ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂದುವರೆದ ರೂಪಾಯಿ ಅಪಮೌಲ್ಯ, ಡಾಲರ್‌ ಎದುರು ಸಾರ್ವಕಾಲಿಕ ಕುಸಿತ

|
Google Oneindia Kannada News

ನವದೆಹಲಿ, ಅಕ್ಟೋಬರ್ 04: ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ರೂಪಾಯಿ ಮೌಲ್ಯ ದಿನೇ-ದಿನೇ ಕುಸಿತವಾಗುತ್ತಿದ್ದು, ಡಾಲರ್‌ ಎದುರು ದಾಖಲೆಯ 73.81ಕ್ಕೆ ಕುಸಿದಿದೆ.

ಸಾರ್ವಕಾಲಿಕ ದಾಖಲೆಯ 73.34 ರಿಂದ ದಿನದ ವಹಿವಾಟು ಆರಂಭಿಸಿದ ರೂಪಾಯಿ ಬುಧವಾರ ಮಾರುಕಟ್ಟೆ ಅಂತ್ಯವಾಗುವ ವೇಳೆಗೆ 73.81ಕ್ಕೆ ತಲುಪಿತು. ಇದು ಸಾರ್ವಕಾಲಿಕ ದಾಖಲೆಯ ಕುಸಿತವಾಗಿದೆ.

ಡಾಲರ್ ಎದುರು ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ: ಮಾರುಕಟ್ಟೆಯಲ್ಲಿ ಏನಾಗುತ್ತಿದೆ?ಡಾಲರ್ ಎದುರು ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ: ಮಾರುಕಟ್ಟೆಯಲ್ಲಿ ಏನಾಗುತ್ತಿದೆ?

ತೈಲ ಆಮದುದಾರರು ಅಮೆರಿಕದ ಕರೆನ್ಸಿಗೆ ಹೆಚ್ಚು ಬೇಡಿಕೆ ಸಲ್ಲಿಸುತ್ತಿರುವ ಮತ್ತು ಬಂಡವಾಳದ ಹೊರಹರಿವು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರೂಪಾಯಿ ಅಪಮೌಲ್ಯ ಹೆಚ್ಚಾಗುತ್ತಿದೆ ಎಂದು ವಿಶ್ಲೇಷಿಸಲಾಗಿದೆ. ರೂಪಾಯಿ ಮೌಲ್ಯವು ಇನ್ನೂ ಕೆಲವು ವಾರಗಳ ಕಾಲ ಏರಿಕೆ ಆಗುವುದು ಅನುಮಾನ.

Rupee hits lifetime low 73.81 against dollar

ಡಾಲರ್ ಎದುರು ಮತ್ತೆ ಮುಗ್ಗರಿಸಿದ ರೂಪಾಯಿ, 73.33ಕ್ಕೆ ಏರಿಕೆ ಡಾಲರ್ ಎದುರು ಮತ್ತೆ ಮುಗ್ಗರಿಸಿದ ರೂಪಾಯಿ, 73.33ಕ್ಕೆ ಏರಿಕೆ

ಕಚ್ಚಾ ತೈಲ ಮಾರಾಟ ಸಂಸ್ಥೆಗಳಿಗೆ ಪ್ರತ್ಯೇಕ ವ್ಯವಸ್ಥೆ ಮಾಡಿಕೊಡಲು ಆರ್‌ಬಿಐ ವಿಫಲವಾದ ಕಾರಣ ರೂಪಾಯಿ ಮೌಲ್ಯ ಕಳೆದುಕೊಳ್ಳುತ್ತಿದೆ, ಕೇಲವ ರೂಪಾಯಿ ಮಾತ್ರವಲ್ಲ ಇತರ ಎಲ್ಲ ಕರೆನ್ಸಿಗಳು ಡಾಲರ್ ಎದುರು ಮೌಲ್ಯ ಕಳೆದುಕೊಳ್ಳುತ್ತಿವೆ ಎಂದು ಆರ್ಥಿಕ ತಜ್ಞ ವಿ.ಕೆ.ಶರ್ಮಾ ಹೇಳಿದ್ದಾರೆ.

English summary
Indian rupee hits all time low 73.81 against dollar in international market. All other currency also weeken against dollar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X