ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿ.ಎನ್. ರಾಮಚಂದ್ರನ್ ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

By Mahesh
|
Google Oneindia Kannada News

ನವದೆಹಲಿ, ಡಿ.18: 2013ನೇ ಸಾಲಿನ ಪ್ರತಿಷ್ಠಿತ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಘೋಷಣೆಯಾಗಿದೆ. ಕನ್ನಡದ ಹಿರಿಯ ವಿಮರ್ಶಕ, ಸಂಸ್ಕೃತಿ ಚಿಂತಕರೂ ಆಗಿರುವ ಸಿ.ಎನ್. ರಾಮಚಂದ್ರನ್ ಅವರು ಸೇರಿದಂತೆ ಸಾಹಿತ್ಯ ಕ್ಷೇತ್ರದ 22 ಸಾಧಕರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಕೊಂಕಣಿ ಸಾಹಿತಿ ತುಕಾರಾಂ ರಾಮಾ ಶೇಟ್ ಅವರಿಗೂ ಈ ಸಾಲಿನ ಅಕಾಡೆಮಿ ಗೌರವ ಲಭಿಸಿದೆ.

ಒಟ್ಟಾರೆ, ಪ್ರಸಕ್ತ ಸಾಲಿನಲ್ಲಿ 8 ಕವನ ಸಂಕಲನ, 4 ಪ್ರಬಂಧ, ಮೂರು ಕಾದಂಬರಿ, ತಲಾ 2 ಸಣ್ಣ ಕತೆ ಮತ್ತು ಪ್ರವಾಸ ಕಥನ, ಒಂದು ಆತ್ಮಕಥನ, ಜೀವನ ಚರಿತ್ರೆ ಮತ್ತು ನಾಟಕಕ್ಕೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ.

ಡಾ. ಸಾಹಿತ್ಯ ಅಕಾಡೆಮಿ ಅಧ್ಯಕ್ಷ ವಿಶ್ವನಾಥ್ ಪ್ರಸಾದ್ ತಿವಾರಿ ನೇತೃತ್ವದಲ್ಲಿ ಸುಮಾರು 22 ಭಾರತೀಯ ಭಾಷೆಗಳನ್ನು ಪ್ರತಿನಿಧಿಸುವ ಜ್ಯೂರಿ ಸದಸ್ಯರು ಪ್ರಶಸ್ತಿ ಪಡೆದವರನ್ನು ಆಯ್ಕೆ ಮಾಡಿದ್ದಾರೆ. ಕನ್ನಡದಿಂದ ಡಾ. ಕೆ ಚಿನ್ನಪ್ಪ ಗೌಡ, ಡಾ. ಎಚ್ ಸಿ ಬೋರಲಿಂಗಯ್ಯ, ಟಿ.ಪಿ ಅಶೋಕ ಅವರು ಜ್ಯೂರಿ ಸದಸ್ಯರಾಗಿದ್ದರು. ಗುಜರಾತಿ ಹಾಗೂ ಅಸ್ಸಾಮಿ ವಿಭಾಗದ ಪ್ರಶಸ್ತಿಗಳನ್ನು ನಂತರ ಪ್ರಕಟಿಸಲಾಗುತ್ತದೆ.

ಸಾಹಿತ್ಯ ಅಕಾಡೆಮಿ ಪ್ರಶಸ್ತಿಯು 1,00,000 ನಗದು ಬಹುಮಾನದ ಚೆಕ್, ಪ್ರಶಸ್ತಿ ಫಲಕ ಒಳಗೊಂಡಿದೆ. ಪ್ರಶಸ್ತಿ ಪ್ರದಾನ ಸಮಾರಂಭ ಮಾರ್ಚ್ 11, 2014ರಂದು ನಡೆಯಲಿದೆ ಎಂದು ಸಾಹಿತ್ಯ ಅಕಾಡೆಮಿ ಪ್ರಕಟಿಸಿದೆ. ಪ್ರಶಸ್ತಿ ಪಡೆದವರ ಹೆಸರು, ಕೃತಿ ಮತ್ತು ಭಾಷೆ ಈ ಕೆಳಗಿನಂತಿದೆ:

