ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ಸಿಂಗಲ್ ಡೋಸ್ ಸ್ಪುಟ್ನಿಕ್ ಕೊರೊನಾ ಲಸಿಕೆಯಿಂದ ಮೂಡಿದೆ ಹೊಸ ಭರವಸೆ

|
Google Oneindia Kannada News

ನವದೆಹಲಿ, ಜೂನ್ 02: ರಷ್ಯಾದ ಸಿಂಗಲ್ ಡೋಸ್ ಸ್ಟುಟ್ನಿಕ್ ಕೊರೊನಾ ಲಸಿಕೆ ಬಗ್ಗೆ ಭಾರತದಲ್ಲಿ ಹೊಸ ಭರವಸೆ ಮೂಡಿದೆ. ಒಂದೊಮ್ಮೆ ದೇಶಕ್ಕೆ ಸಿಂಗಲ್ ಡೋಸ್ ಸ್ಪುಟ್ನಿಕ್ ಬಂದರೆ ಪ್ರತಿಯೊಬ್ಬರಿಗೂ ಬೇಗ ಲಸಿಕೆ ದೊರೆಯಲಿದೆ ಎನ್ನುವುದು ಖುಷಿಯ ಸಂಗತಿಯಾಗಿದೆ.

Recommended Video

ಭಾರತೀಯರಿಗೆ ಹೊಸ ಭರವಸೆ ಮೂಡಿಸಿದ ರಷ್ಯಾ ಲಸಿಕೆ | Sputnik light | Oneindia Kannada

ದೇಶದಲ್ಲಿ ಶೀಘ್ರದಲ್ಲೇ ಸಿಂಗಲ್ ಡೋಸ್ ಕೋವಿಡ್-19 ಲಸಿಕೆ ಸ್ಪುಟ್ನಿಕ್ ಲೈಟ್ ಚಾಲನೆಗೊಳ್ಳುವ ನಿರೀಕ್ಷೆಯಲ್ಲಿ ಸರ್ಕಾರವಿದೆ. ದೇಶದಲ್ಲಿ ಲಸಿಕಾಕರಣವನ್ನು ಹೆಚ್ಚಿಸಲು ತ್ವರಿತಗತಿಯಲ್ಲಿ ಆಪ್ಲಿಕೇಷನ್ ಮತ್ತು ನಿಯಂತ್ರಕ ಅನುಮೋದನೆ ಕಾರ್ಯವಿಧಾನಕ್ಕಾಗಿ ರಷ್ಯಾದ ಉತ್ಪಾದಕರು ಸೇರಿದಂತೆ ಎಲ್ಲಾ ಪಾಲುದಾರರು ಮತ್ತು ಅದರ ಭಾರತೀಯ ಪಾಲುದಾರಿಗೆ ನಿರ್ದೇಶನ ನೀಡಲಾಗಿದೆ ಎಂದು ಮೂಲಗಳು ಗುರುವಾರ ತಿಳಿಸಿವೆ.

ಮುಂದಿನ ಎರಡು ವಾರಗಳಲ್ಲಿ ಸ್ಪುಟ್ನಿಕ್ ಲೈಟ್‌ಗಾಗಿ ನಿಯಂತ್ರಕ ಅನುಮೋದನೆ ಕೋರಿ ಅರ್ಜಿ ಸಲ್ಲಿಸುವ ನಿರೀಕ್ಷೆಯಿದೆ ಮತ್ತು ಇದು ದೇಶದಲ್ಲಿ ಚಾಲನೆಯಾಗುವ ಸಿಂಗಲ್ ಡೋಸ್‌ನ ಮೊದಲ ಲಸಿಕೆಯಾಗಬಹುದು ಎಂದು ಇತ್ತೀಚಿಗೆ ಕೋವಿಡ್-19 ಲಸಿಕೆ ಲಭ್ಯ ಹೆಚ್ಚಿಸಲು ಉನ್ನತ ಅಧಿಕಾರಿಗಳ ನಡುವೆ ನಡೆದ ಚರ್ಚೆಯನ್ನು ಉಲ್ಲೇಖಿಸಿ ಮೂಲಗಳು ಹೇಳಿವೆ.

