ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಷ್ಯಾ ರಾಯಭಾರಿ, ಸೊಗಸಾದ ಹಿಂದಿ ಮಾತುಗಾರ ಅಲೆಕ್ಸಾಂಡರ್ ಕದಾಕಿನ್ ನಿಧನ

|
Google Oneindia Kannada News

ನವದೆಹಲಿ, ಜನವರಿ 27: ರಷ್ಯಾ ರಾಯಭಾರಿ ಅಲೆಕ್ಸಾಂಡರ್ ಕದಾಕಿನ್ (67) ಅನಾರೋಗ್ಯದಿಂದ ನಿಧನರಾಗಿದ್ದಾರೆ. ತುಂಬ ಸೊಗಸಾಗಿ ಹಿಂದಿ ಮಾತನಾಡುತ್ತಿದ್ದ ಕದಾಕಿನ್ 2009ರಿಂದ ರಷ್ಯಾ ರಾಯಭಾರಿಯಾಗಿ ಭಾರತದಲ್ಲಿದ್ದರು. ಎರಡು ದೇಶಗಳ ಮಧ್ಯೆ ಉತ್ತಮ ಸಂಬಂಧ ವೃದ್ಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಭಾರತದಲ್ಲಿ ರಾಯಭಾರಿಯಾಗಿ ಇದು ಅವರ ಎರಡನೇ ಅವಧಿಯಾಗಿತ್ತು. ಈ ಹಿಂದೆ 1999ರಿಂದ 2004ರವರೆಗೆ ರಾಯಭಾರಿಯಾಗಿದ್ದರು. ಕದಾಕಿನ್ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ್ದು ಭಾರತದಲ್ಲೇ, 1972ರಲ್ಲಿ. ರಷ್ಯಾ ರಾಜತಾಂತ್ರಿಕ ಕಚೇರಿಯಲ್ಲಿ ಕಾರ್ಯದರ್ಶಿಯಾಗಿ. ತುಂಬ ಚೆನ್ನಾಗಿ ಹಿಂದಿ ಮಾತನಾಡುತ್ತಿದ್ದ ಅವರಿಗೆ ಭಾರತದ ಬಗ್ಗೆ ಅಪಾರ ಪ್ರೀತಿ ಇತ್ತು.

Russian ambassador to India Alexander Kadakin dies

1971ರಿಂದ ತಮ್ಮ ವೃತ್ತಿ ಜೀವನದುದ್ದಕ್ಕೂ ರಷ್ಯಾ-ಭಾರತದ ಮಧ್ಯದ ಸಂಬಂಧ ವೃದ್ಧಿಗಾಗಿ ಶ್ರಮಿಸಿದವರು ಅಲೆಕ್ಸಾಂಡರ್. ಅವರ ಸಾವಿಗೆ ಸಂತಾಪ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ಹೆಮ್ಮೆ ಪಡುವ ರಾಜತಾಂತ್ರಿಕ ನಿಪುಣ, ಹಿಂದಿ ಭಾಷೆ ಗೊತ್ತಿದ್ದ, ಭಾರತದೊಂದಿಗೆ ರಷ್ಯಾ ಬಾಂಧವ್ಯ ಗಟ್ಟಿಯಾಗಲು ಶ್ರಮಿಸಿದ್ದ ಅವರ ಸಾವಿಗೆ ಸಂತಾಪ ಎಂದು ಟ್ವಿಟ್ಟರ್ ನಲ್ಲಿ ತಿಳಿಸಿದ್ದಾರೆ.

1949 ಜುಲೈ 22ರಂದು ಯುಎಸ್ ಎಸ್ ಆರ್ ನ ಚಿಸ್ನೌನಲ್ಲಿ ಜನಿಸಿದ್ದ ಕದಾಕಿನ್, ಮಾಸ್ಕೋದ ಸ್ಟೇಟ್ ಇನ್ ಸ್ಟಿಟ್ಯೂಟ್ ಆಫ್ ಇಂಟರ್ ನ್ಯಾಷನಲ್ ರಿಲೇಷನ್ಸ್ ನಲ್ಲಿ 1972ರಲ್ಲಿ ಪದವಿ ಪಡೆದಿದ್ದರು.

English summary
Russian Ambassador Alexander Kadakin, a fluent Hindi-speaking career diplomat considered a great friend of India, passed away today at a hospital here after a brief illness.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X