ಅಕ್ಟೋಬರ್ 10, 11ರಂದು ಸಹಾರಾ ಸಂಸ್ಥೆಯ ಆ್ಯಂಬೆ ವ್ಯಾಲಿ ಹರಾಜು

Posted By:
Subscribe to Oneindia Kannada

ಮುಂಬೈ, ಸೆಪ್ಟೆಂಬರ್ 11: ವಾಣಿಜ್ಯ ನಗರಿಯ ಬಳಿಯಿರುವ, ಸಹಾರಾ ಸಂಸ್ಥೆಯ ಒಡೆತನದಲ್ಲಿರುವ ಆ್ಯಂಬೆ ವ್ಯಾಲಿ ಐಶಾರಾಮಿ ಟೌನ್ ಶಿಪ್ ಹರಾಜು ಪ್ರಕ್ರಿಯೆಯನ್ನು ಅಕ್ಟೋಬರ್ 10 ಹಾಗೂ 11ರಂದು ನಡೆಸಬೇಕೆಂದು ಸುಪ್ರೀಂ ಕೋರ್ಟ್ ಸೋಮವಾರ (ಸೆ. 8) ಆದೇಶಿಸಿದೆ.

ಷೇರುದಾರರಿಗೆ ಸಾವಿರಾರು ಕೋಟಿ ರು. ಮೊತ್ತದ ಹಣವನ್ನು ಆ್ಯಂಬೆ ವ್ಯಾಲಿಯ ನಿರ್ಮಾತೃ ಸಂಸ್ಥೆಯಾದ ಸಹಾರಾದ ಮಾಲೀಕ ಸುಬ್ರತೋ ರಾಯ್ ಪಾವತಿಸಬೇಕಿರುವ ಹಿನ್ನೆಲೆಯಲ್ಲಿ, ಆ್ಯಂಬೆ ವ್ಯಾಲಿಯನ್ನು ಹರಾಜು ಹಾಕುವ ಪ್ರಸ್ತಾವನೆ ಸುಪ್ರೀಂ ಕೋರ್ಟ್ ಮುಂದೆ ಬಂದಿತ್ತು.

Sahara's Aamby Valley Set To Go On Auction In October, Says Supreme Court

ಆಗಲೇ ಅದು ಮುಂಬೈ ಹೈಕೋರ್ಟ್ ನ ಅಧಿಕೃತ ಲಿಕ್ವಿಡೇಟರ್ ಒಬ್ಬರಿಗೆ ಆ್ಯಂಬೆ ವ್ಯಾಲಿಯ ಮೌಲ್ಯವನ್ನು ಲೆಕ್ಕಹಾಕಲು ಸೂಚಿಸಿತ್ತು. ಅದರಂತೆ, ಮುಂಬೈ ಹೈಕೋರ್ಟ್ ನ ಲಿಕ್ವಿಡೇಟರ್ ಅವರು ಅದರ ಮಾರುಕಟ್ಟೆ ಬೆಲೆಯು 37,390 ಕೋಟಿ ರು. ಎಂದು ತಿಳಿಸಿದ್ದಲ್ಲದೆ, 43 ಸಾವಿರ ಕೋಟಿ ರು. ಮೊತ್ತವನ್ನು ಹರಾಜು ಮೌಲ್ಯವಾಗಿ ನಿಗದಿಗೊಳಿಸುವಂತೆ ಸೂಚಿಸಿದ್ದರು.

ಆದರೆ, ಆಗ ಸುಬ್ರತೋ ರಾಯ್ ಅವರ ವಕೀಲರ ಮನವಿಯಂತೆ ಹರಾಜನ್ನು ಮುಂದೂಡಲಾಗಿತ್ತು. ಇದೀಗ ಮತ್ತು ಅದಕ್ಕೆ ಕಾಲ ಕೂಡಿಬಂದಿದ್ದು, ಆ್ಯಂಬೆ ವ್ಯಾಲಿಯನ್ನು ಹರಾಜು ಮೂಲಕ ಮಾರಾಟ ಮಾಡುವಂತೆ ಸುಪ್ರೀಂ ಕೋರ್ಟ್ ಸೂಚಿಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Supreme Court on September 11, ordered the physical auction to take place on 10 and 11 October at Mumbai.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