ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾವಿಕರ Honey trap ಕೇಸ್: ಫೇಸ್ಬುಕ್, ಟ್ವಿಟ್ಟರ್ ನಿಷೇಧಿಸಿದ ನೌಕಾಪಡೆ

|
Google Oneindia Kannada News

ನವದೆಹಲಿ, ಫೆಬ್ರವರಿ 03: ಪಾಕಿಸ್ತಾನದ ಬೇಹುಗಾರಿಕೆ ಸಂಸ್ಥೆ ಐಎಸ್​ಐ ಮಹಿಳೆಯರನ್ನು ಮುಂದಿಟ್ಟುಕೊಂಡು ನಾವಿಕರನ್ನು ಬಲೆಗೆ ಬೀಳಿಸಿಕೊಳ್ಳುವ ಜಾಲವನ್ನು ಛೇದಿಸಿದ ಬಳಿಕ ಭಾರತೀಯ ನೌಕಾಪಡೆ ಪ್ರಮುಖ ನಿರ್ಧಾರವನ್ನು ಕೈಗೊಂಡಿದೆ. ನೌಕಾಪಡೆ ಸ್ಪೈ ರಿಂಗ್ ಕೇಸಿನ ವಿಚಾರಣೆ ವೇಳೆ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ) ಹೊರ ಹಾಕಿರುವ ಮಾಹಿತಿ ಅನುಸಾರವಾಗಿ ನೌಕಾಪಡೆ ಸರಿ ಸುಮಾರು 85 ಅಪ್ಲಿಕೇಷನ್ ಗಳನ್ನು ನಿಷೇಧ/ ಬಳಕೆ ನಿರ್ಬಂಧ ಹೇರುವ ಕ್ರಮ ಕೈಗೊಂಡಿದೆ.

ನಾವಿಕರನ್ನು ಹನಿ ಟ್ರ್ಯಾಪ್ ಮಾಡಲು ಪಾಕಿಸ್ತಾನವು ಒಂದೇ ಬಗೆಯ ಸಾಮಾಜಿಕ ಜಾಲ ಖಾತೆಯನ್ನು ಬಳಸಿದ್ದರು ಎಂಬ ಅಂಶವನ್ನು ಎನ್ಐಎ ಅಧಿಕಾರಿಗಳು ತಿಳಿಸಿದ್ದರು. ಆಂಧ್ರಪ್ರದೇಶ ಪೊಲೀಸ್ ಮತ್ತು ಕೇಂದ್ರ ಗುಪ್ತಚರ ಸಂಸ್ಥೆ(ಐಬಿ) ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ 10 ಮಂದಿ ನಾವಿಕರನ್ನು ಬಂಧಿಸಲಾಗಿದ್ದು, ವಿಚಾರಣೆ ಜಾರಿಯಲ್ಲಿದೆ. ಈ ಹನಿ ಟ್ರ್ಯಾಪ್ ರಾಕೆಟ್ ನಲ್ಲಿ ಇನ್ನೂ ಹೆಚ್ಚಿನ ಮಂದಿ ಭಾಗಿಯಾಗಿರುವ ಬಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆಗೆ ಸುಳಿವು ಸಿಕ್ಕಿದೆ.

Sailors’ Honey trap: Indian Navy Bans, restricts 85 apps including Facebook, Twitter

ಇದಾದ ಬಳಿಕ ಈ ಬಗ್ಗೆ ಕ್ರಮ ಜರುಗಿಸಿರುವ ನೌಕಾಪಡೆ, ಫೇಸ್ಬುಕ್, ಟ್ವಿಟ್ಟರ್, ಟಿಕ್ ಟಾಕ್, ಲಿಂಕ್ಡಿನ್, ಯೂಟ್ಯೂಬ್, ಟೆಲಿ ಗ್ರಾಮ್, ಸಿಗ್ನಲ್, ವಿಚಾಟ್, ಟಂಬ್ಲರ್, ರೆಡಿಟ್, ಟ್ರೂ ಕಾಲರ್, ವೈಬರ್, ಪಬ್ಜಿ ಸೇರಿದಂತೆ 85ಕ್ಕೂ ಅಧಿಕ ಅಪ್ಲಿಕೇಷನ್ ಬಳಕೆ ನಿರ್ಬಂಧ/ನಿಷೇಧ ಹೇರಿದೆ.

ನಾವಿಕರ Honey trap ಕೇಸ್ನಾವಿಕರ Honey trap ಕೇಸ್

ಸಾಮಾಜಿಕ ಜಾಲ ತಾಣ ಕುರಿತಂತೆ ಕಳೆದ ತಿಂಗಳು ನೌಕಾಪಡೆ ಹೊರಡಿಸಿದ್ದ ಮಾರ್ಗದರ್ಶಿ ಸೂಚನೆಗಳ ಮುಂದುವರೆದ ಭಾಗ ಇದಾಗಿದೆ. ಯುದ್ಧ ನೌಕೆ, ನೌಕಾಪಡೆ ಆವರಣದಲ್ಲಿ ಸ್ಮಾರ್ಟ್ ಫೋನ್, ಸ್ಮಾರ್ಟ್ ವಾಚ್ ಬಳಕೆ ಸಂಪೂರ್ಣ ನಿಷೇಧಿಸಲಾಗಿದೆ.

ಮೇಸೇಜಿಂಗ್, ಚಾಟಿಂಗ್, ವಿಡಿಯೋ ಶೇರಿಂಗ್, ಇ ಕಾಮರ್ಸ್ ತಾಣಗಳ ಬಳಕೆ ನಿಷೇಧವಾಗಿದೆ. ಆದರೆ, ವಾಟ್ಸಾಪ್, ಟ್ವಿಟ್ಟರ್, ಟೆಲಿಗ್ರಾಮ್, ಯೂಟ್ಯೂಬ್, ಸ್ಕೈಪ್, ಕೋರಾ, ಲಿಂಕ್ಡಿನ್ ನಿರ್ಬಂಧಿತ ಬಳಕೆಗೆ ಲಭ್ಯವಿರಲಿದೆ.

ವಿಶಾಖಪಟ್ಟಣಂನ ಈಸ್ಟರ್ನ್ ನೇವಲ್ ಕಮಾಂಡ್ ಹಾಗೂ ಮುಂಬೈನ ವೆಸ್ಟರ್ನ್ ಕಮಾಂಡ್​ನ ಹಡಗುಗಳು ಅಥವಾ ಜಲಾಂತರ್ಗಾಮಿ ನೌಕೆಗಳ ಸಿಬ್ಬಂದಿ ಮಾಹಿತಿಯನ್ನು ಹಂಚಿಕೊಂಡಿರುವ ಬಗ್ಗೆ ಎನ್ಐಎ ವಿಚಾರಣೆ ನಡೆಸಲಾಗುತ್ತಿದೆ. ಭಾರತೀಯ ನೌಕಾಪಡೆಗೆ ಇತ್ತೀಚೆಗೆ ಸೇರ್ಪಡೆಗೊಂಡ ಸಿಬ್ಬಂದಿಯನ್ನು ಗುರಿಯನ್ನಾಗಿಸಿಕೊಂಡು ಮಾಹಿತಿ ಕದಿಯಲು ಯತ್ನಿಸುತ್ತಿರುವ ಪಾಕಿಸ್ತಾನಿ ಬಗ್ಗೆ ತನಿಖೆ ಮುಂದುವರೆದಿದೆ.

English summary
Sailors’ Honey trap: The 85 apps banned/restricted for Indian Navy personnel include Facebook, Instagram, WeChat, Viber, Tumblr, Reddit and Truecaller.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X