ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾನಗರಗಳಿಂದ ಹಳ್ಳಿಗಳಿಗೆ ಶಿಫ್ಟ್ ಆಗುತ್ತಿರುವ ಕೊರೊನಾವೈರಸ್!

|
Google Oneindia Kannada News

ನವದೆಹಲಿ, ಮೇ 12: ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಎರಡನೇ ಅಲೆಯು ಮಹಾನಗರ, ನಗರ ಹಾಗೂ ತಾಲೂಕು ಕೇಂದ್ರಗಳಿಂದ ಗ್ರಾಮೀಣ ಪ್ರದೇಶಗಳಿಗೆ ವ್ಯಾಪಿಸಿದೆ. ನಗರಕ್ಕಿಂತ ಹಳ್ಳಿಗಳಲ್ಲೇ ಅತಿಹೆಚ್ಚು ಕೊವಿಡ್-19 ಸೋಂಕಿತ ಪ್ರಕರಣಗಳು ಪತ್ತೆಯಾಗುತ್ತಿವೆ.

Recommended Video

ಹಳ್ಳಿಗಳಿಗೆ ಶಿಫ್ಟ್ ಆಗುತ್ತಿರುವ ಕೊರೊನಾವೈರಸ್! | Oneindia Kannada

ದೇಶದ 24 ರಾಜ್ಯಗಳ ಪೈಕಿ ಅತಿಹೆಚ್ಚು ಕೊರೊನಾವೈರಸ್ ಸೋಂಕಿತ ಪ್ರಕರಣಗಳು ವರದಿಯಾದ 13 ರಾಜ್ಯಗಳಲ್ಲಿ ಅಂಕಿ-ಅಂಶಗಳು ಹೊಸ ಆತಂಕವನ್ನು ಸೃಷ್ಟಿಸುತ್ತಿದೆ. 13 ರಾಜ್ಯಗಳ ಜಿಲ್ಲಾಕೇಂದ್ರಗಳಲ್ಲಿ ಕೊವಿಡ್-19 ಪ್ರಕರಣಗಳು ಕಡಿಮೆಯಾಗಿದ್ದರೂ, ಸರಾಸರಿ ಸೋಂಕಿತರ ಸಂಖ್ಯೆಯು ಹೆಚ್ಚಾಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಅತಿಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ.

ಭಾರತದ 13 ರಾಜ್ಯದಲ್ಲಿ ಸಕ್ರಿಯ ಪ್ರಕರಣ 1 ಲಕ್ಷಕ್ಕೂ ಅಧಿಕ ಭಾರತದ 13 ರಾಜ್ಯದಲ್ಲಿ ಸಕ್ರಿಯ ಪ್ರಕರಣ 1 ಲಕ್ಷಕ್ಕೂ ಅಧಿಕ

ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 3,48,421 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಇದೇ ಅವಧಿಯಲ್ಲಿ 4,005 ಜನರು ಕೊವಿಡ್-19 ಸೋಂಕಿನಿಂದ ಪ್ರಾಣ ಬಿಟ್ಟಿದ್ದರೆ, ಒಂದೇ ದಿನ 3,55,338 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಒಟ್ಟು 2,33,40,938 ಸೋಂಕಿತ ಪ್ರಕರಣಗಳು ವರದಿಯಾಗಿವೆ. ಈ ಪೈಕಿ ಇದುವರೆಗೂ 1,93,82,642 ಸೋಂಕಿತರು ಗುಣಮುಖರಾಗಿದ್ದು, ಮಹಾಮಾರಿಯಿಂದ ಒಟ್ಟು 2,54,197 ಜನರು ಪ್ರಾಣ ಬಿಟ್ಟಿದ್ದಾರೆ. ಇದರ ಹೊರತಾಗಿ 37,04,099 ಕೊರೊನಾವೈರಸ್ ಸಕ್ರಿಯ ಪ್ರಕರಣಗಳು ಪತ್ತೆಯಾಗಿವೆ. ಕೊವಿಡ್-19 ಎರಡನೇ ಅಲೆಯು ಗ್ರಾಮೀಣ ಪ್ರದೇಶಗಳತ್ತ ಬೀಸುತ್ತಿರುವುದಕ್ಕೆ ಈ ಅಂಕಿ-ಅಂಶಗಳೇ ಸಾಕ್ಷಿಯಾಗಿವೆ.

