ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

7 ವೇತನ ಆಯೋಗ ಜಾರಿ: ಕೆಲಸಕ್ಕೆ ಹಿಂದಿರುಗಿದ ಅಂಚೆ ನೌಕರರು

By Nayana
|
Google Oneindia Kannada News

ಬೆಂಗಳೂರು, ಜೂನ್ 4: ಏಳನೇ ವೇತನ ಜಾರಿ ಮಾಡುವ ತೀರ್ಮಾನವನ್ನು ಕೇಂದ್ರ ಸಚಿವ ಸಂಪುಟ ತೆಗೆದುಕೊಂಡ ಹಿನ್ನೆಲೆಯಲ್ಲಿ ಅಂಚೆ ನೌಕರರು ಮುಷ್ಕರ ಕೈಬಿಟ್ಟು ಕೆಲಸಕ್ಕೆ ಮರಳಿದ್ದಾರೆ.

ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಳೆದ 15 ದಿನಗಳಿಂದ ದೇಶಾದ್ಯಂತ ಅಂಚೆ ನೌಕರರು ಪ್ರತಿಭಟನೆ ನಡೆಸುತ್ತಿದ್ದರು. 7ನೇ ವೇತನ ಆಯೋಗದ ಶಿಫಾರಸಿನಂತೆ ಸಂಬಳ ಏರಿಕೆಯಾಗುತ್ತಿರುವುದರಿಂದ ಮುಷ್ಕರ ಕೈಬಿಟ್ಟಿದ್ದಾರೆ. ಗರಿಷ್ಠ ಶೇ.60ರಷ್ಟು ವೇತನ ಹೆಚ್ಚಳ ಆಗಲಿದೆ. ಇದು ನೌಕರರ ವಲಯದಲ್ಲಿ ಸಂಭ್ರಮಕ್ಕೆ ಕಾರಣವಾಗಿದೆ.

ನಾಳೆಯಿಂದ ಅಂಚೆ ಕಚೇರಿಯಲ್ಲಿ ಪೇಮೆಂಟ್ ಬ್ಯಾಂಕಿಂಗ್ ವ್ಯವಸ್ಥೆ ಜಾರಿನಾಳೆಯಿಂದ ಅಂಚೆ ಕಚೇರಿಯಲ್ಲಿ ಪೇಮೆಂಟ್ ಬ್ಯಾಂಕಿಂಗ್ ವ್ಯವಸ್ಥೆ ಜಾರಿ

ಅಂಚೆ ಇಲಾಖೆ ಖಾಯಂ ನೌಕರರಿಗೆ 7ನೇ ವೇತನ ಜಾರಿ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮುಷ್ಕರ ಕೈಗೊಂಡಿದ್ದರು. ದೇಶಾದ್ಯಂತ 3 ಲಕ್ಷಕ್ಕೂ ಹೆಚ್ಚು ನೌಕರರು ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದು, ಇವರಿಗೂ 2016ರಲ್ಲೇ 7 ನೇ ವೇತನ ಜಾರಿಯಾಗಬೇಕಿತ್ತು.

Rural postal workers celebrated ending their strike

ಎರಡು ವರ್ಷವಾದರೂ ವೇತನ ಹೆಚ್ಚಳ ಆಗದ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸುತ್ತಿರುವ ಅಂಚೆ ನೌಕರರ ಸೇವೆ ಖಾಯಂಗೊಳಸಿ, ವೇತನ ತಾರತಮ್ಯ ನಿವಾಸರಿಬೇಕು. ಕಮಲೇಶ್‌ ಚಂದ್ರ ವರದಿಯನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಪ್ರತಿಭಟನೆ ಕೈಗೊಂಡಿದ್ದರು.

English summary
Hundreds of rural postal workers in the state have ended their strike after central cabinet led by prime minister Narendra modi has taken decision that provide salary according to seventh pay commission
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X