Sahitya Akademi Award CN Ramachandran Akyana-Vyakyana Kannada

ಕವಿತಾ ವಿಭಾಗ
* ಸುಭೋದ್ ಸರ್ಕಾರ್ -ಧ್ವೈಪಾಯನ್ ಹ್ರಾದೇರ್ ಧಾರೇ( ಬಂಗಾಳಿ),
* ಅನಿಲ್ ಬೋರೋ - ದೆಲ್ಫಿನಿ ಒಂಥಾಯ್ ಮಾದ್ವೈ ಆರೋ ಗುಬಾನ್ ಗುಬಾನ್ ಕೊಂತಾಯಿ (ಬೋಡೋ)
* ಸೀತಾರಾಂ ಸಪೊಲಿಯಾ- ದೋಹಾ ಸಾತ್ ಸಾಯಿ(ಡೋಗ್ರಿ),
* ಅಂಬಿಕಾ ದತ್ - ಅಂತ್ ಹೋಯಿ ನಹೀ ದಿನ್ ಹಾಲ್(ರಾಜಸ್ತಾನಿ)
* ರಾಧಾಕಾಂತ್ ಠಾಕೂರ್ - ಚಲದೂರವಾಣಿ(ಸಂಸ್ಕೃತ)
* ಅರ್ಜುನ್ ಚರಣ್ ಹೆಂಬ್ರಂ -ಚಂದ ಬೋಂಗಾ(ಸಂತಾಲಿ )
* ನಾಮ್‌ದೇವ್ ತಾರಾಚಂದಾನಿ - ಮನ್ಶ್-ನಗರಿ(ಸಿಂಧಿ)
* ಜಾವೇದ್ ಅಖ್ತರ್ -ಲಾವಾ(ಉರ್ದು)

ಕಾದಂಬರಿ ವಿಭಾಗ
* ಮೃದುಲಾ ಗಾರ್ಗ್- ಮಿಲ್‌ಜುಲ್ ಮನ್ (ಹಿಂದಿ)
* ಮನ್ ಮೋಹನ್ -ನಿರ್ವಾಣ್(ಪಂಜಾಬಿ)
* ಆರ್.ಎನ್, ಜೋ ಡಿ ಕ್ರೂಜ್- ಕೋರ್‌ಕೈ(ತಮಿಳು)

ಪ್ರಬಂಧ, ವಿಮರ್ಶೆ
* ಸಿ.ಎನ್ ರಾಮಚಂದ್ರನ್- ಆಖ್ಯಾನ -ವ್ಯಾಖ್ಯಾನ (ಕನ್ನಡ),
* ತುಕಾರಾಂ ರಾಮಾ ಶೇಟ್ -ಮನ್ ಮೋತಯಂ (ಕೊಂಕಣಿ),
* ಸತೀಶ್ ಕಲಾಸೇಖರ್- ವಚನಾರ್ಯಾಚಿ ರಾಜೋನಿಶಿ( ಮರಾಠಿ)
* ಕಾತ್ಯಾಯಿನಿ ವಿದ್ಮಹೆ - ಸಾಹಿತ್ಯಾಕಾಶ್ಮೊಲೋ ಸಂಗಂ(ತೆಲುಗು)

ಆತ್ಮ ಕಥನ
* ಎಂ.ಎನ್ ಪಾಲೂರ್ -'ಕಥೆಯಿಲ್ಲಾದವಂಡೆ ಕಥಾ' (ಮಲಯಾಳಂ)

ಜೀವನ ಚರಿತ್ರೆ
* ಸುರೇಶ್ವರ್ ಜಾ - ಸಂಗ್ ಹರ್ಷ್ ಆ ಸೆಹಂತಾ (ಮೈಥಿಲಿ)

ನಾಟಕ
* ಬಿಜೋಯ್ ಮಿಶ್ರಾ - ಬಾನಪ್ರಸ್ಥಾ(ಒಡಿಯಾ)

ಸಣ್ಣ ಕತೆ
* ತೆಮ್ ಸುಲಾ ಓ - ಲಾಬರ್ ನಂ ಫಾರ್ ಮೈ ಹೆಡ್(ಇಂಗ್ಲಿಷ್)
* ಮೋಹಿ ಉದ್ ದಿನ್ ರೇಶಿ - ಆಯಿನಾ ಅತಾಶ್(ಕಶ್ಮೀರಿ)

ಪ್ರವಾಸ ಕಥನ
* ಮಕೋನ್ಮನಿ ಮೋಂಗ್ ಸಭಾ - ಚಿಂಗ್ ಲಾಂಗ್ ಅಮಾದಗಿ ಅಮಾದಾ (ಮಣಿಪುರಿ)
* ಮನ್ ಬಹಾದೂರ್ ಪ್ರದಾನ್ - ಮಂಕಾ ಲಹರ್ ರಾ ರಹಾರ್ ಹಾರು (ನೇಪಾಳಿ)

English summary
Kannada writer CN Ramachandran bags Akademi award for his essay Akyana-Vyakyana. Over all Eight books of poetry, four of essays, three of novels, two each of short stories and travelogues, one each of autobiography, memoirs and play have won the Sahitya Akademi Award this year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X