್ತ್ರಾಸ್ತ್ರಗಳು ಲೈಸನ್ ಹೊಂದಿಲ್ಲ ಎಂದು ಅರಣ್ಯ ಇಲಾಖೆ ಅವರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅದರೆ, ಸಲ್ಮಾನ್ ಬಳಿ ಇದ್ದ ಗನ್ ಲೈಸನ್ ನವೀಕರಣಕ್ಕೆ ಅರ್ಜಿ ಹಾಕಲಾಗಿದೆ. ಲೈಸನ್ಸ್ ರದ್ದಾಗಿಲ್ಲ ಹಾಗೂ ಅವಧಿಯೂ ಮುಗಿದಿಲ್ಲ ಹೀಗಾಗಿ ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದಾರೆ ಎಂಬ ಆರೋಪ ಸರಿಯಲ್ಲ ಎಂದು ಸಲ್ಮಾನ್ ಪರ ವಕೀಲರು ವಾದಿಸಿದ್ದಾರೆ.

1998ರ ಅಕ್ಟೋಬರ್ 1-2ರಂದು ಕಂಕಾನಿ ಗ್ರಾಮದಲ್ಲಿ ಹಮ್ ಸಾಥ್ ಸಾಥ್ ಹೈ ಚಿತ್ರೀಕರಣದ ಸಂದರ್ಭದಲ್ಲಿ ರಾಜಸ್ಥಾನದ ಕಾಡೊಂದರಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ಕೃಷ್ಣ ಮೃಗ ಬೇಟೆಯಾಡಿದ್ದರು. ಸಲ್ಮಾನ್ ಖಾನ್ ಅವರ ಜೊತೆಯಲ್ಲಿ ನಟಿ ಸೋನಾಲಿ ಬೇಂದ್ರೆ, ತಬು, ನೀಲಂ, ಸೈಫ್ ಅಲಿ ಖಾನ್ ಮುಂತಾದವರಿದ್ದರು. ಎಲ್ಲರ ಮೇಲೆ ಅಕ್ರಮ ಶಸ್ತ್ರಾಸ್ತ್ರ ಕಾಯ್ದೆಯಡಿಯಲ್ಲಿ ಲೂನಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

English summary
Bollywood actor Salman Khan on Thursday was given an another chance to present himself before the court of the Chief judicial Magistrate in Jodhpur for recording his statement in an Arms Act violation case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X