ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಹುಲ್ ಗಾಂಧಿ ಜೊತೆ ಮದುವೆ? ವದಂತಿ ಸುಳ್ಳು ಎಂದ ಅದಿತಿ!

|
Google Oneindia Kannada News

Recommended Video

ರಾಯ್ ಬರೇಲಿಯ ಶಾಸಕಿ ಅದಿತಿ ಸಿಂಗ್ ಜೊತೆ ರಾಹುಲ್ ಗಾಂಧಿ ಮದುವೆ | ನಿಜವೋ ಸುಳ್ಳೋ?

ಲಕ್ನೋ, ಮೇ 06: "ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮದುವೆ ಆಗುತ್ತಾರಂತೆ ಹೌದಾ?", "ರಾಯ್ ಬರೇಲಿ ಶಾಸಕಿ ಅದಿತಿ ಸಿಂಗ್ ಎಂಬುವವರನ್ನು ರಾಹುಲ್ ಗಾಂಧಿ ಕೈ ಹಿಡಿಯುತ್ತಾರಂತೆ, ನಿಜವೇ!" ಎಂಬಿತ್ಯಾದಿ ವದಂತಿಗಳು ಒಂದೆರಡು ದಿನಗಳಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.

ರಾಯ್ ಬರೇಲಿಯ ಒಂದು ವಾಟ್ಸಾಪ್ ಗ್ರೂಪಿನಿಂದ ಈ ಮೆಸೇಜ್ ಹರಿದಾಡುತ್ತಿತ್ತು. ಮೇ ತಿಂಗಳಿನಲ್ಲಿಯೇ ಇಬ್ಬರೂ ಮದುವೆಯಾಗಲಿದ್ದಾರೆ ಎಂದೆಲ್ಲ ವದಂತಿ ಹಬ್ಬಿಸಲಾಗಿತ್ತು.

ಹೆಣ್ಣು ಮಕ್ಕಳನ್ನು ಬಿಜೆಪಿ ಶಾಸಕರಿಂದ ರಕ್ಷಿಸಿ: ರಾಹುಲ್ ಗಾಂಧಿಹೆಣ್ಣು ಮಕ್ಕಳನ್ನು ಬಿಜೆಪಿ ಶಾಸಕರಿಂದ ರಕ್ಷಿಸಿ: ರಾಹುಲ್ ಗಾಂಧಿ

ಇಬ್ಬರ ಚಿತ್ರವನ್ನೂ ಸಾಮಾಜಿಕ ಮಾಧ್ಯಗಳಲ್ಲಿ ಶೇರ್ ಮಾಡಿ, ಅಭಿನಂದನೆಗಳನ್ನು ಸಲ್ಲಿಸಲಾಗಿತ್ತು. ಹಸಿರು ಸೀರೆಯುಟ್ಟು ಅದಿತಿ ಸಿಂಗ್, ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರೊಂದಿಗೆ ನಿಂತಿರುವ ಚಿತ್ರವೂ ಹರಿದಾಡುತ್ತಿತ್ತು.

ಗಜೇಂದ್ರಗಡದಲ್ಲಿ ರೆಡ್ಡಿ ಸಹೋದರರ ಮೇಲೆ ಬೆಂಕಿ ಉಗುಳಿದ ರಾಹುಲ್ ಗಾಂಧಿಗಜೇಂದ್ರಗಡದಲ್ಲಿ ರೆಡ್ಡಿ ಸಹೋದರರ ಮೇಲೆ ಬೆಂಕಿ ಉಗುಳಿದ ರಾಹುಲ್ ಗಾಂಧಿ

ಆದರೆ ಈ ಎಲ್ಲ ವದಂತಿಯೂ ಸುಳ್ಳು ಎಂದು ಅದಿತಿ ಸಿಂಗ್ ಸ್ಪಷ್ಟಪಡಿಸಿದ್ದಾರೆ.

