ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಆಡಳಿತದಲ್ಲಿ ಗ್ರಾಮೀಣ ಪ್ರದೇಶಗಳ ನಿರುದ್ಯೋಗ ಪ್ರಮಾಣ ಇಳಿಕೆ

ಅಪನಗದೀಕರಣದ ನಡುವೆಯೂ ರಾಷ್ಟ್ರದ ಜಿಡಿಪಿ ಅಬಾಧಿತವಾಗಿದ್ದ ವಿಚಾರ ಫೆ. 28ರಂದು ಹೊರಬಿದ್ದಿತ್ತು. ಅದರ ಬೆನ್ನಲ್ಲೇ ಈಗ ನರೇಗಾ ಸಹ ಪ್ರಗತಿಯಲ್ಲಿದೆ ಎಂದು ಹೇಳಲಾಗಿದೆ.

|
Google Oneindia Kannada News

ನವದೆಹಲಿ, ಮಾರ್ಚ್ 4: ಪ್ರಧಾನಿ ನರೇಂದ್ರ ಮೋದಿಯವರ ಆಡಳಿತಾವಧಿಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಜಾರಿಯಲ್ಲಿರುವ ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ (ನರೇಗಾ) ಉದ್ಯೋಗವಾಕಾಶಗಳು ಹೆಚ್ಚಾಗಿದ್ದು ಹಳ್ಳಿಗಳಲ್ಲಿದ್ದ ನಿರುದ್ಯೋಗಿಗಳ ಸಂಖ್ಯೆ ಗಣನೀಯವಾಗಿ ಇಳಿದಿದೆ ಎಂದು ಭಾರತೀಯ ಸ್ಟೇಟ್ ಬ್ಯಾಂಕ್ ನ ಸಂಶೋಧನಾ ವಿಭಾಗದ ವರದಿಯೊಂದು ಹೇಳಿದೆ.

ಹಳ್ಳಿಗಾಡುಗಳಲ್ಲಿ ರಸ್ತೆ ನಿರ್ಮಾಣ ಸೇರಿದಂತೆ ಇತರೆ ಕೆಲಸಗಳು ಹೆಚ್ಚು ವೇಗವಾಗಿ ನಡೆದಿರುವುದರಿಂದ ಕಾರ್ಮಿಕರಿಗೆ ಹೆಚ್ಚೆಚ್ಚು ಕೆಲಸ ಸಿಗುವುದರ ಜತೆಗೆ ಗ್ರಾಮೀಣ ಪ್ರದೇಶಗಳಲ್ಲಿನ ಮೂಲ ಸೌಕರ್ಯಗಳೂ ಹೆಚ್ಚಾಗಿವೆ ಎಂದು ವರದಿಯಲ್ಲಿ ಹೇಳಲಾಗಿದೆ.

Unemployment rate falls in Narendra Modi regime

ಇದಲ್ಲದೆ, ಇತ್ತೀಚೆಗೆ ಗ್ರಾಮೀಣ ಪ್ರದೇಶಗಳಲ್ಲಿನ ನಿರೋದ್ಯೋಗಿಗಳ ಪ್ರಮಾಣ ಗಣನೀಯವಾಗಿ ಇಳಿದಿದೆ ಎಂದು ಹೇಳಲಾಗಿದೆ. 2016ರ ಆಗಸ್ಟ್ ಶೇ. 9.5ರಷ್ಟಿದ್ದ ಈ ಪ್ರಮಾಣ, 2017ರ ಫೆಬ್ರವರಿಯ ಹೊತ್ತಿಗೆ ಶೇ. 4.8ಕ್ಕೆ ಇಳಿದಿದೆ ಎಂದು ಹೇಳಲಾಗಿದೆ.

ಅದರಲ್ಲೂ ನಿರುದ್ಯೋಗ ಸಮಸ್ಯೆ ತೀರಾ ಹೆಚ್ಚಿದ್ದ ರಾಜ್ಯಗಳಾದ ಉತ್ತರ ಪ್ರದೇಶದಲ್ಲಿನ ನಿರುದ್ಯೋಗಿಗಳ ಸಂಖ್ಯೆ ಶೇ. 2.9ರಿಂದ ಶೇ. 17.1ಕ್ಕೆ ಇಳಿದಿದ್ದರೆ, ಮಧ್ಯಪ್ರದೇಶದಲ್ಲಿ ಶೇ. 10ರಿಂದ ಶೇ. 2.7ಕ್ಕೆ ಇಳಿದಿದೆ. ಜಾರ್ಖಂಡ್ ನಲ್ಲಿ ಶೇ. 9.5ರಷ್ಟಿದ್ದ ನಿರುದ್ಯೋಗಿಗಳ ಸಂಖ್ಯೆ ಶೇ. 3.1ಕ್ಕೆ ಇಳಿದಿದ್ದು, ಒಡಿಶಾದಲ್ಲಿ ಇದರ ಪ್ರಮಾಣ ಶೇ. 10.2ರಿಂದ ಶೇ. 2.9ಕ್ಕೆ ಹಾಗೂ ಬಿಹಾರದಲ್ಲಿ ಶೇ. 13ರಿಂದ ಶೇ. 3.7ಕ್ಕೆ ಇಳಿದಿದೆ ಎಂದು ಅಂಕಿ-ಅಂಶಗಳ ಸಮೇತ ವಿವರಿಸಲಾಗಿದೆ.

English summary
In Naredra Modi's regime the percentage of rural unemployment has been notably reduced via MNREGA project, says a report prepared by State bank of India's research team. ಪ್ರಧಾನಿ ನರೇಂದ್ರ ಮೋದಿಯವರ ಆಡಳಿತಾವಧಿಯಲ್ಲಿ ನರೇಗಾ ಮೂಲಕ ಹಳ್ಳಿಗಳಲ್ಲಿದ್ದ ನಿರುದ್ಯೋಗಿಗಳ ಸಂಖ್ಯೆ ಗಣನೀಯವಾಗಿ ಇಳಿದಿದೆ ಎಂದು ಎಸ್ ಬಿಐ ವರದಿ ಹೇಳಿದೆ.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X