ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಜಯ್ ಮಲ್ಯಗೆ ಸೇರಿದ ಷೇರು ಮಾರಾಟದಿಂದ 1008 ಕೋಟಿ ವಸೂಲಿ

|
Google Oneindia Kannada News

ನವದೆಹಲಿ, ಮಾರ್ಚ್ 27: ದೇಶದಿಂದ ಓಡಿ ಹೋಗಿರುವ ಉದ್ಯಮಿ ವಿಜಯ್ ಮಲ್ಯಗೆ ಸೇರಿದ್ದ ಯುನೈಟೆಡ್ ಬ್ರಿವರೀಸ್ ಹೋಲ್ಡಿಂಗ್ಸ್(ಯುಬಿಎಚ್ ಎಲ್) ಲಿಮಿಟೆಡ್ ನ ಷೇರುಗಳನ್ನು ಮಾರಾಟ ಮಾಡುವ ಮೂಲಕ ಸಾಲ ವಸೂಲಾತಿ ನ್ಯಾಯ ಮಂಡಳಿಯು 1008 ಕೋಟಿ ರುಪಾಯಿ ಸಂಗ್ರಹಿಸಿದೆ ಎಂದು ಜಾರಿ ನಿರ್ದೇಶನಾಲಯ (ಇಡಿ) ಬುಧವಾರ ಹೇಳಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದಿಂದ ವಿಜಯ್ ಮಲ್ಯಗೆ ಸೇರಿದ ಷೇರುಗಳನ್ನು ಜಪ್ತು ಮಾಡಿಕೊಳ್ಳಲಾಗಿತ್ತು. ಅವುಗಳು ಯೆಸ್ ಬ್ಯಾಂಕ್ ಬಳಿ ಇದ್ದವು. ಅವುಗಳನ್ನು ಹಿಂತಿರುಗಿಸುವಂತೆ ಕರ್ನಾಟಕ ಹೈ ಕೋರ್ಟ್ ಆದೇಶ ಮಾಡಿದ ನಂತರ ಬೆಂಗಳೂರಿನಲ್ಲಿರುವ ಸಾಲ ವಸೂಲಾತಿ ನ್ಯಾಯ ಮಂಡಳಿಗೆ ನೀಡಿತ್ತು.

ಈ ತಿಂಗಳ ಆರಂಭದಲ್ಲಿ ಸಾಲ ವಸೂಲಾತಿ ಅಧಿಕಾರಿ ನೋಟಿಸ್ ಹೊರಡಿಸಿ, ಯುಬಿಎಚ್ ಎಲ್ ನ 74,04,932 ಷೇರುಗಳನ್ನು ಮಾರಾಟ ಮಾಡುವುದಾಗಿ ತಿಳಿಸಿದ್ದರು. ಕಿಂಗ್ ಫಿಷರ್ ಏರ್ ಲೈನ್ ಹಾಗೂ ವಿಜಯ್ ಮಲ್ಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇತೃತ್ವದಲ್ಲಿ ಬ್ಯಾಂಕ್ ಗಳ ಒಕ್ಕೂಟದಿಂದ ಪಡೆದಿದ್ದ ಸಾಲ ವಸೂಲಾತಿಗೆ ಜಾರಿ ನಿರ್ದೇಶನಾಲಯದ ಕ್ರಮದಿಂದಾಗಿ, ಷೇರು ಮಾರಾಟ ಮಾಡಬಹುದು ಎಂದು ಮಾರ್ಚ್ 26ರಂದು ನ್ಯಾಯ ಮಂಡಳಿ ಒಪ್ಪಿಗೆ ಸೂಚಿಸಿತ್ತು.

Sale of Vijay Mallyas UBHL shares fetch 1008 crore

ಆ ನಂತರ ಬುಧವಾರದಂದು ಸಾಲ ವಸೂಲಾತಿ ಅಧಿಕಾರಿ ಷೇರುಗಳನ್ನು ಮಾರಾಟ ಮಾಡಿದ್ದು, ಅದರಿಂದ 1008 ಕೋಟಿ ರುಪಾಯಿ ಸಂಗ್ರಹ ಆಗಿದೆ. ಈ ಯುನೈಟೆಡ್ ಬ್ರಿವರೀಸ್ ಷೇರುಗಳು ಯುಬಿಎಚ್ ಎಲ್ ಬಳಿ ಇದ್ದವು. ಕಿಂಗ್ ಫಿಷರ್ ಏರ್ ಲೈನ್ಸ್ ಗಾಗಿ ಸಾಲ ಪಡೆಯುವಾಗ ಅವುಗಳನ್ನು ಭದ್ರತೆಗಾಗಿ ಅಡವಿಟ್ಟು ಸಾಲ ಪಡೆಯಲಾಗಿತ್ತು.

ಬೆಂಗಳೂರಿನಲ್ಲಿರುವ ವಿಜಯ್ ಮಲ್ಯ ಆಸ್ತಿ ಜಪ್ತಿಗೆ ಆದೇಶಬೆಂಗಳೂರಿನಲ್ಲಿರುವ ವಿಜಯ್ ಮಲ್ಯ ಆಸ್ತಿ ಜಪ್ತಿಗೆ ಆದೇಶ

ವಿಜಯ್ ಮಲ್ಯ ಸದ್ಯಕ್ಕೆ ಲಂಡನ್ ನಲ್ಲಿದ್ದು, ಭಾರತಕ್ಕೆ ಹಸ್ತಾಂತರಿಸುವ ಪ್ರಕ್ರಿಯೆ ನಡೆಯುತ್ತಿದೆ. ಜಾರಿ ನಿರ್ದೇಶನಾಲಯ ಹಾಗೂ ಸಿಬಿಐನಿಂದ ಮಲ್ಯ ವಿರುದ್ಧ ಒಂಬತ್ತು ಸಾವಿರ ಕೋಟಿ ಸಾಲ ಪಡೆದು, ಮರುಪಾವತಿ ಮಾಡದ ಕ್ರಿಮಿನಲ್ ಪ್ರಕರಣಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ.

English summary
The sale of shares, held by absconding businessman Vijay Mallya in United Breweries Holdings Limited, by the Debt Recovery Tribunal has fetched Rs 1,008 crore, the ED said Wednesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X