• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸುಂಕ ಇಳಿಕೆ ಬಳಿಕ ರೆಮ್‌ಡೆಸಿವಿರ್ ಇಂಜಕ್ಷನ್ ಲಭ್ಯತೆ ಹೆಚ್ಚಳ: ಡಿವಿಎಸ್

|

ನವದೆಹಲಿ, ಏಪ್ರಿಲ್ 21: ರೆಮ್‌ಡೆಸಿವಿರ್ ಲಸಿಕೆ ಹಾಗೂ ಅದರ ಕಚ್ಚಾವಸ್ತುಗಳ ಮೇಲಿನ ಆಮದು ಸುಂಕವನ್ನು ರದ್ದುಗೊಳಿಸಿರುವ ಬಗ್ಗೆ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ ಸದಾನಂದ ಗೌಡ ಅವರು ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ.

ಫಾರ್ಮಸುಟಿಕಲ್ಸ್ ಇಲಾಖೆಯ ಶಿಫಾರಸ್ಸಿನ ಮೇರೆಗೆ ತಕ್ಷಣದ ಅಗತ್ಯವನ್ನು ಪರಿಗಣಿಸಿ ಕಂದಾಯ ಇಲಾಖೆ ರೆಮ್ ಡೆಸಿವಿರ್ ಮತ್ತು ಅದರ ಎಪಿಐ/ ಕೆಎಸ್ ಎಂ ಮೇಲಿನ ಸೀಮಾ ಸುಂಕವನ್ನು ಮನ್ನಾ ಮಾಡಿದೆ ಎಂದು ಹೇಳಿದ್ದಾರೆ. ಈ ಕ್ರಮ ದೇಶಿಯವಾಗಿ ರೆಮ್‌ಡೆಸಿವಿರ್ ಇಂಜಕ್ಷನ್ ಲಭ್ಯತೆ ಮತ್ತಷ್ಟು ಹೆಚ್ಚಿಸಲಿದೆ ಎಂದು ಸದಾನಂದ ಗೌಡ ಹೇಳಿದ್ದಾರೆ.

ಕೊವಿಡ್ 19 ಎರಡನೇ ಅಲೆಯಿಂದಾಗಿ ಸೋಂಕು ಹೆಚ್ಚಳವಾಗುತ್ತಿದ್ದು, ರೆಮ್‌ಡೆಸಿವಿರ್ ಇಂಜಕ್ಷನ್ ಬೇಡಿಕೆ ಈ ಹಿಂದೆಗಿಂತಲೂ ಹೆಚ್ಚಾಗಿದೆ. ಹೀಗಾಗಿ, ರೆಮ್‌ಡೆಸಿವಿರ್ ಪೂರೈಕೆ ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರ ಈ ಕ್ರಮ ಕೈಗೊಂಡಿದೆ.

ವೈದ್ಯಕೀಯ ಆಮ್ಲಜನಕ ಅಗತ್ಯವೂ ಇರುವಂಥ ಸಂದರ್ಭಗಳಲ್ಲಿ ರೆಮ್ಡೆಸಿವಿರ್ ಬಳಸಬೇಕೆಂದು ವೈದ್ಯಕೀಯ ಮಾರ್ಗದರ್ಶನ ಇದೆ. ಹೀಗಾಗಿ ವಿವಿಧ ರಾಜ್ಯಗಳಿಗೆ ಮಾಡಲಾದ ಆಮ್ಲಜನಕ ಹಂಚಿಕೆಯನ್ನು ಆಧರಿಸಿ ರೆಮ್‌ಡೆಸಿವಿರ್ ಪೂರೈಸಲಾಗುವುದು' ಎಂದು ಆರೋಗ್ಯ ಸಚಿವ ಡಾ. ಹರ್ಷ್ ವರ್ಧನ್ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

English summary
Union Minister for Chemical and Fertilizers D. V. Sadanand Gowda on the recommendation of the Department of Pharmaceuticals, the Department of Revenue has waived customs duty on Remdesivir and its API/KSM.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X