ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಲ್ಮಾನ್‌ ಖಾನ್‌ಗೆ ಜಾಮೀನು: ಕೋರ್ಟ್‌ ವಿಧಿಸಿದ ಷರತ್ತುಗಳೇನು?

|
Google Oneindia Kannada News

ಬೆಂಗಳೂರು, ಏಪ್ರಿಲ್ 07: ಬಾಲಿವುಡ್‌ ನಟ ಸಲ್ಮಾನ್ ಖಾನ್‌ಗೆ ಜಾಮೀನು ಮಂಜೂರು ಮಾಡಲಾಗಿದ್ದರೂ ಅವರು ಚಿತ್ರೀಕರಣ ಅಥವಾ ವೈಯಕ್ತಿಕ ಕಾರಣಗಳಿಗಾಗಿ ಅನುಮತಿಯಿಲ್ಲದೆ ದೇಶದಿಂದ ಹೊರಹೋಗುವಂತಿಲ್ಲ.

ಸಲ್ಮಾನ್ ಗೆ ಜಾಮೀನು: ಅಂಧಾಭಿಮಾನಕ್ಕೆ ಟ್ವಿಟ್ಟಿಗರ ಧಿಕ್ಕಾರ..! ಸಲ್ಮಾನ್ ಗೆ ಜಾಮೀನು: ಅಂಧಾಭಿಮಾನಕ್ಕೆ ಟ್ವಿಟ್ಟಿಗರ ಧಿಕ್ಕಾರ..!

ವಿವಿಧ ಷರತ್ತುಗಳನ್ನು ವಿಧಿಸಿ ನ್ಯಾಯಾಲಯ ಸಲ್ಮಾನ್‌ ಖಾನ್‌ಗೆ ಜಾಮೀನು ನೀಡಿದೆ.

* 25,000 ರೂಪಾಯಿ ಮೊತ್ತದ ಎರಡು ವೈಯಕ್ತಿಕ ಬಾಂಡ್‌ಗಳನ್ನು ನೀಡಬೇಕು.

* ಸಿನಿಮಾ ಚಿತ್ರೀಕರಣ ಅಥವಾ ಇತರೆ ವೈಯಕ್ತಿಕ ಕಾರಣಗಳಿಗಾಗಿ ವಿದೇಶಕ್ಕೆ ತೆರಳಬೇಕೆಂದರೆ ನ್ಯಾಯಾಲಯದಿಂದ ಅನುಮತಿ ಪಡೆದುಕೊಳ್ಳುವುದು ಕಡ್ಡಾಯ

ಸಲ್ಮಾನ್ ಗೆ ಸುಲಭವಾಗಿ ಜಾಮೀನು ಸಿಕ್ಕಿದ್ದು ಏಕೆ? PETA ಪ್ರಶ್ನೆ ಸಲ್ಮಾನ್ ಗೆ ಸುಲಭವಾಗಿ ಜಾಮೀನು ಸಿಕ್ಕಿದ್ದು ಏಕೆ? PETA ಪ್ರಶ್ನೆ

* ಮೇ 7ರಂದು ಮತ್ತೆ ವಿಚಾರಣೆ ನಡೆಯಲಿದ್ದು, ಅದಕ್ಕಾಗಿ ನ್ಯಾಯಾಲಯದಲ್ಲಿ ಖುದ್ದು ಹಾಜರಾಗಬೇಕು.

salman gets bail in blackbuck poaching case

ಬಿಶ್ನೋಯಿ ಸಮುದಾಯ ಅಸಮಾಧಾನ
ಸಲ್ಮಾನ್ ಖಾನ್‌ಗೆ ಜೋಧಪುರ ಜೆಎಂಸಿ ನ್ಯಾಯಾಲಯ ಶಿಕ್ಷೆ ವಿಧಿಸಿ ತೀರ್ಪು ನೀಡಿದಾಗ ಸಂಭ್ರಮಿಸಿದ್ದ ಬಿಶ್ನೋಯಿ ಸಮುದಾಯ, ಜಾಮೀನು ದೊರೆತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದೆ.

ಸಲ್ಮಾನ್‌ಗೆ ಜಾಮೀನು ಮಂಜೂರು: ನಿಟ್ಟುಸಿರು ಬಿಟ್ಟ ಬಾಲಿವುಡ್ಸಲ್ಮಾನ್‌ಗೆ ಜಾಮೀನು ಮಂಜೂರು: ನಿಟ್ಟುಸಿರು ಬಿಟ್ಟ ಬಾಲಿವುಡ್

ಸಲ್ಮಾನ್‌ಗೆ ಜಾಮೀನು ಮಂಜೂರು ಮಾಡಿದ ಸೆಷನ್ಸ್ ನ್ಯಾಯಾಲಯದ ತೀರ್ಪಿನ ವಿರುದ್ಧ ರಾಜಸ್ಥಾನ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಬಿಶ್ನೋಯಿ ಸಮುದಾಯ ತೀರ್ಮಾನಿಸಿದೆ.

1998ರಲ್ಲಿ ಸಲ್ಮಾನ್ ಖಾನ್ ಮತ್ತು ಅವರ ಸಹನಟರು 'ಹಮ್ ಸಾತ್ ಸಾತ್ ಹೈ' ಚಿತ್ರದ ಚಿತ್ರೀಕರಣದ ವೇಳೆ ಎರಡು ಕೃಷ್ಣಮೃಗಗಳನ್ನು ಕೊಂದ ಆರೋಪ ಎದುರಿಸುತ್ತಿದ್ದರು. ಪ್ರಕರಣ ಸಂಬಂಧ ಸಲ್ಮಾನ್ ಮತ್ತಿತರರ ವಿರುದ್ಧ ಕಾನೂನು ಹೋರಾಟ ನಡೆಸಿತ್ತು.

English summary
Jodhpur Sessions Court has granted the actor bail in 1998 blackbuck poaching case. The court has granted bail on surety of Rs 50,000 and set May 7 as the next date of hearing.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X