ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಧ್ವಿ ಪ್ರಾಚಿ ವಿಎಚ್ ಪಿ ನಾಯಕಿ ಅಲ್ಲವಂತೆ!

By Mahesh
|
Google Oneindia Kannada News

ನವದೆಹಲಿ, ಮಾ.02: ವಿವಾದಿತ ಹೇಳಿಕೆಗಳನ್ನು ನೀಡುವ ಮೂಲಕ ಎಲ್ಲರ ಗಮನ ಸೆಳೆಯುವ ಸಾಧ್ವಿ ಪ್ರಾಚಿ ಅವರಿಗೆ ಮಂಗಳವಾರ (ಮಾರ್ಚ್ 01) ಆಘಾತಕಾರಿ ಸುದ್ದಿ ಸಿಕ್ಕಿದೆ. ವಿಶ್ವ ಹಿಂದೂ ಪರಿಷತ್ (ವಿಎಚ್ ಪಿ) ನ ವಕ್ತಾರರು ನೀಡಿರುವ ಪ್ರಕಟಣೆಯಂತೆ ಸಾಧ್ವಿ ಪ್ರಾಚಿ ವಿಎಚ್ಪಿ ನಾಯಕಿ ಅಲ್ಲವಂತೆ.

'ಸಾಧ್ವಿ ಪ್ರಾಚಿ ಅವರು ವಿಶ್ವ ಹಿಂದೂ ಪರಿಷತ್ ನ ನಾಯಕಿಯೂ ಅಲ್ಲ ವಕ್ತಾರೆಯೂ ಅಲ್ಲ, ಯಾವುದೇ ಕಚೇರಿಯ ಪದಾಧಿಕಾರಿಯೂ ಅಲ್ಲ' ಎಂದು ವಿಎಚ್ಪಿಯ ಜಂಟಿ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಜೈನ್ ಅವರು ಪ್ರಕಟಣೆ ಹೊರಡಿಸಿದ್ದಾರೆ.[ಹಿಂದೂ ಕುಟುಂಬಕ್ಕೆ ಫ್ಯಾಮಿಲಿ ಪ್ಲ್ಯಾನಿಂಗ್ ಬೇಡ: ಸಾಧ್ವಿ]

Sadhvi Prachi

ಸಾಧ್ವಿ ಅವರು ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ, ಪಕ್ಷವೊಂದರ ಸಿದ್ಧಾಂತಕ್ಕೆ ಬದ್ಧರಾಗಿ ಚುನಾವಣೆ ಎದುರಿಸಿದ್ದಾರೆ. ಹೀಗಾಗಿ ಅವರು ವಿಎಚ್ಪಿಯ ನಿಷ್ಠಾವಂತ ಕಾರ್ಯಕರ್ತೆ ಆಗಿರಲು ಸಾಧ್ಯವಿಲ್ಲ ಎಂದಿದ್ದಾರೆ.

ಅಸಹಿಷ್ಣುತೆ ವಿರುದ್ಧ ಹೇಳಿಕೆ ನೀಡಿದ ನಟ ಶಾರೂಖ್ ಖಾನ್‌, ಅಮೀರ್‌ ಖಾನ್‌ ಮತ್ತು ಉತ್ತರ ಪ್ರದೇಶ ಸಚಿವ ಅಜಂ ಖಾನ್‌ ವಿರುದ್ಧ ವಿಶ್ವ ಹಿಂದೂ ಪರಿಷತ್‌ ನಾಯಕಿ ಸಾಧ್ವಿ ಪ್ರಾಚಿ ಕಿಡಿಕಾರಿದ್ದರು. ಕಾಂಗ್ರೆಸ್ ನಾಯಕರಾದ ದಿಗ್ವಿಜಯ್ ಸಿಂಗ್, ರಾಹುಲ್ ಗಾಂಧಿ ಅಲ್ಲದೆ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ವಿರುದ್ಧ ಕೂಡಾ ಕೆಂಡಕಾರಿದ್ದರು.

ಹಿಂದೂ ಮಹಿಳೆಯರು ಕನಿಷ್ಠ 4 ಮಕ್ಕಳಿಗೆ ಜನ್ಮ ನೀಡಬೇಕು ಎಂದು ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಕರೆ ನೀಡಿ ಶೋಕಾಸ್ ನೋಟಿಸ್ ಪಡೆದುಕೊಂಡಿದ್ದಾರೆ. ಅದರೆ, ಸಾಕ್ಷಿ ಮಹಾರಾಜ್ ಹೇಳಿಕೆಯನ್ನು ಸಾಧ್ವಿ ಪ್ರಾಚಿ ಸಮರ್ಥಿಸಿಕೊಂಡಿದ್ದರು.

ಯಾರು ಗೋಹತ್ಯೆ ಮಾಡುತ್ತಾರೋ, ಅದನ್ನು ಬೆಂಬಲಿಸುತ್ತಾರೋ, ವಂದೇ ಮಾತರಂ, ಭೋಲೋ ಭಾರತ್ ಮಾತಾ ಕೀ ಜೈ ಎಂದು ಹೇಳುವುದಿಲ್ಲವೋ, ಅವರು ಈ ದೇಶದಲ್ಲಿ ಇರಲು ಲಾಯಕಿಲ್ಲ ಎಂದು ಸಾಧ್ವಿ ಪ್ರಾಚಿ ಹಿಂದೊಮ್ಮೆ ಅಬ್ಬರಿಸಿದ್ದರು.(ಐಎಎನ್ಎಸ್)

English summary
The Vishwa Hindu Parishad joint general secretary Surendra Jain on Tuesday, March 1, said that Sadhvi Prachi, who is described as a leader of the outfit, is neither a leader, nor a spokesperson or any office bearer.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X