ರಾಜ್ಯ ಕೊರೊನಾವೈರಸ್ ಪ್ರಕರಣ ಗ್ರಾಮಗಳ ಶೇಕಡಾವಾರು ಪಾಲುದಾರಿಕೆ
ಛತ್ತೀಸ್ ಗಢ 13,578 ಶೇ. 89
ಹಿಮಾಚಲ ಪ್ರದೇಶ 3847 ಶೇ.79
ಬಿಹಾರ 13,405 ಶೇ.76
ಒಡಿಶಾ 10,317 ಶೇ.76
ರಾಜಸ್ಥಾನ 17,537 ಶೇ.72
ಆಂಧ್ರ ಪ್ರದೇಶ 20,369 ಶೇ.72
ಉತ್ತರ ಪ್ರದೇಶ 27,161 ಶೇ.65
ಜಮ್ಮು-ಕಾಶ್ಮೀರ 4,778 ಶೇ.65

ಮಹಾರಾಷ್ಟ್ರದಲ್ಲಿ ಗ್ರಾಮಗಳಿಗೆ ಹರಡಿದ ಕೊರೊನಾವೈರಸ್:

ಕಳೆದ ಏಪ್ರಿಲ್ 9 ರಿಂದ ಮೇ 9ರವರೆಗೂ ರಾಜ್ಯದಲ್ಲಿ ಪ್ರತಿನಿತ್ಯ ಸರಾಸರಿ 54,000ಕ್ಕೂ ಹೆಚ್ಚು ಕೊರೊನಾವೈರಸ್ ಸೋಂಕಿತ ಪ್ರಕರಣಗಳು ವರದಿಯಾಗುತ್ತಿದ್ದವು. ಈ ಪೈಕಿ ಶೇ.32ರಷ್ಟು ಕೊವಿಡ್-19 ಪ್ರಕರಣಗಳು ಗ್ರಾಮೀಣ ಭಾಗದಲ್ಲಿ ವರದಿಯಾಗುತ್ತಿದ್ದವು. ಆದರೆ ಮೇ9ರ ನಂತರದಲ್ಲಿ ಒಟ್ಟು ಸೋಂಕಿತ ಪ್ರಕರಣಗಳಲ್ಲಿ ಶೇ.56ರಷ್ಟು ಪ್ರಕರಣಗಳು ಹಳ್ಳಿಗಳಿಗೆ ಸೇರಿರುವುದು ಗೊತ್ತಾಗಿದೆ.

India: Rural Areas Report Coronavirus Cases More Than Cities

ಛತ್ತೀಸ್ ಗಢದಲ್ಲಿ ಅತಿಹೆಚ್ಚು ಶೇಕಡಾವಾರು ಪ್ರಕರಣಗಳು ಹಳ್ಳಿಗಳಲ್ಲೇ ಪತ್ತೆಯಾಗುತ್ತಿವೆ. ಕರ್ನಾಟಕದಲ್ಲಿ ಕಳೆದ ಒಂದು ತಿಂಗಳ ಅವಧಿಯಲ್ಲಿ ಕೊರೊನಾವೈರಸ್ ಪ್ರಕರಣಗಳ ಸಂಖ್ಯೆಯಲ್ಲಿ ಗ್ರಾಮೀಣ ಪ್ರದೇಶಗಳ ಪಾಲು ಶೇ.25ರಿಂದ 44ಕ್ಕೆ ಏರಿಕೆಯಾಗಿದೆ.

English summary
India: Rural Areas Report Coronavirus Cases More Than Cities.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X