ರಾಹುಲ್ ಗಾಂಧಿ ನನಗೆ ರಾಖಿ ಸಹೋದರರ

ರಾಹುಲ್ ಗಾಂಧಿ ನನಗೆ ರಾಖಿ ಅಣ್ಣ. ನಾನು ಅವರನ್ನು ಹಿರಿಯ ಸಹೋದರ ಎಂಬಂತೇ ನೋಡುತ್ತೇನೆ. ದಯವಿಟ್ಟು ಇಂಥ ಸುದ್ದಿಗಳನ್ನೆಲ್ಲ ಹಬ್ಬಿಸಬೇಡಿ. ಇಂಥ ಸುದ್ದಿಗಳು ನಮಗೆ ತೀರಾ ನೋವುಂಟುಮಾಡುತ್ತದೆ ಎಂದು ಅದಿತಿ ಸಿಂಗ್ ಮನವಿ ಮಾಡಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಮೂಲವಿಲ್ಲದೆ ಹರಿದಾಡುತ್ತಿರುವ ಇಂಥ ಸುದ್ದಿಗಳನ್ನು ನಂಬಬೇಡಿ ಎಂದು ಅವರು ಹೇಳಿದ್ದಾರೆ. ಈ ಕುರಿತು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಯಾರು ಈ ಅದಿತಿ ಸಿಂಗ್?

29 ವರ್ಷದ ಅದಿತಿ ಸಿಂಗ್ ರಾಯ್ ಬರೇಲಿಯಲ್ಲಿ 90,000 ಮತಗಳ ಅಂತರದಿಂದ ಗೆಲುವು ಸಾಧಿಸಿ ದಾಖಲೆ ಬರೆದಿದ್ದರು. ಅಮೆರಿಕದ ಡ್ಯೂಕ್ ವಿಶ್ವವಿದ್ಯಾಲಯದಲ್ಲಿ ಮ್ಯಾನೇಜ್ ಮೆಂಟ್ ಸ್ಟಡೀಸ್ ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಅದಿತಿ ಸಿಂಗ್ ಕಾಂಗ್ರೆಸ್ ಮುಖಂಡ, ರಾಯ್ ಬರೇಲಿಯಲ್ಲಿ ಐದು ಬಾರಿ ಶಾಸಕರಾಗಿದ್ದ ಅಖಿಲೇಶ್ ಅವರ ಪುತ್ರಿ. ಇವರು ರಾಹುಲ್ ಗಾಂಧಿ ಅವರ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಆತ್ಮೀಯ ಸ್ನೇಹಿತೆಯೂ ಹೌದು.

ಸಾಮಾಜಿಕ ಮಾಧ್ಯಮಗಳಲ್ಲಿ ಸಂಘಿಗಳಿಗೆ ತರಾಟೆ

'ಸಂಘಿಗಳು ತಮ್ಮ ನಿಜವಾದ ಮಟ್ಟ ಯಾವುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ರಾಹುಲ್ ಗಾಂಧಿಯವರು ಮೋದಿ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಲಾಗದ ಅವರು, ಮಹಿಳೆಯ ಹೆಸರನ್ನು ಬಳಸಿಕೊಳ್ಳುತ್ತಿದ್ದಾರೆ' ಎಂದು ಕೌಸಾರಾ ರೆಜಾ ಎಂಬ ಟ್ವಿಟ್ಟಿಗರೊಬ್ಬರು ಟ್ವೀಟ್ ಮಾಡಿದ್ದಾರೆ.

Array

ರಾಹುಲ್ ಗಾಂಧಿ ರಾಯ್ ಬರೇಲಿಗೆ ಹೋಗೋದ್ಯಾಕೆ?!

ಉತ್ತರ ಪ್ರದೇಶದಲ್ಲಿ ಸೋತರೂ, ರಾಹುಲ್ ಗಾಂಧಿಯವರು ಪದೇ ಪದೇ ರಾಯ್ ಬರೇಲಿಗೆ ಯಾಕೆ ಭೇಟಿ ನೀಡುತ್ತಿದ್ದರು ಎಂಬುದು ಈಗ ಗೊತ್ತಾಗುತ್ತಿದೆ ಎಂದು ಟ್ವಿಟ್ಟರ್ ನಲ್ಲಿ ಇನ್ನೊಬ್ಬರು ಹಾಸ್ಯ ಮಾಡಿದ್ದಾರೆ.

English summary
As Congress president Rahul Gandhi is busy in campaigning for Karnataka assembly elections 2018, rumours of his marriage with Raebareli MLA Aditi Singh began doing rounds. But she denaied such rumours.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X