Russias Single-Dose Sputnik Light Can Be New Hope To Fasten Covid Vaccination Drive In India

ಕಳೆದ ವಾರ ಸಂಪುಟ ಕಾರ್ಯದರ್ಶಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸ್ಪುಟ್ನಿಕ್ ಲೈಟ್ ನಿಯಂತ್ರಕ ಅನುಮೋದನೆಗಾಗಿ ಕೂಡಲೇ ಬಯೋ ಟೆಕ್ನಾಲಜಿ ಇಲಾಖೆ ಕಾರ್ಯದರ್ಶಿ,ಡಿಸಿಜಿಐ, ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪ್ರತಿನಿಧಿಗಳು, ಕೇಂದ್ರ ಆರೋಗ್ಯ ಸಚಿವಾಲಯದ ಅಧಿಕಾರಿಗಳು, ಆರ್ ಡಿಐಎಫ್, ಮತ್ತು ದೇಶಿಯ ಉತ್ಪಾದಕರು ಒಳಗೊಂಡಂತೆ ಎಲ್ಲಾ ಸಂಬಂಧಿತ ಪಾಲುದಾರರ ಸಭೆಯನ್ನು ನಡೆಸುವಂತೆ ಸಲಹೆ ನೀಡಲಾಗಿದೆ.

ರಷ್ಯಾ ಈಗಾಗಲೇ ಸ್ಪುಟ್ನಿಕ್ ಲೈಟ್ ಬಗ್ಗೆ ಅನುಮೋದನೆ ನೀಡಿದ್ದು, ಇತರ ರಾಷ್ಟ್ರಗಳಲ್ಲಿ ಪ್ರಯೋಗ ನಡೆಯುತ್ತಿರುವುದರ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಗಿದೆ.ಇನ್ನೂ ಎರಡ್ಮೂರು ವಾರಗಳಲ್ಲಿ ಸ್ಪುಟ್ನಿಕ್ ಲೈಟ್ ನಿಯಂತ್ರಕ ಅನುಮೋದನೆಗಾಗಿ ಅರ್ಜಿ ಸಲ್ಲಿಸುವುದಾಗಿ ಡಿಸಿಜಿಐ ಮಾಹಿತಿ ನೀಡಿದೆ.

ಸಿಂಗಲ್​ ಡೋಸ್​ ಕೊರೊನಾ ಲಸಿಕೆ ಸ್ಪುಟ್ನಿಕ್ ಲೈಟ್‌ ಅನ್ನು ಶೀಘ್ರದಲ್ಲೇ ಭಾರತದಲ್ಲಿ ಪರಿಚಯಿಸುವ ಯೋಜನೆಯಿದೆ ಎಂದು ಹೇಳಲಾಗಿದೆ.

ಸ್ಪುಟ್ನಿಕ್ ವಿ ರಷ್ಯನ್-ಭಾರತೀಯ ಲಸಿಕೆ. ಭಾರತದಲ್ಲಿ ಇದರ ಉತ್ಪಾದನೆಯನ್ನು ಕ್ರಮೇಣ ವರ್ಷಕ್ಕೆ 850 ಮಿಲಿಯನ್ ಡೋಸ್‌ಗಳವರೆಗೆ ಹೆಚ್ಚಿಸಲಾಗುವುದು ಎಂದು ನಾವು ನಿರೀಕ್ಷಿಸುತ್ತೇವೆ. ಸಿಂಗಲ್​ ಡೋಸ್​ ಕೊರೊನಾ ಲಸಿಕೆ ಸ್ಪುಟ್ನಿಕ್ ಲೈಟ್‌ ಶೀಘ್ರದಲ್ಲೇ ಭಾರತಕ್ಕೆ ಬರಲಿದೆ.

ಸ್ಪುಟ್ನಿಕ್ ವಿ ಯ ಪರಿಣಾಮಕಾರಿತ್ವವು ಪ್ರಪಂಚದಲ್ಲಿ ಚಿರಪರಿಚಿತವಾಗಿದೆ. ರಷ್ಯಾದಲ್ಲಿ, 2020 ರ ದ್ವಿತೀಯಾರ್ಧದಿಂದ ನಾಗರಿಕರಿಗೆ ಲಸಿಕೆ ನೀಡಲು ಇದನ್ನು ಯಶಸ್ವಿಯಾಗಿ ಬಳಸಲಾಗುತ್ತಿದೆ. ಹೊಸ ಕೊರೊನಾ ತಳಿಗಳ ವಿರುದ್ಧವೂ ಇದು ಪರಿಣಾಮಕಾರಿ ಎಂದು ರಷ್ಯಾದ ತಜ್ಞರು ಘೋಷಿಸಿದ್ದಾರೆ ಎಂದು ಹೇಳಲಾಗಿದೆ.

English summary
There is a possibility of a speedy launch of single-dose Covid-19 vaccine Sputnik Light in India, and an application seeking regulatory approval for the jab is expected to be filed soon, the sources said on Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X