ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕಿಸ್ತಾನ, ಚೀನಾ ಗಡಿಯಲ್ಲಿ ಭಾರತದ S-400 ಕ್ಷಿಪಣಿ ನಿಯೋಜನೆ

|
Google Oneindia Kannada News

ನವದೆಹಲಿ ಮೇ 18: ಭಾರತವು ರಷ್ಯಾದ ಎಸ್ -400 ಕ್ಷಿಪಣಿಯನ್ನು ಪಾಕಿಸ್ತಾ, ಚೀನಾ ಗಡಿಯಲ್ಲಿ ನಿಯೋಜಿಸಲಿದೆ. ಅಮೆರಿಕದ ರಕ್ಷಣಾ ಇಂಟೆಲಿಜೆನ್ಸ್ ಹೇಳಿದೆ. ರಷ್ಯಾ ಕಳೆದ ವರ್ಷದ ಡಿಸೆಂಬರ್‌ನಿಂದ ಭಾರತಕ್ಕೆ ಎಸ್-400 ಕ್ಷಿಪಣಿಗಳನ್ನು ನೀಡಲು ಆರಂಭಿಸಿದೆ ಎಂದು ಗುಪ್ತಚರ ಸಂಸ್ಥೆಯ ನಿರ್ದೇಶಕರು ಹೇಳಿದ್ದಾರೆ.

ಪಾಕಿಸ್ತಾನ ಮತ್ತು ಚೀನಾದ ಬೆದರಿಕೆಗಳಿಂದ ತನ್ನನ್ನು ರಕ್ಷಿಸಿಕೊಳ್ಳಲು ಭಾರತವು ಮುಂದಿನ ತಿಂಗಳೊಳಗೆ ರಷ್ಯಾದ ಎಸ್ -400 ಕ್ಷಿಪಣಿಯನ್ನು ನಿಯೋಜಿಸಲಿದೆ ಎಂದು ಪೆಂಟಗನ್‌ನ ಉನ್ನತ ಗುಪ್ತಚರ ಅಧಿಕಾರಿ ಹೇಳಿದ್ದಾರೆ.

ಕ್ಷಿಪಣಿ ಉಡಾವಣೆ: ಭಾರತ-ಪಾಕಿಸ್ತಾನ ಮಾತುಕತೆಗೆ ಚೀನಾ ಬ್ಯಾಟಿಂಗ್ ಕ್ಷಿಪಣಿ ಉಡಾವಣೆ: ಭಾರತ-ಪಾಕಿಸ್ತಾನ ಮಾತುಕತೆಗೆ ಚೀನಾ ಬ್ಯಾಟಿಂಗ್

ರಕ್ಷಣಾ ಗುಪ್ತಚರ ಸಂಸ್ಥೆ ನಿರ್ದೇಶಕ ಲೆಫ್ಟಿನೆಂಟ್ ಜನರಲ್ ಸ್ಕಾಟ್ ಬ್ಯಾರಿಯರ್ ಅಮೆರಿಕ ಸಂಸತ್ತಿಗೆ ಈ ಕುರಿತು ಮಾಹಿತಿ ನೀಡಿದ್ದರು. ಭಾರತ ಪಾಕಿಸ್ತಾನ ಮತ್ತು ಚೀನಾಗಡಿಯಲ್ಲಿ ಈ ಕ್ಷಿಪಣಿಗಳನ್ನು ನಿಯೋಜಿಸಲಿದೆ.

India to operate S 400 missile system to defend against Pak China: Pentagon

ಭಾರತೀಯ ಸೇನೆಯು ತನ್ನ ದೇಶದ ಗಡಿ ಭದ್ರತೆಯನ್ನು ಬಲಪಡಿಸಲು, ಸೈಬರ್ ಭದ್ರತೆಯನ್ನು ಹೆಚ್ಚಿಸಲು ಸುಧಾರಿತ ರಕ್ಷಣಾ ಮತ್ತು ಕಣ್ಗಾವಲು ವ್ಯವಸ್ಥೆಯನ್ನು ಖರೀದಿಸಲು ಪ್ರಯತ್ನಿಸಿದೆ ಎಂದು ಜನರಲ್ ಸ್ಕಾಟ್ ಬ್ಯಾರಿಯರ್ ಭೇಟಿ ನೀಡಿದ ಅಮೆರಿಕ ಸಂಸತ್ತಿಗೆ ತಿಳಿಸಿದ್ದರು.

ಡಿಸೆಂಬರ್ 2021ರಲ್ಲಿ ರಷ್ಯಾ ಭಾರತಕ್ಕೆ S-400 ವಾಯು ರಕ್ಷಣಾ ವ್ಯವಸ್ಥೆಯನ್ನು ಮೊದಲು ವಿತರಿಸಲಾಯಿತು. ಇದರೊಂದಿಗೆ ಜೂನ್ 2022ರ ವೇಳೆಗೆ ಎರಡೂ ಗಡಿಗಳಲ್ಲಿ ಇದನ್ನು ನಿಯೋಜಿಸಲು ಭಾರತ ಚಿಂತನೆ ನಡೆಸುತ್ತಿದೆ ಎಂದು ಹೇಳಿಕೊಂಡಿದೆ.

India to operate S 400 missile system to defend against Pak China: Pentagon

S-400 ಕ್ಷಿಪಣಿಯ ವೈಶಿಷ್ಟ್ಯಗಳು; S-400 ಕ್ಷಿಪಣಿಯ ವೈಶಿಷ್ಟ್ಯವೆಂದರೆ ಅದನ್ನು ರಸ್ತೆಯ ಮೂಲಕ ಎಲ್ಲಿ ಬೇಕಾದರೂ ಸಾಗಿಸಬಹುದು. ಇದು 92N6E ವೇಗದ ರಾಡಾರ್‌ ವ್ಯವಸ್ಥೆಯನ್ನು ಹೊಂದಿದ್ದು, ಸುಮಾರು 600 ಕಿ. ಮೀ. ದೂರದಿಂದ ಬಹು ಗುರಿಗಳನ್ನು ಸುಲಭವಾಗಿ ಪತ್ತೆ ಮಾಡುತ್ತದೆ.

ಅತ್ಯಾಧುನಿಕ ಶಸ್ತ್ರಾಸ್ತ್ರಗಳಲ್ಲಿಇದು ಒಂದಾಗಿದೆ. S-400 ಕ್ಷಿಪಣಿಯಿಂದ ಶತ್ರು ವಿಮಾನವನ್ನು ಆಕಾಶದಲ್ಲಿ ಹೊಡೆಯಬಹುದು. ಇದು ನಾಲ್ಕು ವಿಭಿನ್ನ ಕ್ಷಿಪಣಿಗಳನ್ನು ಹೊಂದಿದ್ದು ಅದು ನೆಲದಿಂದ 100 ಅಡಿ ಎತ್ತರದಲ್ಲಿ ಹಾರುವಾಗಲೂ ಬೆದರಿಕೆಯನ್ನು ಪತ್ತೆಹಚ್ಚುತ್ತದೆ ಮತ್ತು ನಾಶಪಡಿಸುತ್ತದೆ.

English summary
India intends to operate the S-400 missile defence system to defend itself against threat from Pakistan and China Pentagon spy master has told US lawmakers. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X